ಕೋಡಿಹಳ್ಳಿ ಚಂದ್ರಶೇಖರ್ ಗೆ ಮತ್ತೊಂದು ಶಾಕ್, ಮತ್ತೊಮ್ಮೆ ಬಯಲಾಯಿತು ಕೋಡಿಹಳ್ಳಿ ಅಸಲಿ ಮುಖ, ಏನು ಗೊತ್ತಾ??

ಕೋಡಿಹಳ್ಳಿ ಚಂದ್ರಶೇಖರ್ ಗೆ ಮತ್ತೊಂದು ಶಾಕ್, ಮತ್ತೊಮ್ಮೆ ಬಯಲಾಯಿತು ಕೋಡಿಹಳ್ಳಿ ಅಸಲಿ ಮುಖ, ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕರ್ನಾಟಕ ಹಾಗೂ ಬೆಂಗಳೂರು ಬಹಳಷ್ಟು ನಂಬಿಕೊಂಡಿರುವುದೇ ಸಮೂಹ ಹಾಗೂ ಸಾರ್ವಜನಿಕ ಸಾರಿಗೆಯನ್ನ. ಒಂದು ದಿನ ಬಸ್ಸುಗಳು ಓಡಾಡದಿದ್ದರೇ, ಜನ-ಜೀವನ ಸಂಪೂರ್ಣ ಅಸ್ಥವ್ಯಸ್ಥವಾಗಿಬಿಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕಳೆದ ಏಪ್ರೀಲ್ ತಿಂಗಳಲ್ಲಿ ಬರೋಬ್ಬರಿ 15 ದಿನಗಳ ಕಾಲ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಮುಷ್ಕರ ಹೂಡಿದ್ದರು. ರಾಜ್ಯಾದ್ಯಂತ ಬಸ್ಸುಗಳು ಸಂಚರಿಸಲಿಲ್ಲ. ಈ ಮುಷ್ಕರದ ನೇತೃತ್ವವನ್ನ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಹಿಸಿಕೊಂಡಿದ್ದರು. ಕೊನೆಗೆ ಹೈಕೋರ್ಟ್ ಮಧ್ಯಪ್ರವೇಶಿಸಿದ ನಂತರ ಮುಷ್ಕರವನ್ನ ಹಿಂಪಡೆಯಲಾಗಿತ್ತು.

ಈ ಮಧ್ಯೆ ಸರ್ಕಾರ ಹಾಗೂ ಸಂಸ್ಥೆಯ ಸಿಬ್ಬಂದಿಗಳ ನಡುವಿನ ಜಟಾಪಟಿಯಲ್ಲಿ ಉದ್ದಟತನ ತೋರಿದ್ದ ಹಲವಾರು ಜನ ಸಿಬ್ಬಂದಿಗಳು ಅಮಾನತ್ತಿಗೆ ಒಳಗಾಗಿದ್ದರು. ಈಗ ಸಾರಿಗೆ ನೌಕರರು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದ ತಿರುಗಿ ಬಿದ್ದಿದ್ದಾರೆ. ಸಾರಿಗೆ ನೌಕರರ ಸಂಘದ ಆನಂದ್ ಮಾತನಾಡಿ, ಕೋಡಿಹಳ್ಳಿ ತಾವಾಗೆ ಬಂದು ನಮ್ಮ ಸಂಘಟನೆ ಸೇರಿದರು. ನಾವು ಅವರ ಗೌರವಕ್ಕಾಗಿ ಅವರನ್ನ ಗೌರವಾಧ್ಯಕ್ಷರನ್ನಾಗಿ ಮಾಡಿದೆವು. ಅವರು ಮಾಧ್ಯಮಗಳಲ್ಲಿ ಆಗಾಗ ಮುಷ್ಕರದ ಹೇಳಿಕೆಗಳನ್ನ ನೀಡಿ ಜನರ ಆಕ್ರೋಶ ನಮ್ಮತ್ತ ಬರಲು ಕಾರಣೀಭೂತರಾದರು.

ಮುಷ್ಕರದಿಂದ ಅಮಾನಾತದವರು ಹಾಗೂ ಕೆಲಸ ಕಳೆದುಕೊಂಡವರ ನೆರವಿಗೂ ಕೋಡಿಹಳ್ಳಿ ಬರಲಿಲ್ಲ. ಕೋಡಿಹಳ್ಳಿ ಚಂದ್ರಶೇಖರ್ ರವರ ಏಕಪಕ್ಷೀಯ ನಿರ್ಧಾರಗಳಿಂದಲೇ ಎರಡೆರೆಡು ಬೃಹತ್ ಸಾರಿಗೆ ಮುಷ್ಕರಗಳು ವಿಫಲಗೊಂಡಿವೆ. ಈಗ ಮತ್ತೊಮ್ಮೆ ಮುಷ್ಕರ ಆರಂಭಿಸಿ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಈಗ ಸದ್ಯ ನಾಲ್ಕು ನಿಗಮಗಳ ಒಕ್ಕೂಟ ರಚಿಸಿಕೊಂಡು , ಕೋಡಿಹಳ್ಳಿ ಚಂದ್ರಶೇಖರ್ ಗುಂಪಿನಿಂದ ಹೊರಬಂದಿದ್ದೆವೆ. ನಾವಿಗ ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವರನ್ನ ಭೇಟಿ ಮಾಡಿ ನಮ್ಮ ಮನವಿ ಸಲ್ಲಿಸಿದ್ದೆವೆ. ಅಮಾನತು ಆದವರನ್ನ ಪುನಃ ಕೆಲಸಕ್ಕೆ ತೆಗೆದುಕೊಳ್ಳಲು ಕೇಳಿಕೊಂಡಿದ್ದೆವೆ. ಇನ್ನು ಮುಂದೆ ಕೋಡಿಹಳ್ಳಿ ಚಂದ್ರಶೇಖರ್ ರವರು ಕರೆ ನೀಡುವ ಯಾವುದೇ ಮುಷ್ಕರಗಳಿಗೂ ನಾಲ್ಕು ನಿಗಮದ ಸಾರಿಗೆ ನೌಕರರು ಬೆಂಬಲಿಸುವುದಿಲ್ಲ ಎಂದು ತಿಳಿಸಿದರು.

ಒಟ್ಟಿನಲ್ಲಿ ಹರುಷದ ಕೂಳಿಗಾಗಿ ವರುಷದ ಕೂಳನ್ನು ಬಿಟ್ಟರು ಎಂಬ ಗಾದೆಮಾತು ಸಾರಿಗೆಯ ನಾಲ್ಕು ನಿಗಮದ ನೌಕರರಿಗೆ ಅನ್ವಯಿಸುತ್ತದೆ. ಮುಷ್ಕರಗಳಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗಿದೆ. ಈಗ ನೌಕರರು ಅತ್ತದರೆ ,ಇತ್ತ ಪುಲಿ ಎಂಬ ಸ್ಥಿತಿಯಲ್ಲಿ ಇದ್ದಾರೆ. ಹಾಗಾಗಿ ಕೋಡಿಹಳ್ಳಿ ಚಂದ್ರಶೇಖರ್ ರವರ ಸಹವಾಸದಿಂದ ಹೊರಬಂದಿದ್ದಾರೆ. ಸಾರಿಗೆಯ ನಾಲ್ಕು ನಿಗಮಗಳ ನೌಕರರ ಈ ನಿರ್ಧಾರದ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.