ರಾಧಿಕ ರವರು ಸಿನೆಮಾದಿಂದ ದೂರ ಸರಿಯುತ್ತಿರುವಾಗ ಕನ್ನಡಕ್ಕೆ ಮತ್ತೊಬ್ಬರು ರಾಧಿಕಾ ಪಂಡಿತ್ ಸಿಕ್ಕಿದ್ದಾರೆ, ಯಾರು ಗೊತ್ತೇ??
ರಾಧಿಕ್ ರವರು ಸಿನೆಮಾದಿಂದ ದೂರ ಸರಿಯುತ್ತಿರುವಾಗ ಕನ್ನಡಕ್ಕೆ ಮತ್ತೊಬ್ಬರು ರಾಧಿಕಾ ಪಂಡಿತ್ ಸಿಕ್ಕಿದ್ದಾರೆ, ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರತಿಭಾನ್ವಿತ ನಟಿಯರ ಸಂಖ್ಯೆಗೇನು ಕಡಿಮೆಯಾಗಿಲ್ಲ. ಆದರೆ ಕೆಲವೊಮ್ಮೆ ಕೆಲವು ನಟಿಯರು ತಮ್ಮ ವಿಶೇಷ ಪ್ರತಿಭೆಯಿಂದ ಕನ್ನಡಿಗ ವೀಕ್ಷಕರ ಮನವನ್ನು ಗೆದ್ದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮೆಚ್ಚಿನ ನಟಿಯರು ಕನ್ನಡ ಚಿತ್ರರಂಗದಲ್ಲಿ ಕಾಣೆಯಾಗುವ ಸೂಚನೆ ಈಗಾಗಲೇ ಸಿಕ್ಕಿದೆ.
ಹೌದು ನಾವು ಹೇಳಹೊರಟಿರುವ ನಟಿ ಈಗಾಗಲೇ ಕನ್ನಡಿಗರ ಮನದಲ್ಲಿ ಪರಮೆಂಟ್ ಸ್ಥಾನ ಪಡೆದಿದ್ದು ಆದರೂ ಕೂಡ ಈಗ ಕ್ರಮೇಣವಾಗಿ ಚಿತ್ರರಂಗ ತೊರೆಯುವ ಸೂಚನೆ ನೀಡಿದ್ದಾರೆ. ಈಗಾಗಲೇ ನಾವು ಹೇಳುತ್ತಿರುವ ಸುಳಿವುಗಳನ್ನು ನೋಡಿ ನಿಮಗೆ ಈ ನಟಿ ಯಾರನ್ನು ಗೊತ್ತಾಗಿರಬಹುದು. ಹೌದು ನಾವು ಮಾತನಾಡುತ್ತಿರುವುದು ರಾಕಿಂಗ್ ಸ್ಟಾರ್ ಯಶ್ ಅವರ ಪತ್ನಿ ಹಾಗೂ ಸ್ಯಾಂಡಲ್ವುಡ್ನ ಸಿಂಡ್ರೆಲಾ ಎಂದೇ ಖ್ಯಾತಿಯಾಗಿರುವ ರಾಧಿಕಾ ಪಂಡಿತ್ ಅವರ ಬಗ್ಗೆ.
ರಾಧಿಕಾ ಪಂಡಿತ್ ರವರು ಈಗ ಸ್ಟಾರ್ ನಟಿಯಾಗಿ ಸ್ಯಾಂಡಲ್ವುಡ್ನಲ್ಲಿ ಮಿಂಚುತ್ತಿರಬಹುದು. ಆದರೆ ಒಂದು ಕಾಲದಲ್ಲಿ ಅವರು ಕೂಡ ಈ ಸ್ಥಾನಕ್ಕೆ ಬರಲು ಹಲವಾರು ಕಷ್ಟಪಟ್ಟಿದ್ದಾರೆ. ಮೊದಲಿಗೆ ಕಿರುತೆರೆಯಲ್ಲಿ ಸಹಾಯಕ ನಟಿಯಾಗಿ ನಟಿಸಿ ನಂತರದ ದಿನಗಳಲ್ಲಿ ಸ್ಯಾಂಡಲ್ವುಡ್ಗೆ ಕಾಲಿಟ್ಟ ನಟಿ ರಾಧಿಕಾ ಪಂಡಿತ್. ಮೊದಲಿಗೆ ಶಶಾಂಕ್ ರವರ ನಿರ್ದೇಶನದ ಮೊಗ್ಗಿನ ಮನಸ್ಸು ಚಿತ್ರದಲ್ಲಿ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಚಂದನವನಕ್ಕೆ ಕಾಲಿಟ್ಟರು ನಟಿ ರಾಧಿಕಾ ಪಂಡಿತ್.
