ಬಿಗ್ ಬಾಸ್ ಹೋದರೇನಂತೆ ರಾಜೀವ್ ರವರಿಗೆ ಹುಡುಕಿಕೊಂಡು ಬಂದ ಬೆಟ್ಟದಂತಹ ಅದೃಷ್ಟ, ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡದ ಕಿರುತೆರೆಯ ಖ್ಯಾತ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಆರಂಭವಾದ ದಿನದಿಂದಲೂ ಕೂಡ ಕನ್ನಡದ ನಟರಾಗಿರುವ ರಾಜೀವ್ ರವರು ಫೈನಲ್ ವರೆಗೆ ತಲುಪುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅದಕ್ಕೆ ತಕ್ಕಂತೆ ರಾಜೀವ್ ರವರು ಕೂಡ ತಮ್ಮ ನಡವಳಿಕೆಯ ಮೂಲಕ ಜನರ ಮನ ಗೆದ್ದಿದ್ದರು, ಅಷ್ಟೇ ಅಲ್ಲದೆ ಟಾಸ್ಕ್ ಎಂದು ಬಂದಾಗ ಬಹಳ ಅದ್ಭುತವಾದ ಪ್ರದರ್ಶನ ನೀಡಿ ತಮ್ಮನ್ನು ಯಾಕೆ ಫೈನಲ್ ಸ್ಪರ್ಧಿ ಎಂದು ಬಿಂಬಿಸಲಾಗುತ್ತಿದೆ ಎಂಬುದಕ್ಕೆ ಉತ್ತರ ನೀಡಿದ್ದರು.

ಆದರೆ ಗೋಲ್ಡನ್ ಪಾಸ್ ವಿಚಾರದಲ್ಲಿ ರಾಜೀವ್ ರವರು ನಡೆದುಕೊಂಡ ರೀತಿ ಹಾಗೂ ಅಂದು ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ಪ್ರೇಕ್ಷಕರು ಒಂದೇ ವಾರದಲ್ಲಿ ರಾಜೀವ್ ರವರ ವಿರುದ್ಧ ಅಸಮಾಧಾನಗೊಂಡು ಆ ಒಂದು ವಾರ ರಾಜೀವ್ ರವರ ಕೈಬಿಟ್ಟಿದ್ದರು, ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಒಂದು ವಾರ ಸೇಫ್ ಆಗಿದ್ದರೇ ಖಂಡಿತ ರಾಜೀವ್ ರವರು ಫೈನಲ್ನಲ್ಲಿ ಗೆಲ್ಲುವ ನೆಚ್ಚಿನ ಒಬ್ಬ ರಾಗುತ್ತಿದ್ದರು. ಆದರೆ ಅದೃಷ್ಟ ಅವರ ಕೈಹಿಡಿಯಲಿಲ್ಲ ಅವರು ಅರ್ಧಕ್ಕೆ ಮನೆಯಿಂದ ಹೊರ ಬರಬೇಕಾಗಿತ್ತು. ಹೀಗೆ ಎಲ್ಲವೂ ಸರಿ ಹೋಯಿತು ಎಂದು ಕೊಳ್ಳುವಷ್ಟರಲ್ಲಿ ಇಡೀ ಕರ್ನಾಟಕದಲ್ಲಿ ಜನಪ್ರಿಯತೆಯನ್ನು ತಂದುಕೊಂಡ ರಾಜೀವ್ ರವರು ಬಿಗ್ ಬಾಸ್ ಮನೆಯಿಂದ ಹೊರ ಬಂದದ್ದು ನಿಜಕ್ಕೂ ಅಭಿಮಾನಿಗಳಿಗೆ ಬೇಸರ ತರಿಸಿತ್ತು.

ಆದರೆ ಬಿಗ್ ಬಾಸ್ ಅವಕಾಶ ಕೈಚೆಲ್ಲಿದ ಕೆಲವೇ ಕೆಲವು ದಿನಗಳಲ್ಲಿ ಇದೀಗ ರಾಜೀವ್ ರವರಿಗೆ ಹುಡುಕಿಕೊಂಡು ಅದೃಷ್ಟವೆಂದು ಒದಗಿ ಬಂದಿದೆ. ಅದೃಷ್ಟ ಬಿಗ್ ಬಾಸ್ ಗಿಂತ ಕೊಂಚ ದೊಡ್ಡದಾಗಿದ್ದು ಪ್ರತಿಯೊಬ್ಬ ನಟರ ಕನಸು ನನಸಾಗುವ ರೀತಿ ರಾಜೀವ್ ರವರಿಗೆ ಕೂಡ ಬೃಹತ್ ಅವಕಾಶವೊಂದು ದೊರಕಿದೆ. ಈ ಹಿಂದೆ ಸಿನಿಮಾಗಳಲ್ಲಿ ನಟನೆ ಮಾಡಿದ್ದರು ಕೂಡ ರಾಜೀವ್ ರವರು ಈ ಬಾರಿ ಅನಂತನಾಗ್, ಅನಂತ್‌ನಾಗ್, ಸುಧಾ ಬೆಳವಾಡಿ, ಚಿಕ್ಕಣ್ಣ, ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಸಿನಿಮಾದಲ್ಲಿ ನಾಯಕ ನಟನಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ದೊಡ್ಡ ದೊಡ್ಡವರ ಜೊತೆ ಕೆಲಸ ಮಾಡುವ ಅವಕಾಶವನ್ನು ಪಡೆದು ಕೊಂಡಿದ್ದಾರೆ. ಈ ಚಿತ್ರ ಯಶಸ್ವಿಯಾದರೆ ಖಂಡಿತ ರಾಜೀವ್ ರವರ ಜೀವನ ಮತ್ತೊಂದು ಟರ್ನ್ ತೆಗೆದುಕೊಳ್ಳಲಿದೆ, ಆದರೆ ಏನು ಖಂಡಿತ ರಾಜೀವ್ ರವರ ಈ ಸಿನಿಮಾ ಯಶಸ್ಸು ಗೊಳ್ಳುತ್ತದೆ ನಾವು ಕೂಡ ಈ ಕುರಿತು ಸಿನಿಮಾ ಭರ್ಜರಿ ಯಶಸ್ಸು ಕಂಡು, ರಾಜೀವ್ ರವರಿಗೆ ಸಾಲು ಸಾಲು ಚಿತ್ರಗಳಲ್ಲಿ ಅವಕಾಶ ದೊರೆಯಲಿ ಎಂದು ಹಾರೈಸುತ್ತೇವೆ.

Facebook Comments

Post Author: Ravi Yadav