ಯಾವ ಹೋಟೆಲ್ ಗು ಕಮ್ಮಿ ಇಲ್ಲದಂತೆ ಮನೆಯಲ್ಲೇ ರುಚಿ ರುಚಿಯಾದ ಮಟನ್ ಲಿವರ್ ಫ್ರೈ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಮಾಂಸಾಹಾರಿಗಳಲ್ಲಿ ಮಟನ್ ಪ್ರಿಯರೇ ಹೆಚ್ಚು. ಮಟನ್ ನಲ್ಲಿ ಹಲವಾರು ವಿಧದ ಐಟಂಗಳನ್ನ ಮಾಡಬಹುದು. ಬಿಸಿ ಅನ್ನ, ಮುದ್ದೆ, ರೊಟ್ಟಿ ಹೀಗೆ ಯಾವುದೇ ಇರಲಿ, ಮಟನ್ ನಿಂದ ತಯಾರಿಸುವ ಪದಾರ್ಥಗಳು ಒಳ್ಳೆಯ ಕಾಂಬಿನೇಷನ್ ಕೊಡುತ್ತವೆ. ಬನ್ನಿ ಇಂದು ಮನೆಯಲ್ಲೇ ಬಿಸಿ ಬಿಸಿ ಮಟನ್ ಲಿವರ್ ಫ್ರೈ ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ.

ಮಟನ್ ಲಿವರ್ ಫ್ರೈ ಮಾಡಲು ಬೇಕಾಗುವ ಸಾಮಗ್ರಿಗಳು ಈ ಕೆಳಗಿನಂತಿವೆ. ಕಾಲು ಕೆಜಿ ಮಟನ್ ಲಿವರ್, ಎರಡು ದೊಡ್ಡ ಗಾತ್ರದ ಈರುಳ್ಳಿ, ಅಡುಗೆ ಎಣ್ಣೆ, ಕೊತ್ತಂಬರಿ, ಬ್ಲಾಕ್ ಪೆಪ್ಪರ್ ಪುಡಿ -ಒಂದೂವರೆ ಚಮಚ, ಒಂದು ಟೇಬಲ್ ಸ್ಪೂನ್ ಅರಿಶಿನ ಪುಡಿ ಖಾರದ ಪುಡಿ, ಒಂದು ಬಟ್ಟಲು ನಿಂಬೆ ರಸ, ಶುಂಠಿ – ಬೆಳ್ಳುಳ್ಳಿ ಪೇಸ್ಟ್, ಉಪ್ಪು – ರುಚಿಗೆ ತಕ್ಕಷ್ಟು.

ಈಗ ಮಟನ್ ಲಿವರ್ ಫ್ರೈ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ. ಮೊದಲಿಗೆ ಒಂದು ಪ್ಯಾನ್ ತೆಗೆದುಕೊಂಡು , ಅದಕ್ಕೆ ಎಣ್ಣೆ ಹಾಕಿ, ಅದರ ಮೇಲೆ ಉದ್ದುದ್ದ ಕಟ್ ಮಾಡಿದ ಈರುಳ್ಳಿಯನ್ನ ಹಾಕಿ, ಅದು ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿ . ನಂತರ ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಬೆರೆಸಿ, ಹಸಿ ವಾಸನೆ ಹೋಗುವ ತನಕ ಹುರಿಯಿರಿ. ನಂತರ ಶುಚಿಯಾಗಿ ತೊಳೆದ ಮಟನ್ ಲಿವರ್ ನ್ನು ಆ ಮಿಶ್ರಣಕ್ಕೆ ಸೇರಿಸಿ. ಅದರ ಬಣ್ಣ ಬದಲಾಗುವವರೆಗೂ ಪ್ಯಾನ್ ಮೇಲೆ ಫ್ರೈ ಮಾಡುತ್ತಿರಿ. ನಂತರ ಅದಕ್ಕೆ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಖಾರದ ಪುಡಿ, ಬ್ಲಾಕ್ ಪೆಪ್ಪರ್ ಪೌಡರ್ ಈ ಮೂರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಗ್ಯಾಸ್ ಸೀಮ್ ಕಡಿಮೆ ಇಟ್ಟು ಮೂರು-ನಾಲ್ಕು ನಿಮಿಷಗಳ ತನಕ ಆ ಮಿಶ್ರಣವನ್ನ ಬೇಯಲು ಬಿಡಿ. ಮಿಶ್ರಣದಲ್ಲಿರುವ ಲಿವರ್ ಚೆನ್ನಾಗಿ ಬೆಂದ ನಂತರ ಅದನ್ನ ಕೆಳಗಿಳಿಸಿ, ಒಂದು ಬಟ್ಟಲು ನಿಂಬೆ ಹಣ್ಣಿನ ರಸವನ್ನ ಅದಕ್ಕೆ ಸುರಿಯಿರಿ. ನಂತರ ಒಂದು ನಿಮಿಷ ಆ ಮಿಶ್ರಣವನ್ನ ಹುಟ್ಟಾಡಿಸುತ್ತಾ ಸಣ್ಣ ಗ್ಯಾಸ್ ಸೀಮ್ ನೊಂದಿಗೆ ಬೇಯಿಸಿ. ನಂತರ ಅದನ್ನ ಇಳಿಸಿ , ಅದಕ್ಕೆ ಕೊತ್ತಂಬರಿ ಸೊಪ್ಪನ್ನ ಸೇರಿಸಿದರೇ , ಬಿಸಿ ಬಿಸಿ ಮಟನ್ ಲಿವರ್ ಫ್ರೈ ರೆಡಿ.

ಬಿಸಿ ಬಿಸಿ ಅನ್ನಕ್ಕೆ ನೆಂಚಿಕೊಳ್ಳಲು, ಮುದ್ದೆಗೆ ಪಲ್ಯವಾಗಿ, ರೋಟ್ಟಿಗೆ ಪಲ್ಯವಾಗಿ ಸಹ ಇದು ಒಳ್ಳೆಯ ಕಾಂಬಿನೇಷನ್ ಕೊಡುತ್ತದೆ. ಮತ್ತೇಕೆ ತಡ, ಇಂದೇ ಮನೆಯಲ್ಲಿ ಮಟನ್ ಲಿವರ್ ತಂದು ಮಟನ್ ಲಿವರ್ ಫ್ರೈ ಮಾಡಿ ಟೇಸ್ಟ್ ಮಾಡಿ.ಹೇಗಿತ್ತು ಎಂಬ ನಿಮ್ಮ ಅಭಿಪ್ರಾಯವನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Facebook Comments

Post Author: Ravi Yadav