ಆದರೆ ಕರಾವಳಿ ತೀರದ ಹುಡುಗಿ ಇಲ್ಲಿ ಕೂಡ ತಮ್ಮ ಪ್ರತಿಭೆ ಮೂಲಕ ವೀಕ್ಷಕರ ಮೆಚ್ಚುಗೆ ಗಳಿಸಿ ಬಹುಬೇಗನೆ ಸ್ಯಾಂಡಲ್ವುಡ್ನ ಭರವಸೆ ನಟಿಯಾಗಿ ಕಾಣಿಸಿಕೊಂಡರು. ಚಂದನವನದಲ್ಲಿ ಅದಾಗಲೇ ಸ್ಟಾರ್ ನಟಿಯರ ದಂಡೇ ಇದ್ದರೂ ಕೂಡ ತಮ್ಮ ವಿಶೇಷ ಪ್ರತಿಭೆಯಿಂದ ತಮ್ಮ ವಿಭಿನ್ನತೆಯನ್ನು ಚಂದನವನದಲ್ಲಿ ಸಾಬೀತುಪಡಿಸಿದ ನಟಿ ರಾಧಿಕಾ ಪಂಡಿತ್. ಇಂದಿನವರೆಗೂ ಸ್ಯಾಂಡಲ್ವುಡ್ನಲ್ಲಿ ರಾಧಿಕಾ ಪಂಡಿತ್ ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿದರು ಇಲ್ಲಿವರೆಗೆ ಒಂದೇ ಒಂದು ವಿವಾದದಲ್ಲಿ ಸಿಲುಕಿಕೊಂಡಿಲ್ಲ.
ಅವರ ಬಗ್ಗೆ ಸ್ಯಾಂಡಲ್ವುಡ್ನಲ್ಲಿ ಯಾವ ನಟರ ಅಥವಾ ಯಾವ ನಟಿಯರ ಹತ್ತಿರ ಕೇಳಿದರೂ ಅವರ ಸಿಂಪಲ್ ಸಿಟಿಯ ಬಗ್ಗೆ ಎಲ್ಲರೂ ಹೊಗಳುತ್ತಾರೆ. ಕೇವಲ ತಮ್ಮ ನಟನೆಯಿಂದ ಮಾತ್ರವಲ್ಲದೇ ತಮ್ಮ ವ್ಯಕ್ತಿತ್ವದಿಂದಲೂ ರಾಧಿಕಾ ಪಂಡಿತ್ ವಿಶೇಷವಾಗಿ ಕಾಣಿಸಿಕೊಳ್ಳುತ್ತಾರೆ. ರಾಧಿಕಾ ಪಂಡಿತ್ ಈಗಾಗಲೇ ಕನ್ನಡದ ಬಹುತೇಕ ಟಾಪ್ ನಟರೊಂದಿಗೆ ನಟಿಸಿ ಎನಿಸಿಕೊಂಡಿದ್ದಾರೆ. ಯಾವುದೇ ಪಾತ್ರವನ್ನಾದರೂ ಸಲೀಸಾಗಿ ನಿರ್ವಹಿಸಬಲ್ಲ ಚಾಕಚಕ್ಯತೆ ನಮ್ಮ ರಾಧಿಕಾ ಪಂಡಿತ್ ಅವರಿಗೆ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ನಿಮಗೆ ತಿಳಿದಂತೆ ರಾಧಿಕಾ ಪಂಡಿತ್ ವಿವಾಹ ಬಾಂಧವ್ಯಕ್ಕೆ ಒಳಪಟ್ಟಿರುವುದು ನಿಮಗೆ ಗೊತ್ತೇ ಇದೆ.
