ವಿಷ್ಣುವರ್ಧನ್ ರವರ ಸಮಾಧಿ ಇರುವ ಜಾಗ ಯಾರದ್ದು ಗೊತ್ತಾ?? ಹಾಗೂ ಎಷ್ಟು ಬೆಲೆ ಕೊಟ್ಟು ಖರೀದಿ ಮಾಡಿದ್ದರು ಏನು ಗೊತ್ತೇ??

ವಿಷ್ಣುವರ್ಧನ್ ರವರ ಸಮಾಧಿ ಇರುವ ಜಾಗ ಯಾರದ್ದು ಗೊತ್ತಾ?? ಹಾಗೂ ಎಷ್ಟು ಬೆಲೆ ಕೊಟ್ಟು ಖರೀದಿ ಮಾಡಿದ್ದರು ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ಮಹಾನ್ ಕಲಾವಿದರು ತಮ್ಮ ಕಲಾ ಸೇವೆಯನ್ನು ಮಾಡಿ ಇಂದಿಗೂ ಕೂಡ ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಕೊಂಡಿದ್ದಾರೆ. ಅದು ನಟರಾಗಿ ಇರಲಿ ನಟಿಯರಾಗಿ ಇರಲಿ ಅಥವಾ ಪೋಷಕನಟನ ಆಗಿರಲಿ ಕನ್ನಡ ಪ್ರೇಕ್ಷಕರು ಪ್ರತಿಭೆಯನ್ನು ಗುರುತಿಸಿ ಅವರನ್ನು ತಲೆಯ ಮೇಲೆ ಹೊತ್ತುಕೊಂಡಿದ್ದಾರೆ. ಇಂದು ಕೂಡ ನಾವು ಅಂತಹದೇ ವಿಷಯವನ್ನು ಹೇಳಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಸಾಹಸ ಸಿಂಹ ಡಾ ವಿಷ್ಣುವರ್ಧನ್ ರವರು ಕನ್ನಡದ ಲೆಜೆಂಡರಿ ನಟರ ಲಿಸ್ಟ್ ನಲ್ಲಿ ಕಾಣಿಸಿಕೊಳ್ಳುವ ಅಗ್ರಗಣ್ಯರು.

ಅದೆಷ್ಟೋ ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ನೆಚ್ಚಿನ ನಾಯಕ ಹಾಗೂ ಮೇರುವ್ಯಕ್ತಿತ್ವ ಉಳ್ಳಂತಹ ವ್ಯಕ್ತಿ ಎಂದು ಹೇಳಬಹುದು. ಸಿನಿಮಾದಲ್ಲಿ ಶ್ರೇಷ್ಠಮಟ್ಟದ ನಟನೆಗೆ ಕೂಡ ನಿಜಜೀವನದಲ್ಲಿ ಸರಳ ಹಾಗೂ ಸಿಂಪಲ್ ವ್ಯಕ್ತಿತ್ವದ ಮೂಲಕ ಜನಮಾನಸವನ್ನು ಗೆದ್ದಂತಹ ಒಂದು ಶಕ್ತಿ ಎಂದು ಹೇಳಬಹುದು ವಿಷ್ಣುವರ್ಧನ್ ರವರು. ಇನ್ನು ನಿಮಗೆ ಇಂದು ನಾವು ಹೇಳಲು ಹೊರಟಿರುವ ವಿಷಯವೇನೆಂದರೆ ವಿಷ್ಣುವರ್ಧನ್ ರವರು ಕಾಲವಾದ ನಂತರ ಅವರನ್ನು ಸಮಾ’ಧಿ ಮಾಡಿರುವುದು ಅಭಿಮಾನ್ ಸ್ಟುಡಿಯೋದಲ್ಲಿ.

ಇಂದಿಗೂ ಕೂಡ ಅಭಿಮಾನ್ ಸ್ಟುಡಿಯೋ ವಿಷ್ಣುವರ್ಧನ್ ಅಭಿಮಾನಿಗಳ ಪಾಲಿಗೆ ದೇವಸ್ಥಾನ ಕ್ಕಿಂತಲೂ ಪುಣ್ಯವಾದ ಸ್ಥಳ ಎಂದರೂ ಕೂಡ ತಪ್ಪಾಗಲಾರದು. ಆದರೆ ಈ ಜಾಗಕ್ಕೆ ಎಷ್ಟು ಬೆಲೆ ಆಗಿತ್ತು ಗೊತ್ತಾ ಸ್ನೇಹಿತರೆ ಹೇಳುತ್ತೇವೆ ಬನ್ನಿ. ಸ್ನೇಹಿತರೆ ನಿಜವಾಗಲೂ ಹೇಳಬೇಕೆಂದರೆ ಈ ಜಾಗ ಖ್ಯಾತ ಹಿರಿಯ ನಟ ದಿವಂಗತರಾದ ಬಾಲಣ್ಣನವರದ್ದು. ಇದನ್ನು ಅವರು ಅಂದಿನ ಕಾಲದಲ್ಲೇ 1970 ರಲ್ಲಿ ಸರ್ಕಾರದಿಂದ 20 ಎಕರೆಗೆ ಪ್ರತಿ ಎಕರೆಗೆ 400 ರೂಪಾಯಿಯಂತೆ ಎಲ್ಲ ಖರ್ಚುವೆಚ್ಚಗಳನ್ನು ಸೇರಿಸಿ ಸರಿ ಸುಮಾರು 16 ಸಾವಿರ ರೂಪಾಯಿಗಳಿಗೆ ಖರೀದಿಸಿದ್ದರು. ನೋಡಿದ್ರಲ್ಲ ಸ್ನೇಹಿತರೆ ಇಂತಹ ಕೆಲ ಗೊತ್ತಿಲ್ಲದ ವಿಷಯಗಳು ನಿಮಗೆ ಇಂದಿನ ಈ ಮಾಹಿತಿಯಲ್ಲಿ ತಿಳಿದಿದೆ ಎಂದು ಭಾವಿಸುತ್ತೇವೆ.