ಟಿ20 ವಿಶ್ವಕಪ್ ಗೆಲ್ಲಬೆಕೆಂದರೇ ಈ ಇಬ್ಬರೂ ತಂಡದಲ್ಲಿ ಇರಲೇಬೇಕು ಎಂದ ಹರ್ಭಜನ್, ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಟಿ20 ವಿಶ್ವಕಪ್ ಕಾವು ಜೋರಾಗಿ ನಡೆಯುತ್ತಿದೆ. ಈ ಮಧ್ಯೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿರುವ ಕಾರಣ ಲೀಗ್ ಹಂತದಲ್ಲಿಯೇ ಹೈವೋಲ್ಟೇಜ್ ಪಂದ್ಯ ಏರ್ಪಡುವ ಸಾಧ್ಯತೆ ಇರುತ್ತದೆ. ಈ ಮಧ್ಯೆ ಟಿ 20 ವಿಶ್ವಕಪ್ ಗೆ ಭಾರತ ತಂಡದ ರಚನೆ ಬಗ್ಗೆ ಹಲವು ಹಿರಿಯ ಆಟಗಾರರು ತಮ್ಮ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಯೂಟ್ಯೂಬ್ ಸಂದರ್ಶನಗಳಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಭಾರತ ತಂಡದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಸಹ ತಂಡದ ಬಗ್ಗೆ ಕೆಲವು ಸಲಹೆಗಳನ್ನ ನೀಡಿದ್ದಾರೆ.

ಈ ಬಗ್ಗೆ ಮುಕ್ತವಾಗಿ ಮಾತನಾಡಿದ ಭಜ್ಜಿ, ಭಾರತ ವಿಶ್ವಕಪ್‌ ಗೆಲ್ಲಬೇಕಾದರೆ ತಂಡದಲ್ಲಿ ಭಯಮುಕ್ತ ಆಟಗಾರರು ಇರಬೇಕು. ಆತ ಎದುರಾಳಿ ಬೌಲರ್ ಯಾರೇ ಇರಲಿ, ಅದನ್ನು ಗಣನೆಗೆ ತೆಗೆದುಕೊಳ್ಳದೆ, ತಮ್ಮ ಸಾಮರ್ಥ್ಯ ಹಾಗೂ ಸ್ಟ್ರೋಕ್ ಮೇಕಿಂಗ್ ಮೇಲೆ ವಿಶ್ವಾಸವಿಟ್ಟು ಬ್ಯಾಟ್‌ ಬೀಸಬೇಕು. ಅವರ ಅನುಭವದ ಅನುಗುಣವಾಗಿ ಅವರನ್ನು ತಂಡದಿಂದ ಹೊರಗಿಡಬಾರದು. ಆಕ್ರಮಣಕಾರಿ ಆಟಗಾರರನ್ನು ತಂಡದಲ್ಲಿ ಆಡಿಸಲು ಅನುಭವ ಇರುವ ಆಟಗಾರರನ್ನು ಒಂದು ವೇಳೆ ಅಂತಹ ಸಂದರ್ಭ ಬಂದರೂ ಕೈಬಿಡಲು ಟೀಮ್ ಇಂಡಿಯಾ ಆಯ್ಕೆ ಸಮಿತಿ ಮುಂದಾಗಬೇಕು ಎಂದು ಹೇಳಿದರು.

ಅಷ್ಟಕ್ಕೂ ಭಜ್ಜಿ ಹೇಳಿರುವ ಆ ಆಟಗಾರರು ಯಾರು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಬೇರಾರೂ ಅಲ್ಲ. ಭಾರತ ತಂಡದ ಉದಯೋನ್ಮುಖ ಆಟಗಾರರಾದ ಪೃಥ್ವಿ ಶಾ, ಇಶಾನ್ ಕಿಶನ್ ಹಾಗೂ ಸೂರ್ಯ ಕುಮಾರ್ ಯಾದವ್. ಒಂದು ವೇಳೆ ಭಾರತ ಟಿ20 ತಂಡದಲ್ಲಿ ಈ ಮೂವರು ಆಟಗಾರರು ಇದ್ದಿದ್ದೇ ಆದರೇ, ಖಂಡಿತ ಭಾರತ ಟಿ 20 ವಿಶ್ವಕಪ್ ಎತ್ತಿ ಹಿಡಿಯಲಿದೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಐಪಿಎಲ್ ಮುಂದುವರಿದ ಚರಣ ಮುಗಿದ ನಂತರ, ಅಕ್ಟೋಬರ್‌ 17 ರಿಂದ ನವೆಂಬರ್‌ 14ರವರೆಗೆ ದುಬೈ,ಅಬುಧಾಬಿ, ಯು.ಎ.ಇಯಲ್ಲಿ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ನಡೆಯಲಿದೆ. ಕಳೆದವಾರ ಐಸಿಸಿ ಟಿ-20 ವಿಶ್ವಕಪ್ ನ ಗುಂಪುಗಳನ್ನು ಪ್ರಕಟಿಸಿತ್ತು. ಭಾರತವು ಗ್ರೂಪ್ 2 ರಲ್ಲಿ ಸ್ಥಾನ ಪಡೆದಿದ್ದು, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ ಮತ್ತು ರೌಂಡ್ 1 ರಿಂದ ಎರಡು ಕ್ವಾಲಿಫಯರ್​ ತಂಡಗಳು ಗ್ರೂಪ್ 2 ರಲ್ಲಿ ಸ್ಥಾನ ಪಡೆದಿವೆ. ಇನ್ನು ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾಗಳು ಗ್ರೂಪ್ 1 ರಲ್ಲಿ ಸ್ಥಾನ ಪಡೆದಿವೆ. ಮತ್ತು ರೌಂಡ್ 1 ರಿಂದ ಎರಡು ಕ್ವಾಲಿಫಯರ್​ ತಂಡಗಳು ಈ ಗುಂಪನ್ನ ಕ್ವಾಲಿಫೈಯರ್ ನಂತರ ಸೇರಿಕೊಳ್ಳಲಿವೆ.

Post Author: Ravi Yadav