ಮನೆಮಂದಿಗೆ ಒಂದಲ್ಲಾ ಎರೆಡೆರಡು ಶಾಕ್ ನೀಡಲು ಮುಂದೆ ಬರಲಿದ್ದಾರೆ ಸುದೀಪ್, ಯಾರ್ಯಾರಿಗೆ ಗೊತ್ತಾ??
ಮನೆಮಂದಿಗೆ ಒಂದಲ್ಲಾ ಎರೆಡೆರಡು ಶಾಕ್ ನೀಡಲು ಮುಂದೆ ಬರಲಿದ್ದಾರೆ ಸುದೀಪ್, ಯಾರ್ಯಾರಿಗೆ ಗೊತ್ತಾ??
ನಮಸ್ಕಾರ ಸ್ನೇಹಿತರೇ ಪ್ರತಿ ಸೀಸನ್ ನಂತೆಯೇ ಬಿಗ್ ಬಾಸ್ ನಲ್ಲಿ ಕೆಲವು ವಿಚಾರಗಳು ಹಾಗೂ ವಿಷಯಗಳು ಪುನರಾವರ್ತನೆಯಾಗುತ್ತಿರುತ್ತವೆ. ಅದರಲ್ಲಿ ಮುಖ್ಯವಾಗಿದ್ದು ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಡಬಲ್ ಎಲಿಮಿನೇಷನ್. ಈ ಸೀಸನ್ 8 ರಲ್ಲಿ ಚಕ್ರವರ್ತಿ ಚಂದ್ರಚೂಡ್, ಪ್ರಿಯಾಂಕಾ ತಿಮ್ಮೇಶ್ ಹಾಗೂ ವೈಜಯಂತಿ ಅಡಿಗ ಈ ಮೂವರು ವೈಲ್ಡ್ ಕಾರ್ಡ್ ಎಂಟ್ರಿ ಥರ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದರು. ಆದರೇ ಒಂದೇ ಒಂದು ಭಾರಿಯೂ ಡಬಲ್ ಎಲಿಮಿನೇಷನ್ ಆಗಿರಲಿಲ್ಲ. ಆದರೇ ಬಿಗ್ ಬಾಸ್ ಗ್ರಾಂಡ್ ಫಿನಾಲೆಗೆ ಇನ್ನು ಹದಿನಾಲ್ಕು ದಿನ ಮಾತ್ರ ಬಾಕಿ ಇರುವ ಕಾರಣ ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದೆ ಎಂಬ ಸೂಚನೆಯನ್ನ ಮನೆಯ ಸದಸ್ಯರಿಗೆ ಬಿಗ್ ಬಾಸ್ ನೀಡಿದ್ದಾರೆ.
ಎರಡನೇ ಇನ್ನಿಂಗ್ಸ್ ಆರಂಭಿಸುವ ಸಮಯದಲ್ಲಿ ಕಿಚ್ಚ ಸುದೀಪ್ ಈ ಎರಡನೇ ಇನ್ನಿಂಗ್ಸ್ ಒಂದು ತಿಂಗಳ ಕಾಲ ನಡೆಯಲಿದೆ ಎಂದಿದ್ದರು. ಈಗ ಮೂಲಗಳ ಪ್ರಕಾರ ಆಗಸ್ಟ್ 8 ರಂದು ಬಿಗ್ ಬಾಸ್ ಗ್ರಾಂಡ್ ಫಿನಾಲೆ ನಡೆಯಲಿದೆ ಎಂದು ಹೇಳಲಾಗಿದೆ. ಹಾಗಾಗಿ ಇನ್ನು ಹದಿನಾಲ್ಕು ದಿನ ಬಾಕಿ ಇರುವ ಕಾರಣ ಮತ್ತು ಮನೆಯಲ್ಲಿ ಒಂಬತ್ತು ಸದಸ್ಯರಿರುವ ಕಾರಣ ಈ ವಾರ ಡಬಲ್ ಎಲಿಮಿನೇಷನ್ ಆಗಬಹುದು ಎಂಬ ಸುದ್ದಿ ಬಿಗ್ ಬಾಸ್ ಮನೆಯ ಕಡೆಯಿಂದ ಬರುತ್ತಿದೆ.
ಈ ವಾರ ಮನೆಯಿಂದ ಹೊರ ಹೊಗುವ ಸದಸ್ಯರಲ್ಲಿ ಪ್ರಶಾಂತ್ ಸಂಬರ್ಗಿ, ದಿವ್ಯಾ ಉರುಡುಗ, ಚಕ್ರವರ್ತಿ ಚಂದ್ರಚೂಡ್, ಶುಭಾ ಪೂಂಜಾ, ಶಮಂತ್ ಗೌಡ ನಾಮಿನೇಟ್ ಆಗಿದ್ದರು. ಆದರೇ ಇದರಲ್ಲಿ ಮನೆಯ ಕ್ಯಾಪ್ಟನ್ ಆದ ದಿವ್ಯಾ ಉರುಡುಗ ಹಾಗೂ ಶಮಂತ್ ಗೌಡ ಸೇವ್ ಆಗಲಿದ್ದಾರೆ ಎಂಬ ಮಾಹಿತಿ ಇದೆ. ಇನ್ನು ಅಂತಿಮ ಸುತ್ತಿಗೆ ಉಳಿಯುವ ಪ್ರಶಾಂತ್ ಸಂಬರ್ಗಿ, ಚಕ್ರವರ್ತಿ ಚಂದ್ರಚೂಡ್ , ಶುಭಾ ಪೂಂಜಾ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.
ಕಳೆದ ವಾರ ಪ್ರಿಯಾಂಕಾ ತಿಮ್ಮೇಶ್ ಗೆ ಅಶ್ಲೀಲ ಸನ್ನೆ ಮಾಡಿದ ಚಕ್ರವರ್ತಿ ಚಂದ್ರಚೂಡ್ ಮನೆಯಿಂದ ಮೊದಲು ಹೊರಹೊಗುವ ನೀರಿಕ್ಷೆ ಇದೆ. ಒಂದು ವೇಳೆ ಡಬಲ್ ಎಲಿಮಿನೇಷನ್ ನಡೆದರೇ ಶಮಂತ್ ಬ್ರೋ ಗೌಡ ಅಥವಾ ಶುಭಾ ಪೂಂಜಾ ಹೊರಹೊಗುವ ನೀರಿಕ್ಷೆ ಇದೆ. ಅಭಿಮಾನಿಗಳ ಪ್ರಕಾರ ಈ ವಾರ ಚಕ್ರವರ್ತಿ ಚಂದ್ರಚೂಡ್ ಮತ್ತು ಶುಭ ಪೂಂಜಾ ಈ ಇಬ್ಬರೂ ಈ ವಾರ ಮನೆಯಿಂದ ಹೊರಹೊಗುವ ಸದಸ್ಯರು ಎಂದು ಹೇಳುತ್ತಿದ್ದಾರೆ. ಈ ವಾರ ಮನೆಯಿಂದ ಯಾವ ಇಬ್ಬರು ಸದಸ್ಯರು ಹೊರಹೋಗಬೇಕು ಎಂಬ ನಿಮ್ಮ ಆಯ್ಕೆಯನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.