ಹೌದು ತಮ್ಮ ಬಹುಕಾಲದ ಗೆಳೆಯ ರಾಕಿಂಗ್ ಸ್ಟಾರ್ ಯಶ್ ಅವರನ್ನು ಕೆಲ ವರ್ಷಗಳ ಹಿಂದಷ್ಟೇ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನಟಿ ರಾಧಿಕಾ ಪಂಡಿತ್ ಈಗ ಚಿತ್ರರಂಗದಿಂದ ಕ್ರಮೇಣವಾಗಿ ದೂರ ಆಗುವ ಸೂಚನೆ ನೀಡಿದ್ದಾರೆ. ಇದು ರಾಧಿಕಾ ಪಂಡಿತ್ ಅವರ ಅಭಿಮಾನಿಗಳಿಗೆ ಬೇಸರವಾದರೂ ಸದ್ಯದ ಪರಿಸ್ಥಿತಿ ನೋಡಿದರೆ ನಮಗೆ ಕೂಡ ಹಾಗೆ ಅನಿಸುತ್ತಿದೆ. ರಾಧಿಕಾ ಪಂಡಿತ್ ರವರ ನಟನೆಗೆ ಸರಿಗಟ್ಟುವಂತಹ ಇನ್ನೊಬ್ಬ ನಟಿ ಸಿಗುವುದು ಕಷ್ಟವೇ ಆದರೂ ಅಂತಹದೇ ಒಬ್ಬ ನಟಿ ಈಗ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನಾವು ಹೀಗೆ ಹೇಳುತ್ತಿದ್ದೇವೆ ಅಂದಮಾತ್ರಕ್ಕೆ ಅವರು ರಾಧಿಕಾ ಪಂಡಿತ್ ಅವರಷ್ಟೇ ನಟನೆಯಲ್ಲಿ ಪರಿಣಿತರು ಎಂದಲ್ಲ. ಆದರೆ ಒಂದು ವೇಳೆ ರಾಧಿಕಾ ಪಂಡಿತ್ ಅವರು ಚಿತ್ರರಂಗವನ್ನು ಸಂಪೂರ್ಣವಾಗಿ ತೊರೆದರೆ ಅವರ ಪಾತ್ರದ ಅಥವಾ ಅವರ ನಟನೆಯನ್ನು ಈ ನಟಿಯ ನಟನೆಯಲ್ಲಿ ನಾವು ನೋಡಬಹುದು. ಹೌದು ಸ್ಯಾಂಡಲ್ವುಡ್ನ ಸಿಂಡ್ರೆಲ್ಲಾ ಎಂದೇ ಖ್ಯಾತರಾಗಿರುವ ರಾಧಿಕಾ ಪಂಡಿತ್ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಬಹುದಾದ ನಟಿ ಇವರು ಎಂದು ಹೇಳಬಹುದು. ಹೌದು ನಾವು ಮಾತನಾಡುತ್ತಿರುವುದು ಈಗ ಸ್ಯಾಂಡಲ್ವುಡ್ನಲ್ಲಿ ಖ್ಯಾತರಾಗಿರುವ ಯುವ ಹಾಗೂ ಉದಯೋನ್ಮುಖ ನಟಿ ನಿಶ್ವಿಕಾ ನಾಯ್ಡು ರವರ ಬಗ್ಗೆ.
ಅಕಿರಾ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಿಷ್ವಿಕ ನಾಯ್ಡು ಈಗಾಗಲೇ ಕನ್ನಡಿಗರ ಮನಗೆದ್ದು ಒಬ್ಬ ಭರವಸೆ ನಟಿಯಾಗಿ ಮೂಡಿ ಬಂದಿದ್ದಾರೆ. ರಾಧಿಕಾ ಪಂಡಿತ್ ರವರಂತೆ ಸದಾ ಹಸನ್ಮುಖಿ ಹಾಗೂ ಸಿಂಪಲ್ ವ್ಯಕ್ತಿತ್ವವುಳ್ಳ ಪ್ರತಿಭಾವಂತೆ. ರಾಧಿಕಾ ಪಂಡಿತ್ ಅವರ ಸ್ಥಾನವನ್ನು ಯಾವ ನಟಿಯಾದರೂ ತುಂಬಬಹುದು ಎಂದರೆ ಅದು ನಿಷ್ವಿಕ ನಾಯ್ಡು ಎಂದು ಹೇಳಬಹುದು. ಆದರೆ ರಾಧಿಕಾ ಪಂಡಿತ್ ಅವರ ನಟನೆ ಹಾಗೂ ಅವರ ನಗು ಒಂದು ವೇಳೆ ಅವರ ಚಿತ್ರರಂಗವನ್ನು ತೊರೆದರೆ ಅವರ ಅಭಿಮಾನಿಗಳು ಮಿಸ್ ಮಾಡಿಕೊಳ್ಳುವುದು ಖಂಡಿತ. ರಾಧಿಕಾ ಪಂಡಿತ್ ಅವರ ಸ್ಥಾನವನ್ನು ನಿಷ್ವಿಕ ನಾಯ್ಡುರವರು ತುಂಬಬಹುದು ಎಂಬ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.