ಕಿಚ್ಚನಿಗೆ ಕ್ಲಾಸ್ ತೆಗೆದುಕೊಂಡ ಪ್ರೇಕ್ಷಕರು, ಕಳೆದ ವಾರ ಅದ್ಭುತ ಎಂದಿದ್ದ ಪ್ರೇಕ್ಷಕರು ಈ ವಾರ ಹೀಗೆ ಮಾಡಿದ್ದು ಯಾಕೆ ಗೊತ್ತೇ??
ಕಿಚ್ಚನಿಗೆ ಕ್ಲಾಸ್ ತೆಗೆದುಕೊಂಡ ಪ್ರೇಕ್ಷಕರು, ಕಳೆದ ವಾರ ಅದ್ಭುತ ಎಂದಿದ್ದ ಪ್ರೇಕ್ಷಕರು ಈ ವಾರ ಹೀಗೆ ಮಾಡಿದ್ದು ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಪ್ರತಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪ್ರತಿ ವಾರವೂ ಕೂಡ ನಿರೂಪಕರಾಗಿರುವ ಕಿಚ್ಚ ಸುದೀಪ್ ರವರು ಪ್ರತಿ ವಾರವೂ ಕಿಚ್ಚನ ಚಪ್ಪಾಳೆಯನ್ನು ವಾರ ಪೂರ್ತಿ ಅದ್ಭುತವಾಗಿ ಆಟವಾಡಿದ ಸ್ಪರ್ಧಿಗಳಿಗೆ ನೀಡುವುದು ಮೊದಲಿನಿಂದಲೂ ನಡೆದು ಕೊಂಡು ಬಂದಿರುವ ಪದ್ಧತಿ. ಇನ್ನು ಕಿಚ್ಚ ಸುದೀಪ್ ರವರ ನಿರೂಪಣೆಯ ಬಗ್ಗೆ ಹೇಳಬೇಕು ಎಂದರೆ, ಕನ್ನಡದ ಇನ್ಯಾವುದೇ ನಟರು ಇಷ್ಟು ಅದ್ಭುತವಾಗಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುವುದು ಅಸಾಧ್ಯದ ಮಾತು ಎಂದು ಇವರ ಶೈಲಿಯನ್ನು ನೋಡಿದರೆ ಎಲ್ಲರಿಗೂ ತಿಳಿಯುತ್ತಿದೆ.
ಅದರಲ್ಲಿಯೂ ಕಿಚ್ಚ ಸುದೀಪ್ ರವರು ಹಲವಾರು ಬಾರಿ ತಾವು ನಡೆಸಿ ಕೊಡುವ ರೀತಿಯ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಅದರಂತೆ ಕಳೆದ ವಾರ ಪ್ರಶಾಂತ ಸಂಬರ್ಗಿ ರವರನ್ನು ಮನೆಯ ಸ್ಪರ್ಧಿಗಳ ಟಾರ್ಗೆಟ್ ಮಾಡಿ ಹಿಡಿ ವಾರ ಪೂರ್ತಿ ನಡೆದುಕೊಂಡ ರೀತಿಯ ಕುರಿತು ಪರೋಕ್ಷವಾಗಿ ಚರ್ಚೆ ಮಾಡಿದ ಸುದೀಪ್ ರವರು ಅರವಿಂದ್ ರವರ ಪರವಾಗಿ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಂಡಿದ್ದ ದಿವ್ಯ ಉರುದುಗ ರವರಿಗೆ ಹಾಗೂ ಪ್ರಶಾಂತ್ ರವರ ಮಾತನ್ನು ಕೇಳದ ಮನೆಯ ಮಂದಿಗೆ ಸರಿಯಾದ ಕ್ಲಾಸ್ ತೆಗೆದುಕೊಳ್ಳುವ ಮೂಲಕ ಮತ್ತೊಮ್ಮೆ ತಮ್ಮ ನಿರೂಪಣೆಯ ಮೂಲಕ ಇಡೀ ಕರ್ನಾಟಕದ ಮನೆ ಮಾತಾಗಿದ್ದರು. ಆದರೆ ಇಷ್ಟೆಲ್ಲಾ ಸದ್ದು ಮಾಡಿದ ಕಿಚ್ಚ ಸುದೀಪ್ ರವರು ಈ ವಾರ ಬಿಗ್ ಬಾಸ್ ನಡೆಸಿಕೊಟ್ಟ ರೀತಿಗೆ ಬಾರಿ ಟ್ರೋಲ್ ಗೆ ಗುರಿಯಾಗಿದ್ದಾರೆ.
