ಪ್ರಿಯಾಂಕ ರವರಿಗೆ ಅಸಭ್ಯವಾಗಿ ಸನ್ನೆ ಮಾಡಿದ ಚಕ್ರವರ್ತಿ ಚಂದ್ರಚೂಡ್ ರವರಿಗೆ ಬಿಗ್ ಬಾಸ್ ಕೊಡೋ ಶಿಕ್ಷೆಯೇನು ಗೊತ್ತಾ??

ಪ್ರಿಯಾಂಕ ರವರಿಗೆ ಅಸಭ್ಯವಾಗಿ ಸನ್ನೆ ಮಾಡಿದ ಚಕ್ರವರ್ತಿ ಚಂದ್ರಚೂಡ್ ರವರಿಗೆ ಬಿಗ್ ಬಾಸ್ ಕೊಡೋ ಶಿಕ್ಷೆಯೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬಿಗ್ ಬಾಸ್ ಸಾಕಷ್ಟು ಯಶಸ್ವಿ ರಿಯಾಲಿಟಿ ಶೋ ಆಗಿ ಮಿಂಚುತ್ತಿದೆ. ಪ್ರತಿಯೊಬ್ಬ ವೀಕ್ಷಕರ ಮನೆ ಮಂದಿ ಕೂತು ನೋಡುವಂತಹ ಪ್ರೋಗ್ರಾಮ್ ಆಗಿಬಿಟ್ಟಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಅಹಿತಕರ ಘಟನೆಗಳು ನಡೆಯುತ್ತಿವೆ. ಅದರಲ್ಲಿ ಸಿಂಹಪಾಲು ಹೊಂದಿರುವುದು ನಮ್ಮ ಚಕ್ರವರ್ತಿ ಚಂದ್ರಚುಡ್ ರವರು. ಹೌದು ಸ್ನೇಹಿತರೆ ಚಕ್ರವರ್ತಿ ಚಂದ್ರಚುಡ್ ರವರ ಹುಚ್ಚಾಟಗಳು ಇನ್ನು ಕಡಿಮೆಯಾಗುವ ಹಂತದಲ್ಲಿ ಕಾಣುತ್ತಿಲ್ಲ.

ಈಗಾಗಲೇ ಸಾಕಷ್ಟು ಬಾರಿ ಕಿಚ್ಚ ಸುದೀಪ್ ರವರು ಎಚ್ಚರಿಕೆ ನೀಡಿದ್ದರೂ ಸಹ ಪದೇ ಪದೇ ಅದೇ ತಪ್ಪನ್ನು ಮರುಕಳಿಸುತ್ತಿದ್ದಾರೆ ಚಕ್ರವರ್ತಿ ಚಂದ್ರಚೂಡ್ ರವರು. ಈ ಹಿಂದೆ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭವಾಗುವುದಕ್ಕಿಂತ ಮುಂಚೆ ಚಕ್ರವರ್ತಿ ಚಂದ್ರಚೂಡ್ ಹಾಗೂ ಅವರ ನಡುವೆ ಎಲ್ಲವೂ ಸರಿಯಾಗಿತ್ತು ಆದರೆ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಆರಂಭವಾದ ಮೇಲೆ ಪ್ರಿಯಾಂಕ ರವರು ಹೊಸ ಮಂತ್ರ ಅವರಿಗೆ ಯಾವಾಗ ಹತ್ತಿರವಾಗ ತೊಡಗಿದರು ಅದು ಚಕ್ರವರ್ತಿ ಚಂದ್ರಚೂಡ್ ಅವರ ಅಸಮಾಧಾನಕ್ಕೆ ಕಾರಣವಾಗಿ ಅವರಿಂದ ದೂರಾದರು. ಈ ಹಿಂದೆಯಷ್ಟೇ ಪ್ರಶಾಂತ್ ರವರ ವಿರುದ್ಧ ಚಕ್ರವರ್ತಿ ಚಂದ್ರಚುಡ್ ರವರು ಕೆಟ್ಟ ಪದಗಳ ಪ್ರಯೋಗ ಮಾಡಿದ್ದರಿಂದ ಬೀಪ್ ಸೌಂಡ್ ಗಳು ಜಾಸ್ತಿ ಕೇಳಿ ಬಂದಿತ್ತು. ಆಗ ಕಿಚ್ಚ ಸುದೀಪ್ ರವರು ನಿಮ್ಮ ವ್ಯಕ್ತಿತ್ವಕ್ಕೆ ಇದು ಸರಿ ಹೊಂದಲ್ಲ ಎಂಬುದನ್ನು ಎಚ್ಚರಿಕೆ ಮೂಲಕ ಚಕ್ರವರ್ತಿ ಚಂದ್ರಚೂಡ್ ಅವರಿಗೆ ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಈಗ ಮತ್ತೆ ಅದೇ ತಪ್ಪನ್ನು ಮರುಕಳಿಸಿದ್ದಾರೆ.

ಹೌದು ಸ್ನೇಹಿತರೆ ಇದೇ ಜುಲೈ 18ರಂದು ಪ್ರಿಯಾಂಕ ರವರು ಎಲಿಮಿನೇಟ್ ಆಗಿ ಹೋಗುವಾಗ ಮುಂದಿನ ವಾರದ ಎಲಿಮಿನೇಷನ್ ಗೆ ಚಕ್ರವರ್ತಿ ಚಂದ್ರಚುಡ್ ರವರನ್ನು ನಾಮಿನೇಟ್ ಮಾಡಿ ಹೋಗಿದ್ದರು. ಆಗ ಚಕ್ರವರ್ತಿ ಚಂದ್ರಚೂಡ್ ರವರು ಪ್ರಿಯಾಂಕ ರವರಿಗೆ ಅಸಭ್ಯವಾಗಿ ಸನ್ನೆ ಮಾಡಿದ್ದರು. ಇದು ಈಗಾಗಲೇ ವೀಕ್ಷಕರಿಗೆ ಅಸಮಧಾನವನ್ನು ಉಂಟುಮಾಡಿದ್ದು, ಮುಂದಿನ ವೀಕೆಂಡಿಗೆ ಕಿಚ್ಚ ಸುದೀಪ್ ರವರಿಂದ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಮಂಗಳಾರುತಿ ಗ್ಯಾರೆಂಟಿ ಅನ್ನೋದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.