ಧವನ್,ಕಿಶನ್ ಹೆಚ್ಚು ರನ್ನುಗಳಿಸಿದರೂ, ಪೃಥ್ವಿ ಶಾ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದು ಏಕೆ ಗೊತ್ತೇ??

ಧವನ್,ಕಿಶನ್ ಹೆಚ್ಚು ರನ್ನುಗಳಿಸಿದರೂ, ಪೃಥ್ವಿ ಶಾ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದು ಏಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿನ್ನೆ ನಡೆದ ಭಾರತ-ಶ್ರೀಲಂಕಾ ಏಕದಿನ ಪಂದ್ಯದಲ್ಲಿ ಭಾರತ ದಿಗ್ವಿಜಯ ಸಾಧಿಸಿದೆ. 263 ರನ್ನುಗಳ ಬೃಹತ್ ಟಾರ್ಗೇಟ್ ನ್ನು ಇನ್ನು ಹದಿನೈದು ಓವರ್ ಬಾಕಿ ಇರುವ ಮುನ್ನವೇ ಭಾರತ ತಂಡ ಮುಗಿಸಿತ್ತು. ನಾಯಕನ ಆಟವಾಡಿದ ಶಿಖರ್ ಧವನ್ 86 ರನ್ನುಗಳಿಸಿ ಅಜೇಯರಾಗಿ ಉಳಿದರು. ಇವರಿಗೆ ಸೂಕ್ತ ಸಾಥ್ ನೀಡಿದ ಪೃಥ್ವಿ ಶಾ 43 ರನ್, ಪದಾರ್ಪಣೆ ಪಂದ್ಯವಾಡಿದ ಇಶಾನ್ ಕಿಶನ್ 59 ರನ್, ಮನೀಷ್ ಪಾಂಡೆ 26 ರನ್, ಸೂರ್ಯಕುಮಾರ್ ಯಾದವ್ 31 ರನ್ ಗಳಿಸಿದರು.

ಈ ಮಧ್ಯೆ ಕೇವಲ 43 ರನ್ ಗಳಿಸಿದ್ದ ಪೃಥ್ವಿ ಶಾ ರನ್ನ ಮ್ಯಾನ್ ಆಫ್ ದಿ ಮ್ಯಾಚ್ ಹುದ್ದೆಗೆ ಏಕೆ ಪರಿಗಣಿಸಿದರು ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಪೃಥ್ವಿಗಿಂತ ನಾಯಕ ಶಿಖರ್ ಧವನ್ 86 ರನ್ನುಗಳಿಸಿದ್ದರು. ಹೊಸ ಹುಡುಗ ಇಶಾನ್ ಕಿಶನ್ 59 ರನ್ನು ಗಳಿಸಿದ್ದರು. ಆದರೇ ಇವರಿಬ್ಬರನ್ನೂ ಬಿಟ್ಟು ಪೃಥ್ವಿ ಶಾ ಗೆ ಏಕೆ ಆಯೋಜಕರು ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ನೀಡಿದರು ಎಂಬ ಚರ್ಚೆ ಜೋರಾಗಿತ್ತು.

ಈ ಬಗ್ಗೆ ಉತ್ತರಿಸಿರುವ ಕ್ರಿಕೇಟ್ ಪಂಡಿತರು ಪೃಥ್ವಿ ಶಾಗೆ ಏಕೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಒಲಿಯಿತು ಎಂಬುದನ್ನ ಸವಿವರವಾಗಿ ಹೇಳಿದ್ದಾರೆ. ಇನ್ನಿಂಗ್ಸ್ ನ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಗೆ ಇಳಿದ ಪೃಥ್ವಿ ಶಾ, ಮೊದಲ ಓವರ್ ನಲ್ಲೇ ಎರಡು ಬೌಂಡರಿ ಬಾರಿಸಿದರು. ನಂತರದ ಓವರ್ ನಲ್ಲೂ ಮೂರು ಬೌಂಡರಿ ಬಾರಿಸಿ ಗಮನ ಸೆಳೆದರು. ಹೀಗೆ ಪ್ರತಿ ಓವರ್ ನಲ್ಲಿ ಬೌಂಡರಿ ಬಾರಿಸುವ ಮೂಲಕ ಐದನೇ ಓವರ್ ವೇಳೆಗೆ ತಂಡವನ್ನ ಐವತ್ತರ ಗಡಿ ಮುಟ್ಟಿಸಿಬಿಟ್ಟರು. ಇದು ಶ್ರೀಲಂಕಾ ತಂಡದ ಪ್ರಮುಖ ಬೌಲರ್ ಗಳ ಆತ್ಮವಿಶ್ವಾಸವನ್ನ ಕುಂದುವಂತೆ ಮಾಡಿದರು. ಪೃಥ್ವಿ ಶಾ ಆರ್ಭಟಕ್ಕೆ ಶ್ರೀಲಂಕಾ ತಂಡದ ಎಲ್ಲಾ ಬೌಲರ್ ಗಳು ತಮ್ಮ ಮೊನಚನ್ನ ಕಳೆದುಕೊಂಡರು.

ನಿನ್ನೆಯ ಪಂದ್ಯದಲ್ಲಿ ಪೃಥ್ವಿ ಶಾ ಸ್ಟ್ರೈಕ್ ರೇಟ್ 179.16 ಇದ್ದರೇ, ಇಶಾನ್ ಕಿಶನ್ ಸ್ಟ್ರೈಕ್ ರೇಟ್ 140.47.ಇತ್ತು. ಹಾಗಾಗಿ ಇದನ್ನು ಗಮನಿಸಿ ಆಯೋಜಕರು ಪೃಥ್ವಿ ಶಾರನ್ನ ಪಂದ್ಯ ಪುರೋಷತ್ತಮ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು. ಮೂರು ಪಂದ್ಯಗಳ ಸರಣಿಯ ಏರಡನೇ ಪಂದ್ಯ ಜುಲೈ 20 ರಂದು ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಸಹ ಈ ಪಂದ್ಯವನ್ನ ಸುಲಭವಾಗಿ ಜಯಿಸುವ ನೀರಿಕ್ಷೆಯಲ್ಲಿದೆ.