ಹೌದು ಸ್ನೇಹಿತರೇ ಬಹುಶಹ ನೀವು ಈಗಾಗಲೇ ಶನಿವಾರ ಹಾಗೂ ಭಾನುವಾರ ಎಪಿಸೋಡ್ ಗಳನ್ನು ನೋಡಿರುತ್ತೀರಾ, ಈ ಎಪಿಸೋಡುಗಳಲ್ಲಿ ಕಿಚ್ಚ ಸುದೀಪ್ ರವರು ಚಕ್ರವರ್ತಿ ರವರನ್ನು ತರಾಟೆಗೆ ತೆಗೆದು ಕೊಳ್ಳುತ್ತಾರೆ ಎಂದು ಎಲ್ಲರೂ ಅಂದು ಕೊಂಡಿದ್ದರು ಆದರೆ ಕಿಚ್ಚ ಸುದೀಪ್ ರವರು ಇದು ಅವರ ವೈಯಕ್ತಿಕ ನಿಲುವು ಎಂದು ಸ್ಪಷ್ಟನೆ ನೀಡಿ ಸುಮ್ಮನಾಗಿದ್ದರು. ಇಷ್ಟೇ ಆದರೆ ಯಾರೂ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ಆದರೆ ವಾರ ಪೂರ್ತಿ ಟಾಸ್ಕ್ ನಲ್ಲಿ ಒಂದು ಚೂರು ಕೂಡ ಉತ್ತಮ ಪ್ರದರ್ಶನ ನೀಡದೆ ಇದ್ದರೂ ಹಾಗೂ ಅರಿವಿಲ್ಲದೆ ಮಾಡಿದ ತಪ್ಪಿನಿಂದ ಚಕ್ರವರ್ತಿ ರವರನ್ನು ಪದೇ ಪದೇ ಟಾರ್ಗೆಟ್ ಮಾಡಿದರೂ ಕೂಡ ದಿವ್ಯ ಹುಡುಗ ರವರಿಗೆ ಕಿಚ್ಚನ ಚಪ್ಪಾಳೆಯನ್ನು ನೀಡಿದರು. ಚಕ್ರವರ್ತಿ ರವರು ಮಾಡಿದ್ದು ಸರಿ ಎಂದು ಯಾರೂ ಹೇಳುತ್ತಿಲ್ಲ, ಆದರೆ ದಿವ್ಯ ಸುರೆಶ್ ರವರಿಗೆ ಕಿಚ್ಚನ ಚಪ್ಪಾಳೆ ನೀಡಬಾರದಿತ್ತು ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಅದೇ ಕಾರಣಕ್ಕಾಗಿ ಕಳೆದ ವಾರ ನಾವು ಅದ್ಭುತ ಎಂದು ಹೊಗಳಿದ್ದೆವು ಆದರೆ ಈ ವಾರ ಕಿಚ್ಚ ಸುದೀಪ್ ರವರು ಇದನ್ನು ಉಳಿ ಸಿಕೊಳ್ಳಲಿಲ್ಲ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳು ಕೇಳಿ ಬಂದಿವೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕೂಡ ಕಾಮೆಂಟ್ ಬಾಕ್ಸ್ನಲ್ಲಿ ತಪ್ಪದೇ ತಿಳಿಸಿ.