ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಮಂಜು ರವರಿಗೆ ಕುಲಾಯಿಸಿದ ಅದೃಷ್ಟ, ಸಂಭಾವನೆ ಹೆಚ್ಚಳ ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ನಿಮಗೆ ತಿಳಿದಂತೆ ಇತ್ತೀಚಿನ ವರ್ಷಗಳಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಸಾಕಷ್ಟು ಪ್ರೇಕ್ಷಕರ ಮನಗೆದ್ದ ಕಾರ್ಯಕ್ರಮವಾಗಿದೆ. ಮಕ್ಕಳಿಂದ ಮುದುಕರವರೆಗೆ ಕುಟುಂಬ ಸಮೇತರಾಗಿ ನೋಡುವ ಕಾರ್ಯಕ್ರಮ ವಾಗಿಬಿಟ್ಟಿದೆ ನಮ್ಮ ಬಿಗ್ ಬಾಸ್. ಈ ಬಾರಿ ಬಿಗ್ ಬಾಸ್ ನಿರೀಕ್ಷೆಗೆ ಮೀರಿ ಎಲ್ಲ ಪ್ರೇಕ್ಷಕರ ಮನೋರಂಜನೆಯ ಕಾರಣವಾಗಿದೆ. ಈ ಬಾರಿಯ ಬಿಗ್ ಬಾಸ್ ಮೊದಲು ಕೆಲಕಾರಣಗಳಿಂದ ಅರ್ಧಕ್ಕೆ ನಿಂತರು ಸಹ ಈಗ ಮತ್ತೊಮ್ಮೆ ಸೆಕೆಂಡಿನಿಂದ ಮೂಲಕ ಪ್ರಾರಂಭವಾಗಿ ಈಗಾಗಲೇ ಎರಡು ವಾರಗಳು ಕೂಡ ಕಳೆದು ಹೋಗಿವೆ.

ಆದರೆ ಈಗ ನಾನು ಹೇಳಲು ಹೊರಟಿರುವ ವಿಷಯವೆಂದರೆ ಕಳೆದ ಬಾರಿ ಮಜಾಭಾರತ ವೇದಿಕೆಯಿಂದ ಆಯ್ಕೆಯಾಗಿ ಬಂದಂತಹ ಮಂಜು ಪಾವಗಡ ಎಲ್ಲರ ನೆಚ್ಚಿನ ಅಭ್ಯರ್ಥಿಗಳಲ್ಲಿ ಒಬ್ಬರಾಗಿ ಬಿಗ್ ಬಾಸ್ ನಲ್ಲಿ ಮಿಂಚುತ್ತಿದ್ದರು. ಅವರ ಕಾಮಿಡಿ ಟೈಮಿಂಗ್ ಹಾಗೂ ದಿವ್ಯ ಸುರೇಶ್ ರವರೊಂದಿಗೆ ಇದ್ದ ಲವ್ವಿಡವ್ವಿ ಎಲ್ಲವೂ ಕೂಡ ಪ್ರೇಕ್ಷಕರನ್ನು ರಂಜಿಸಿತು. ಆದರೆ ನಿಮಗೊಂದು ವಿಷಯ ಗೊತ್ತಾ ಸ್ನೇಹಿತರೆ ಮಂಜು ಪಾವಗಡ ರವರಿಗೆ ಬಿಗ್ ಬಾಸ್ ಪ್ರಾರಂಭವಾದಾಗ ಒಂದು ರೀತಿಯ ಸಂಭಾವನೆ ಇತ್ತು. ನಂತರ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭವಾದ ಮೇಲೆ ಅವರ ಸಂಭಾವನೆಯನ್ನು ಹೆಚ್ಚಳ ಮಾಡಲಾಗಿತ್ತು. ಬನ್ನಿ ಸ್ನೇಹಿತರೆ ಹಾಗಾದರೆ ಅವರಿಗಿದ್ದ ಸಂಭಾವನೆ ಎಷ್ಟು ಹಾಗೂ ಎಷ್ಟು ಹೆಚ್ಚಾಯಿತು ಎಂದು ನಿಮಗೆ ನಾವು ಸಂಪೂರ್ಣ ವಿವರವಾಗಿ ಹೇಳುತ್ತೇವೆ.

ಹೌದು ಸ್ನೇಹಿತರೆ ಕಿರುತೆರೆಯ ಮೂಲಗಳಿಂದ ಬಂದ ಸುದ್ದಿಯ ಪ್ರಕಾರ ಮಂಜು ಪಾವಗಡ ರವರಿಗೆ ಬಿಗ್ಬಾಸ್ ಪ್ರಾರಂಭವಾಗುವಾಗ ವಾರಕ್ಕೆ 35 ಸಾವಿರ ಸಂಭಾವನೆಯನ್ನು ನೀಡಲಾಗುತ್ತಿತ್ತು. ನಂತರದ ದಿನಗಳಲ್ಲಿ ಅವರ ಮನರಂಜನೆ ಹಾಗೂ ನಗೆ ಹನಿಗಳ ಮನೋರಂಜನೆಯ ಮಹಾಪೂರಕ್ಕೆ ಅಭಿಮಾನಿಗಳು ಇನ್ನಷ್ಟು ಹೆಚ್ಚಾದವು ಅವರಿಗೆ ಸಾಕಷ್ಟು ಬೇಡಿಕೆ ಕೂಡ ಉಂಟಾಯಿತು. ಹೀಗಾಗಿ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ನಂತರ ಮಂಜು ಪಾವಗಡ ರವರು ವಾರಕ್ಕೆ 55 ಸಾವಿರ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಇದನ್ನು ಅಲ್ವಾ ಸ್ನೇಹಿತರೆ ಯೋಗವಿದ್ದವರಿಗೆ ಯೋಗ್ಯತೆ ಬರುತ್ತದೆ ಅನ್ನೋದು. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Post Author: Ravi Yadav