ಭಾರತ ತಂಡದಲ್ಲಿ ಹುಟ್ಟಿಕೊಂಡಿದ್ದಾನೆ ಮತ್ತೊಬ್ಬ ಸೆಹ್ವಾಗ್ ಎಂದ ಮುರಳೀಧರನ್, ಆ ಸೆಹ್ವಾಗ್ ಯಾರು ಗೊತ್ತೇ??

ಭಾರತ ತಂಡದಲ್ಲಿ ಹುಟ್ಟಿಕೊಂಡಿದ್ದಾನೆ ಮತ್ತೊಬ್ಬ ಸೆಹ್ವಾಗ್ ಎಂದ ಮುರಳೀಧರನ್, ಆ ಸೆಹ್ವಾಗ್ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತದ ಅಳಿಯ, ವಿಶ್ವದ ಸ್ಪಿನ್ ಮಾಂತ್ರಿಕ, ವಿಶ್ವ ಕ್ರಿಕೇಟ್ ನಲ್ಲಿ ಅತಿ ಹೆಚ್ಚು ವಿಕೇಟ್ ಪಡೆದ ಬೌಲರ್ ಅಂದರೇ ಅದು ಮುತ್ತಯ್ಯ ಮುರಳೀಧರನ್. ಈಗ ಸದ್ಯ ಲಂಕಾ ಪ್ರವಾಸದಲ್ಲಿರುವ ಭಾರತ ತಂಡದ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ. ಸಂಪೂರ್ಣ ಅನನುಭವಿ ತಂಡ ಎಂದು ಕರೆಸಿಕೊಂಡಿರುವ ಶ್ರೀಲಂಕಾ ತಂಡದವರಿಗೆ ಮಹತ್ವದ ಟಿಪ್ ಒಂದನ್ನು ನೀಡಿರುವ, ಮುತ್ತಯ್ಯ, ಈ ಆಟಗಾರನ ಬಗ್ಗೆ ನೀವುಗಳು ಎಚ್ಚರದಿಂದಿರಬೇಕು ಎಂಬ ಕಿವಿಮಾತನ್ನ ಹೇಳಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಮುರಳೀಧರನ್, ವಿರೇಂದ್ರ ಸೆಹ್ವಾಗ್ ಭಾರತ ತಂಡಕ್ಕೆ ಬಂದ ನಂತರ ಹೊಡಿಬಡಿ ಆಟಗಾರರ ಸಂಖ್ಯೆ ಏರತೊಡಗಿತು. ಆರಂಭಿಕ ಬ್ಯಾಟ್ಸಮನ್ ಮೊದಲಿನಿಂದಲೇ ಆಕ್ರಮಣ ಆಟಕ್ಕೆ ಇಳಿದರು. ಸದ್ಯ ಲಂಕಾ ಪ್ರವಾಸದಲ್ಲಿರುವ ಭಾರತ ತಂಡದಲ್ಲಿಯೂ ಸಹ ಒಬ್ಬ ಮರಿ ವಿರೇಂದ್ರ ಸೆಹ್ವಾಗ್ ಇದ್ದಾನೆ. ಆತ ಕ್ರೀಸ್ ನಲ್ಲಿ ಇದ್ದಷ್ಟು ಕಾಲ ಪಂದ್ಯ ಭಾರತದ ಕಡೆ ವಾಲಿರುತ್ತದೆ. ಆತ ಔಟ್ ಆದರೇ ಮಾತ್ರ ಲಂಕಾ ಸ್ವಲ್ಪ ನಿಟ್ಟುಸಿರು ಬಿಡಬಹುದು ಎಂದು ಹೇಳಿದ್ದಾರೆ.

