ಮಹತ್ವದ ತಿರುವು, ಬಿಗ್ ಬಾಸ್ ಫೈನಲ್ ವಾರಕ್ಕೆ ನೇರವಾಗಿ ಆಯ್ಕೆಯಾದ ಮೊದಲನೇ ಸ್ಪರ್ಧಿ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಸೀಸನ್ 8 ರ ಗ್ರಾಂಡ್ ಫಿನಾಲೆ ಹತ್ತಿರ ಬರುತ್ತಿದ್ದಂತೆ ಮನೆಯಲ್ಲಿ ಚಟುವಟಿಕೆಗಳು ರಂಗೇರುತ್ತಿವೆ. ಸ್ಪರ್ಧಿಗಳ ಅಂತಿಮ ಉತ್ಸಾಹವು ಹೆಚ್ಚಿದ್ದು, ಟಾಸ್ಕ್ ಗಳಲ್ಲಿನ ಪ್ರದರ್ಶನ ಸಹ ಅತ್ಯುತ್ತಮವಾಗಿದೆ. ಈ ವಾರ ಬಿಗ್ ಬಾಸ್ ನೀಡಿದ್ದ ನಾನಾ-ನೀನಾ ಟಾಸ್ಕ್ ನಲ್ಲಿ ಸಹ ಎಲ್ಲಾ ಸ್ಪರ್ಧಿಗಳು ಸಹ ನೀರಿಕ್ಷೆಗೂ ಮೀರಿ ತಮ್ಮ ಕೆಲಸವನ್ನು ಚಾಚೂ ತಪ್ಪದೇ ಮಾಡಿದ್ದಾರೆ. ಮನೆಯ ಕ್ಯಾಪ್ಟನ್ ಆಗಿದ್ದ ದಿವ್ಯಾ ಸುರೇಶ್ ಅಚ್ಚುಕಟ್ಟಾಗಿ ತಮ್ಮ ಜವಾಬ್ದಾರಿ ನಿಭಾಯಿಸಿದ್ದಾರೆ.

ಈ ವಾರ ಬಿಗ್ ಬಾಸ್ ನೀಡಿದ್ದ ನಾನಾ ನೀನಾ ಟಾಸ್ಕ್ ಗಳಲ್ಲಿ ಎಲ್ಲವೂ ವೈಯುಕ್ತಿಕ ಟಾಸ್ಕ್ ಗಳಾಗಿದ್ದವು. ಆದರೇ ಈ ಎಲ್ಲಾ ಟಾಸ್ಕ್ ಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿದ ದಿವ್ಯಾ ಉರುಡುಗ ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಇನ್ನು ಈ ಮೊದಲು ಮನೆಯ ಮೊದಲು ಮಹಿಳಾ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದ ದಿವ್ಯಾ ಉರುಡುಗ, ಈ ವಾರ ಮನೆಯ ಕ್ಯಾಪ್ಟನ್ ಆಗಿ ಸಹ ಆಯ್ಕೆಯಾಗುವ ಮೂಲಕ ಬಿಗ್ ಬಾಸ್ ಸೀಸನ್ – 8 ರ ಫಿನಾಲೆಯನ್ನ ಪ್ರವೇಶಿಸಿದ ಮೊದಲ ಸ್ಪರ್ಧಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಫಿನಾಲೆಗೆ ಹೇಗೆ ಪ್ರವೇಶಿಸಿದ್ದಾರೆ ಎಂದರೇ, ದಿವ್ಯಾ ಉರುಡುಗ ಈ ವಾರ ಕ್ಯಾಪ್ಟನ್ ಆದ ಕಾರಣ ಅವರು ನಾಮಿನೇಷನ್ ನಿಂದ ಹೊರಗುಳಿಯಲಿದ್ದಾರೆ. ಬಿಗ್ ಬಾಸ್ ಫಿನಾಲೆಗೆ ಎರಡೇ ವಾರ ಇರುವುದರಿಂದ, ಕೊನೆಯ ವಾರಕ್ಕೆ ಇವರಿಗೆ ಡೈರೆಕ್ಟ್ ಎಂಟ್ರಿ ಸಿಗಲಿದೆ. ಹಾಗಾಗಿ ದಿವ್ಯಾ ಉರುಡುಗರವರಿಗೆ ಬಿಗ್ ಬಾಸ್ ಸೀಸನ್ 8 ರ ಗ್ರಾಂಡ್ ಫಿನಾಲೆಗೆ ಟಿಕೇಟ್ ಸಿಕ್ಕಿದೆ. ಸದ್ಯ ಮನೆಯಲ್ಲಿರುವ ಅರವಿಂದ್ ಕೆ.ಪಿ, ದಿವ್ಯಾ ಉರುಡುಗ, ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್ ಸಂಬರ್ಗಿ, ವೈಷ್ಣವಿಗೌಡ, ಶುಭಾ ಪೂಂಜಾ ನಾಮಿನೇಟ್ ಆಗಿದ್ದಾರೆ. ಮಂಜು ಪಾವಗಡರವರನ್ನ ಕ್ಯಾಪ್ಟನ್ ದಿವ್ಯಾ ಸುರೇಶ್ ಸೇವ್ ಮಾಡಿದ ಕಾರಣ ಅವರು ಈ ವಾರ ಸೇವ್ ಆಗಿದ್ದಾರೆ. ಸದ್ಯ ಮನೆಯಲ್ಲಿ ಒಂಬತ್ತು ಸದಸ್ಯರಿರುವ ಕಾರಣ ಮುಂದಿನ ವಾರದ ಮಧ್ಯದಲ್ಲಿ ಡಬಲ್ ಎಲಿಮಿನೇಷನ್ ಆಗುವ ಸಾಧ್ಯತೆ ಸಹ ಇದೆ. ಈ ಭಾರಿಯ ಬಿಗ್ ಬಾಸ್ ಸೀಸನ್ -8 ರ ವಿನ್ನರ್ ಯಾರಾಗಬೇಕು ಎಂಬುದನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.

Post Author: Ravi Yadav