ಚಕ್ರವರ್ತಿರವನ್ನು ಎಲಿಮಿನೇಟ್ ಮಾಡದೇ ಇರುವ ನಿರ್ಧಾರದ ಹಿಂದೆ ಇರುವ ಕಾಣದ ಕಾರಣವಾದರೂ ಏನು ಗೊತ್ತಾ?? ಅಭಿಮಾನಿಗಳು ಫುಲ್ ಗರಂ.

ನಮಸ್ಕಾರ ಸ್ನೇಹಿತರೇ ಇದೀಗ ಬಿಗ್ ಬಾಸ್ ಕಾರ್ಯಕ್ರಮ ಇನ್ನು ಕೇವಲ ಎರಡು ವಾರಗಳ ಮಾತ್ರ ಉಳಿದು ಕೊಂಡಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ, ಇಂತಹ ಸಮಯದಲ್ಲಿ ಮನೆಯಲ್ಲಿ ಇನ್ನು ಸಾಕಷ್ಟು ಮಂದಿ ಇದ್ದಾರೆ ಆದ ಕಾರಣ ಯಾವ ರೀತಿ ಯಾವ ಆಟಗಾರರನ್ನು ಎಲಿಮಿನೇಟ್ ಮಾಡಲಾಗುತ್ತದೆ ಎಂಬುದರ ಕುರಿತು ಪ್ರೇಕ್ಷಕರಿಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಇನ್ನು ಅದೇ ಸಮಯದಲ್ಲಿ ಪ್ರೇಕ್ಷಕರು ಈ ಕೂಡಲೇ ಕೆಲವೊಂದು ಸ್ಪರ್ಧಿಗಳನ್ನು ಮನೆಯಿಂದ ಹೊರ ಹಾಕಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.

ಅದರಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುತ್ತಿರುವ ಅಭಿಪ್ರಾಯಗಳ ಆಧಾರದ ಮೇರೆಗೆ ಮಾತನಾಡುವುದಾದರೆ ಈ ಕೂಡಲೇ ಚಕ್ರವರ್ತಿಚಂದ್ರಚೂಡ್ ಅವರನ್ನು ಮನೆಯಿಂದ ಹೊರಗಡೆ ಕಳಿಸಬೇಕು ಎಂಬುದು ಪ್ರೇಕ್ಷಕರ ಅಭಿಪ್ರಾಯವಾಗಿದೆ. ಇನ್ನು ನಾಮಿನೇಟ್ ಆಗಿರುವ ಕಾರಣ ಖಂಡಿತಾ ಪರೀಕ್ಷಕರು ಚಕ್ರವರ್ತಿ ಚಂದ್ರಚುಡ್ ಅವರನ್ನು ಮನೆಯಿಂದ ಹೊರಕ್ಕೆ ಕಳುಹಿಸುವ ನಿರ್ಧಾರ ಮಾಡಿದ್ದಾರೆ ಎಂಬುದು ಎಲ್ಲರಿಗೂ ಅನಿಸುತ್ತಿರುವ ಅನಿಸಿಕೆ. ಆದರೆ ಇನ್ನು ಮನೆಯಲ್ಲಿ ಸಾಕಷ್ಟು ಸ್ಪರ್ಧಿಗಳು ಉಳಿದು ಕೊಂಡಿದ್ದರೂ ಕೂಡ ಈ ಭಾನುವಾರ ಯಾವುದೇ ಸ್ಪರ್ಧೆಯನ್ನು ಮನೆಯಿಂದ ಹೊರಗಡೆ ಕಳುಹಿಸಿರಲಿಲ್ಲ.

ಇದೇನಪ್ಪಾ ಇದು ಸಾಮಾಜಿಕ ಜಾಲತಾಣಗಳಲ್ಲಿ ಇಷ್ಟೆಲ್ಲ ಚರ್ಚೆ ನಡೆಯುತ್ತಿದೆ ಹಾಗೂ ಬಿಗ್ ಬಾಸ್ ಕಾರ್ಯಕ್ರಮ ಮುಗಿಯುವ ಹಂತಕ್ಕೆ ಬಂದು ತಲುಪಿದೆ ಆದರೂ ಕೂಡ ಸ್ಪರ್ದಿಯನ್ನು ಎಲಿಮಿನೇಷನ್ ಯಾಕೆ ಮಾಡಲಿಲ್ಲ ಎಂಬುದರ ಕುರಿತು ಅಭಿಮಾನಿಗಳು ಫುಲ್ ಗರಂ ಆಗಿದ್ದು, ನಾವೆಲ್ಲ ನೋಡುತ್ತಿದ್ದೇವೆ ಚಕ್ರವರ್ತಿ ರವರನ್ನು ಹೊರಗಡೆ ಕಳುಹಿಸಲು ಕಾಯುತ್ತಿದ್ದೇವೆ ಅದೇ ಕಾರಣಕ್ಕಾಗಿ ಟಿಆರ್ಪಿ ಲೆಕ್ಕಾಚಾರದ ಮೇರೆಗೆ ಇಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒಂದು ಘನತೆ ಇದೇ ಆ ಘನತೆಯನ್ನು ಟಿಆರ್ಪಿ ಲೆಕ್ಕಾಚಾರದಿಂದ ಅಳೆಯಬೇಡಿ ಎಂದು ವಾಹಿನಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಾಹಿನಿಯು ಬಹುಶಹ ಪ್ರೇಕ್ಷಕರಿಗೆ ಕುತೂಹಲ ಹೆಚ್ಚಿಸಲು ನಿರ್ಧಾರ ತೆಗೆದು ಕೊಂಡಿರಬಹುದು ಎಂದು ಅಂದಾಜು ಮಾಡಲಾಗುತ್ತದೆ ಆದರೆ ಹೆಣ್ಣು ಮಗುವಿನ ವಿಚಾರದಲ್ಲಿ ವಾಹಿನಿ ಈ ಮಟ್ಟಕ್ಕೆ ಇಳಿಯಬಾರದಿತ್ತು ಎಂಬುದು ಅಭಿಮಾನಿಗಳ ಪ್ರತಿಕ್ರಿಯೆ. ಇದು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿರುವ ಮಾತುಗಳಾಗಿದ್ದು ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Post Author: Ravi Yadav