ಅಷ್ಟಕ್ಕೂ ಆ ಮರಿ ವಿರೇಂದ್ರ ಸೆಹ್ವಾಗ್ ಯಾರು ಎಂಬ ನಿಮ್ಮ ಪ್ರಶ್ನೆಗೆ ಉತ್ತರ, ಬೇರಾರೂ ಅಲ್ಲ. ಮುಂಬೈನ ಆರಂಭಿಕ ಬ್ಯಾಟ್ಸಮನ್ ಪೃಥ್ವಿ ಷಾ. ಐಪಿಎಲ್ ನಲ್ಲಿ ದೆಹಲಿ ಪರ ಇನ್ನಿಂಗ್ಸ್ ಆರಂಭಿಸುವ ಪೃಥ್ವಿ ಷಾ, ಆಕ್ರಮಣಕಾರಿ ಸ್ವಭಾವದಿಂದ ಬೌಂಡರಿ, ಸಿಕ್ಸರ್ ಭಾರಿಸಿದ ದಾಖಲೆ ಇದೆ. ಇನ್ನು ವಿಜಯ್ ಹಝಾರೆ ಟ್ರೋಫಿಯಲ್ಲಿಯೂ ಸಹ ಕಡಿಮೆ ಎಸೆತಗಳಲ್ಲಿ ಹೆಚ್ಚು ರನ್ ಗಳಿಸುವ ಮೂಲಕ ಮುಂಬೈ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗ ಭಾರತ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವತ್ತ ಕಣ್ಣಿಟ್ಟಿರುವ ಪೃಥ್ವಿ, ಶ್ರೀಲಂಕಾ ಪ್ರವಾಸದಲ್ಲಿ ಖಂಡಿತವಾಗಿಯೂ ಮಿಂಚುವ ಸಾಧ್ಯತೆ ಇದೆ. ಇದರ ಜೊತೆ ಪೃಥ್ವಿ ಷಾ ರ ನೆಚ್ಚಿನ ಕೋಚ್ ರಾಹುಲ್ ದ್ರಾವಿಡ್ ಇರುವುದರಿಂದ, ಪೃಥ್ವಿ ಬ್ಯಾಟಿನಿಂದ ಖಂಡಿತ ದೊಡ್ಡ ಇನ್ನಿಂಗ್ಸ್ ಬರಲಿದೆ. ಹಾಗಾಗಿ ಶ್ರೀಲಂಕಾ ಬೌಲರ್ ಗಳು ಆದಷ್ಟು ಬೇಗ ಪೃಥ್ವಿ ಷಾ ರನ್ನ ಪೆವಿಲಿಯನ್ ಗೆ ಕಳಿಸದೇ ಇದ್ದರೇ ಪಂದ್ಯ ಕೈ ಬಿಟ್ಟಂತೆ ಎಂದು ಮಾಂತ್ರಿಕ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅಭಿಪ್ರಾಯಪಟ್ಟಿದ್ದಾರೆ.

ಟೆಸ್ಟ್ ಹಾಗೂ ಏಕದಿನ ಪಂದ್ಯವನ್ನು ಆಡಿರುವ ಪೃಥ್ವಿ ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡಿಸ್ ವಿರುದ್ದ ಶತಕಗಳಿಸಿ ಮಿಂಚಿದ್ದರು. ಆಸ್ಟ್ರೇಲಿಯಾ ಪ್ರವಾಸದ ಕಳಪೆ ಫಾರ್ಮ್ ನಿಂದ ತಂಡದಿಂದ ಹೊರ ಬಿದ್ದಿದ್ದರು. ಈಗ ತಂಡಕ್ಕೆ ವಾಪಾಸ್ ಆಗುವ ಅವಕಾಶಕ್ಕೆ ಕಾಯುತ್ತಿರುವ ಪೃಥ್ವಿಗೆ ಶ್ರೀಲಂಕಾ ಪ್ರವಾಸ ವರದಾನವಾಗಲಿದೆ. ಪೃಥ್ವಿ ಷಾ ಮೇಲೆ ತಂಡ ಯಾವುದೇ ಒತ್ತಡ ಹೇರದೇ, ಅವರ ನಾರ್ಮಲ್ ಗೇಮ್ ಆಡಲು ಅವಕಾಶ ನೀಡಬೇಕು ಎಂದು ಮುತ್ತಯ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುತ್ತಯ್ಯ ಮುರಳೀಧರನ್ ರವರ ಈ ಹೇಳಿಕೆ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.