ನಿಮ್ಮ ಬದುಕು ಬದಲಿಸಬೇಕು ಎಂದರೇ, ಗರುಡ ಪುರಾಣದಲ್ಲಿ ತಿಳಿಸಿರುವ ಈ ಚಿಕ್ಕ ಸಂಗತಿಗಳನ್ನು ತಿಳಿಯಿರಿ.

ನಿಮ್ಮ ಬದುಕು ಬದಲಿಸಬೇಕು ಎಂದರೇ, ಗರುಡ ಪುರಾಣದಲ್ಲಿ ತಿಳಿಸಿರುವ ಈ ಚಿಕ್ಕ ಸಂಗತಿಗಳನ್ನು ತಿಳಿಯಿರಿ.

ನಮಸ್ಕಾರ ಸ್ನೇಹಿತರೇ ಗರುಡ ಪುರಾಣದ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿರುತ್ತದೆ. ಆದರೆ ಇದರಲ್ಲಿತುವ ಉತ್ತಮ ಅಂಶಗಳನ್ನು, ಜೀವನ ಸೂತ್ರಗಳನ್ನು ಅಳವಡಿಸಿಕೊಳ್ಳುವಲ್ಲಿ ಮಾತ್ರ ಜನರು ಎಡವುತ್ತಾರೆ. ಆದರೆ ಸ್ನೇಹಿತರೆ, ಒಮ್ಮೆ ಮಹಾ ವಿಷ್ಣುವಿಗೆ ಸಂಬಂಧಿಸಿದ ಈ ಗರುಡ ಪುರಾಣವನ್ನು ಅರಿತುಕೊಂಡರೆ ಖಂಡಿತವಾಗಿಯೂ ನಿಮಗೆ ಬದುಕುವ ರೀತಿ, ಬದುಕಿನ ಮೌಲ್ಯ ಗೊತ್ತಾಗುತ್ತದೆ. ನೀವು ಅಳವಡಿಸಿಕೊಳ್ಳಬಹುದಾದ ಆ ಐದು ಜೀವನ ಮೌಲ್ಯಗಳಾವವು? ಮುಂದೆ ಓದಿ.

ಮೊದಲನೆಯದಾಗಿ ಏಕಾದಶಿ ದಿನ ಸಾಮಾನ್ಯವಾಗಿ ಉಪವಾಸ ಇರುವುದು. ವಾಡಿಕೆ. ಇಲ್ಲಿ ಉಪವಾಸ ಇರುವುದಕ್ಕೂ ಅದರದ್ದೇ ಆದ ಕಾರಣಗಳಿವೆ. ವರ್ಷದಲ್ಲಿ ಕೆಲವೊಮ್ಮೆಯಾದರೂ ಉಪವಾಸ ಮಾಡುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಉಪವಾಸವನ್ನು ನಿಷ್ಠೆಯಿಂದ, ಭಕ್ತಿಯಿಂದ ಮಾಡಿದರೆ ಅದರ ಪುಣ್ಯ ಲಭಿಸುತ್ತದೆ ಹಾಗೂ ಇದು ಮುಕ್ತಿಯ ಮಾರ್ಗವೂ ಕೂಡ ಎಂದು ಗರುಡ ಪುರಾಣದಲ್ಲಿ ವಿವರಿಸಲಾಗಿದೆ.

ಎರಡನೆಯದಾಗಿ ಸ್ವಚ್ಛತೆಯ ಬಗ್ಗೆಯೂ ಗರುಡ ಪುರಾಣದಲ್ಲಿ ಉಲ್ಲೇಖಗಳಿವೆ. ನೀವು ಸ್ವಚ್ಛವಾಗಿದ್ದು, ಸ್ವಚ್ಛ ಬಟ್ಟೆಗಳನ್ನು ತೊಟ್ಟುಕೊಂಡರೆ ಲಕ್ಷ್ಮೀಯೂ ಒಲಿಯುತ್ತಾಳೆ. ಕೊಳಕು ಬಟ್ಟೆ ಧರಿಸಿಕೊಂಡಿದ್ದರೆ ಇರುವ ಅದೃಷ್ಟವೂ ನಾಶವಾಗುತ್ತದೆ ಎನ್ನುತ್ತದೆ ಗರುಡ ಪುರಾಣ. ಇನ್ನು ಮೂರನೆಯದಾಗಿ ಶತ್ರುಗಳನ್ನು ಎದುರಿಸುವುದು ಒಂದು ಕಲೆಯೇ ಸರಿ. ಅನಗತ್ಯವಾಗಿ ಗುದ್ದಾಡದೇ ಬಹಳ ಬುದ್ದಿವಂತಿಕೆಯಿಂದ ಶತ್ರುಗಳನ್ನು ಸೋಲಿಸಬೇಕು. ಅವರ ಆಲೋಚನೆ ನಡತೆಗೆ ಅನುಗುಣವಾಗಿ ನಾವು ನಮ್ಮ ತಂತ್ರವನ್ನು ರೂಪಿಸಬೇಕು.

ನಾಲ್ಕನೆಯದಾಗಿ ತುಳಸಿ ಗಿಡದ ಮಹತ್ವವನ್ನು ಗರುಡ ಪುರಾಣ ಹೇಳುತ್ತದೆ. ತುಳಸಿ ಗಿಡವನ್ನು ಮನೆಯಲ್ಲಿ ಬೆಳೆಸಿ ನೀರು ಹಾಕುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಜೊತೆಗೆ ತುಳಸಿ ಎಲೆಗಳನ್ನು ತಿನ್ನುವುದು ಅರೋಗ್ಯಕ್ಕೂ ಒಳ್ಳೆಯದು. ಇನ್ನು ಕೊನೆಯದಾಗಿ ದೇವತೆಗಳನ್ನು ಅಥವಾ ಧರ್ಮ ಗ್ರಂಥಗಳನ್ನು ಅವಮಾನಿಸಿದರೆ ನರಕ ಪ್ರಾಪ್ತಿ ಎನ್ನುತ್ತದೆ ಪುರಾಣ. ಒಳ್ಳೆಯವರಿಗೆ ಮೋಸ ಮಾಡುವುದು, ಪುಣ್ಯಕ್ಷೇತ್ರದಲ್ಲಿ ಕೊಳಕು ಮಾಡುವುದು, ಉತ್ತಮರ ದುರುಪಯೋಗ ಇವೆಲ್ಲವೂ ನರಕಕ್ಕೆ ಹೋಗುವ ಮೆಟ್ಟಿಲುಗಳು ಎನ್ನಬಹುದು. ಹಾಗಾಗಿ ಸ್ನೇಹಿತರೆ, ಸತ್ಯವಂತರಾಗಿ, ನೀತಿವಂತರಾಗಿ ಜೀವನ ಸಾಗಿಸಿದರೆ ಬರುಕಿದ್ದಾಗ ಅಷ್ಟೇ ಅಲ್ಲ, ಸತ್ತ ಮೇಲೂ ಸ್ವರ್ಗ ದ ಬಾಗಿಲು ತೆರೆಯುತ್ತದೆ.