ಶ್ರೀಲಂಕಾ ವಿರುದ್ದದ ಏರಡನೇ ಎಕದಿನ ಪಂದ್ಯದಿಂದ ಹೊರಗುಳಿಯುವ ಭಾರತದ ಆಟಗಾರರು ಯಾರು ಗೊತ್ತೇ??
ಶ್ರೀಲಂಕಾ ವಿರುದ್ದದ ಏರಡನೇ ಎಕದಿನ ಪಂದ್ಯದಿಂದ ಹೊರಗುಳಿಯುವ ಭಾರತದ ಆಟಗಾರರು ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿನ್ನೆ ನಡೆದ ಶ್ರೀಲಂಕಾ ವಿರುದ್ದದ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಜಯಗಳಿಸಿದೆ. 263 ರನ್ನುಗಳ ಬೃಹತ್ ಟಾರ್ಗೇಟ್ ನ್ನು ಕೇವಲ 36.5 ಓವರ್ ಗಳಲ್ಲೇ ಮುಗಿಸುವ ಮೂಲಕ ಭಾರತ ತಂಡ ತನ್ನ ಸಾಮರ್ಥ್ಯವನ್ನ ಜಗಜ್ಜಾಹೀರು ಮಾಡಿದೆ. ಸದ್ಯ ಭಾರತ ತಂಡ ಏರಡನೇ ಏಕದಿನ ಪಂದ್ಯವಾಡಲು ಸನ್ನದ್ಧವಾಗಿದೆ. ಈ ಮಧ್ಯೆ ಏರಡನೇ ಏಕದಿನ ಪಂದ್ಯಕ್ಕೆ ಭಾರತದಲ್ಲಿ ಕೆಲವು ಬದಲಾವಣೆಗಳು ಆಗುವ ಸಾಧ್ಯತೆಗಳಿವೆ. ಕಳೆದ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದ ಮನೀಶ್ ಪಾಂಡೆ ಹೇಳಿಕೊಳ್ಳುವಂತಹ ಆಟ ಆಡಲಿಲ್ಲ.
41 ಎಸೆತಗಳಲ್ಲಿ ಒಂದು ಬೌಂಡರಿ, ಒಂದು ಸಿಕ್ಸರ್ ಒಳಗೊಂಡ 26 ರನ್ ಗಳಿಸಿ ಔಟಾಗಿದ್ದರು. ಅವರ ಸ್ಟ್ರೈಕ್ ರೇಟ್ ಕೇವಲ 76 ಮಾತ್ರ. ಹಾಗಾಗಿ ಮುಂದಿನ ಪಂದ್ಯದಲ್ಲಿ ಮನೀಶ್ ಪಾಂಡೆ ಬದಲು , ವಿಕೇಟ್ ಕೀಪರ್ ಬ್ಯಾಟ್ಸಮನ್ ಸಂಜು ಸ್ಯಾಮ್ಸನ್ ಅಥವಾ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ನಿತೀಶ್ ರಾಣಾರವರಿಗೆ ಸ್ಥಾನ ಸಿಗುವ ಸಾಧ್ಯತೆಯಿದೆ. ಇನ್ನು ಈ ಪಂದ್ಯದಲ್ಲಿ ಮೂವರು ಸ್ಪಿನ್ನರ್ ಗಳು ಹಾಗೂ ಇಬ್ಬರು ವೇಗಿಗಳನ್ನ ಒಳಗೊಂಡು ತಂಡ ರಚಿಸಲಾಗಿತ್ತು. ಹಾರ್ದಿಕ್ ಪಾಂಡ್ಯ ಮೂರನೇ ವೇಗಿಯಾಗಿ ಕಾರ್ಯ ನಿರ್ವಹಿಸಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಸ್ಪಿನ್ನರ್ ಒಬ್ಬರನ್ನ ಕೈ ಬಿಟ್ಟು ನವದೀಪ್ ಸೈನಿ ಆಡಬಹುದು.
ಇಲ್ಲವಾದಲ್ಲಿ ವೇಗಿ ದೀಪಕ್ ಚಾಹರ್ ಬದಲಿಗೆ ನವದೀಪ್ ಸೈನಿಯವರನ್ನ ಆಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಸರಣಿ ಗೆದ್ದ ನಂತರವಷ್ಟೇ ಭಾರತ ತಂಡದಲ್ಲಿ ಬದಲಾವಣೆಗಳನ್ನ ಮಾಡುತ್ತದೆ ಎಂದು ಹೇಳಿದರೂ, ನೀರಿಕ್ಷಿತ ಪ್ರದರ್ಶನ ನೀಡದ ಆಟಗಾರರನ್ನು ಕೈ ಬಿಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಏರಡನೇ ಏಕದಿನ ಪಂದ್ಯದಲ್ಲಿ ಆಡುವ ಭಾರತ ತಂಡ ಇಂತಿದೆ – ಶಿಖರ್ ಧವನ್ , ಪೃಥ್ವಿ ಶಾ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ನವದೀಪ್ ಸೈನಿ, ಯುಜವೇಂದ್ರ ಚಾಹಲ್.