ಉತ್ತರಾಣಿ ಗಿಡವನ್ನು ಹೀಗೆ ಬಳಸಿದರೆ ಏನಾಗುತ್ತಾರೆ ಎಂದು ತಿಳಿದರೇ, ಇಂದೇ ಇದನ್ನು ಬಳಸುವ ಕೆಲಸ ಮಾಡುವಿರಿ, ಲಾಭಗಳು ಎಷ್ಟು ಗೊತ್ತೇ??
ಉತ್ತರಾಣಿ ಗಿಡವನ್ನು ಹೀಗೆ ಬಳಸಿದರೆ ಏನಾಗುತ್ತಾರೆ ಎಂದು ತಿಳಿದರೇ, ಇಂದೇ ಇದನ್ನು ಬಳಸುವ ಕೆಲಸ ಮಾಡುವಿರಿ, ಲಾಭಗಳು ಎಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೇ ಉತ್ತರಾಣಿ ಗಿಡದ ಎಲೆಗಳನ್ನು ದೇವರ ಪೂಜೆಗೆ ಅದರಲ್ಲೂ ವಿಶೇಷವಾಗಿ ಗಣಪತಿಗೆ ಅರ್ಪಿಸಲಾಗುತ್ತದೆ. ಹಳ್ಳಿಗಳಲ್ಲಿ ಯಥೇಚ್ಛವಾಗಿ ಸಿಗುವ ಈ ಗಿಡದ ಕಾಂಡ ಹಾಗೂ ಎಲೆ ಅತ್ಯುತ್ತಮ ಔಷಧಿ ಗುಣ ಹೊಂದಿರುವ ಗಿಡವೂ ಹೌದು. ಉತ್ತರಾಣಿ ಗಿಡವನ್ನು ಖರಮಂಜರಿ ಎಂದೂ ಕರೆಯಲಾಗುತ್ತದೆ. ಈಗ ಉತ್ತರಾಣಿ ಗಿಡದ ಆರೋಗ್ಯ ಪ್ರಯೋಜನಗಳು ಯಾವವು, ನೋಡೋಣ.
ಮೊದಲನೆಯದಾಗಿ ಉತ್ತರಾಣಿ ಗಿಡ ಮೂತ್ರಪಿಂಡದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಈ ಗಿಡದ ಎಲೆಗಳನ್ನು ಕಷಾಯ ಮಾಡಿಕೊಂಡು ಕುಡಿಯುವುದರಿಂದ ಮೂತ್ರದಲ್ಲಿ ಕಲ್ಲು ಉಂಟಾಗುವುದಿಲ್ಲ. ಇನ್ನು ಎರಡನೆಯದಾಗಿ ಉತ್ತರಾಣಿ ಗಿಡವನ್ನು ಆಯುರ್ವೇದಿಕ್ ಔಷಧಿ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಇನ್ನು ವಯಸ್ಸಾದವರ ಆರೋಗ್ಯ ಸರಿಯಾಗಿಡಲು ಇದರಿಂದ ತಯಾರಿಸಿದ ಕಾಯಸಿದ್ಧಿ ಔಷಧಿಗಳನ್ನು ಕೊಡಲಾಗುತ್ತದೆ.
ಮೂರನೆಯದಾಗಿ ಉತ್ತರಾಣಿ ಗಿಡಕ್ಕೆ ಚಿಕ್ಕದಾದ ಬೀಜಗಳು ಬಿಡುತ್ತವೆ ಈ ಬೀಜಗಳನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ಹೊಟ್ಟೆ ನೋವು ಉಪಶಮನವಾಗುತ್ತದೆ. ಇನ್ನು ಅಷ್ಟೇ ಅಲ್ಲದೆ ಹಾವು, ಚೇಳು ಅಥವಾ ಇನ್ಯಾವುದೇ ವಿಷಕಾರಿ ಜಂತುಗಳು ಕಚ್ಚಿದಾಗ ಅದು ಕಚ್ಚಿದ ಜಾಗಕ್ಕೆ ಉತ್ತರಾಣಿ ಗಿಡದ ಎಲೆಗಳನ್ನು ಜಜ್ಜಿ ಹಚ್ಚಬೇಕು. ಇದರಿಂದ ತಾತ್ಕಾಲಿಕ ಉಪಶಮನ ಸಿಗುತ್ತದೆ. ಇನ್ನು ಜೇನುತುಪ್ಪದೊಂದಿಗೆ ಉತ್ತರಾಣಿ ಬೇರಿನ ಪುಡಿಯನ್ನು ಮಿಶ್ರಣ ಮಾಡಿ ನೆಕ್ಕಿದರೆ ಅಸ್ತಮಾ ಕೂಡ ಸೀಮಿತದಲ್ಲಿರುತ್ತದೆ.
ಅಷ್ಟೇ ಅಲ್ಲದೆ ಇನ್ನು ಜ್ವರ, ನೆಗಡಿ ಬಂದಿದ್ದರೂ ಕೂಡ ಉತ್ತರಾಣಿ ಎಲೆಯ ಕಷಾಯ ಮಾಡಿ ಕುಡಿಯುವುದು ಅತ್ಯಂತ ಪ್ರಯೋಜನಕಾರಿ. ಚರ್ಮದ ಅಲರ್ಜಿ, ಹುಣ್ಣು ಗಳಂಥ ಸಮಸ್ಯೆಗಳಿದ್ದರೂ ಉತ್ತರಾಣಿ ಗಿಡದಿಂದ ತಯಾರಿಸಿದ ಔಷಧಿಗಳನ್ನು ಬಳಸಬಹುದು. ಉತ್ತರಾಣಿ ಬೇರಿನ ಪುಡಿಯನ್ನು ಮನೆಯಲ್ಲಿ ತಯಾರಿಸಿಟ್ಟುಕೊಳ್ಳಬೇಕು. ಅಜೀರ್ಣದ ಸಮಸ್ಯೆ ಭಾದಿಸಿದಾಗ ಈ ಪುಡಿಯನ್ನು ನೀರಿನೊಂದಿಗೆ ಸೇವಿಸಿದರೆ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ. ಹೀಗೆ ಉತ್ತರಾಣಿ ಗಿಡದ ಪ್ರತಿಯೊಂದು ಭಾಗವೂ ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಇದನ್ನು ಮನೆಯಲ್ಲಿ ಬೆಳೆಸುವುದು ಅಥವಾ ಅದರಿಂದ ತಯಾರಾದ ಆಯುರ್ವೇದಿಕ್ ಔಷಧಿಗಳನ್ನು ತಿಳಿದವರ ಸಲಹೆ ಮೇರೆಗೆ ಸೇವಿಸಬಹುದು.