ವಿವಾದಾತ್ಮಕ ಕೋಚ್ ಗ್ರೆಗ್ ಚಾಪೆಲ್ ಬಗ್ಗೆ ಸುರೇಶ್ ರೈನಾ ಹೇಳಿದ ಶಾಕಿಂಗ್ ನ್ಯೂಸ್ ಏನು ಗೊತ್ತೇ??

ವಿವಾದಾತ್ಮಕ ಕೋಚ್ ಗ್ರೆಗ್ ಚಾಪೆಲ್ ಬಗ್ಗೆ ಸುರೇಶ್ ರೈನಾ ಹೇಳಿದ ಶಾಕಿಂಗ್ ನ್ಯೂಸ್ ಏನು ಗೊತ್ತೇ??

ನಮಸ್ಕರ ಸ್ನೇಹಿತರೇ ಗುರು ದ್ರೋಣಾಚಾರ್ಯ, ಇದು ಭಾರತದಲ್ಲಿ ಕೋಚ್ ಗಳಿಗೆ ನೀಡುವ ಪ್ರಶಸ್ತಿ. ಪ್ರತಿಯೊಂದು ತಂಡದಲ್ಲಿಯೂ ತಂಡ ಉತ್ತಮ ಪ್ರದರ್ಶನ ನೀಡಬೇಕು ಎಂದರೇ ಕೋಚ್ ಗಳ ಪಾತ್ರ ಪ್ರಮುಖವಾಗಿರುತ್ತದೆ. ಅದೇ ರೀತಿ ಭಾರತ ಕ್ರಿಕೇಟ್ ತಂಡದ ಕೋಚ್ ಗಳು ಸಹ ಹಲವಾರು ಭಾರಿ ಜನರ ಗಮನ ಸೆಳೆದಿದ್ದಾರೆ. ಭಾರತೀಯ ಕ್ರಿಕೇಟ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್ ಯಶಸ್ವಿ ಕೋಚ್ ಎಂದಾದರೇ, ಗ್ರೇಗ್ ಚಾಪೆಲ್ ರನ್ನ ಬಹಳಷ್ಟು ಕಳಪೆ ಕೋಚ್ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೇ ಈಗ ಭಾರತೀಯ ಕ್ರಿಕೇಟ್ ತಂಡದ ಯಶಸ್ವಿ ಆಟಗಾರ ಸುರೇಶ್ ರೈನಾ ಇತ್ತಿಚೆಗಷ್ಟೇ ನೀಡಿದ ಸಂದರ್ಶನದಲ್ಲಿ ಗ್ರೇಗ್ ಚಾಪೆಲ್ ಬಗ್ಗೆ ಒಂದು ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

2004-05 ರಲ್ಲಿ ಕೋಚ್ ಜಾನಿ ರೈಟ್ ನಂತರ ಭಾರತ ತಂಡಕ್ಕೆ ಕೋಚ್ ಆಗಿ ಆಗಮಿಸಿದ ಗ್ರೇಗ್ ಚಾಪೆಲ್ ಬಂದ ವರ್ಷದೊಳಗೆ ಭಾರತ ಅತೀ ಎನ್ನುವಷ್ಟು ಕಳಪೆ ಆಟ ಆಡಿತು. ಇದಲ್ಲದೇ ತಂಡದ ಒಳಗಿನ ವಾತಾವರಣ ಸಹ ಹದಗೆಟ್ಟು, ತಂಡದಲ್ಲಿ ಎರಡು ಬಣಗಳಾಗಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ನಾಯಕ ಸೌರವ್ ಗಂಗೂಲಿಯನ್ನ ಈ ಕೂಡಲೇ ನಾಯಕ ಸ್ಥಾನದಿಂದ ಕೆಳಗಿಳಿಸಿ ಎಂಬ ಇ-ಮೇಲ್ ನ್ನ ಬಿಸಿಸಿಐಗೆ ಮಾಡಿದ್ದಾರೆ ಎಂಬ ಸುದ್ದಿ ದೇಶಾದ್ಯಂತ ಹರಡಿತ್ತು. ಇದು ಭಾರತ ತಂಡದ ಪ್ರದರ್ಶನದ ಮೇಲೂ ತೀವ್ರ ಪರಿಣಾಮ ಬೀರಿತ್ತು. ಚಾಪೆಲ್ ಹಠಾವೋ, ಭಾರತ್ ಕ್ರಿಕೇಟ್ ಬಚಾವೋ ಎಂಬ ಪ್ರತಿಭಟನೆಗಳು ಸಹ ನಡೆದಿದ್ದವು.

ಆದರೇ ಈಗ ಆ ತಂಡದಲ್ಲಿ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡು ಪ್ರವರ್ಧಮಾನಕ್ಕೆ ಬಂದಿದ್ದ ಸುರೇಶ್ ರೈನಾ, ಇತ್ತೀಚಿನ ಸಂದರ್ಶನವೊಂದರಲ್ಲಿ ವಿವಾದಾತ್ಮಕ ಕೋಚ್ ಗ್ರೇಗ್ ಚಾಪೆಲ್ ರನ್ನ ಮನತುಂಬಿ ಹೊಗಳುವ ಮೂಲಕ ಎಲ್ಲರೂ ಆಶ್ಚರ್ಯಗೊಳ್ಳುವಂತೆ ಮಾಡಿದ್ದಾರೆ.

ನಾನು ಅವರ ಕೋಚಿಂಗ್ ಕೆಳಗೆ ಕೆಲಸ ಮಾಡಿದ್ದೇ ನನ್ನ ಅದೃಷ್ಠ, ಅವರು ಉತ್ತಮ ಶಿಸ್ತಿನ ಸಿಪಾಯಿಯಾಗಿದ್ದರು ಎಂದು ಹೇಳಿದ್ದಾರೆ. ನಾ ಕಂಡಂತೆ ಅವರು ಮತ್ತು ರಾಹುಲ್ ದ್ರಾವಿಡ್ ಉತ್ತಮ ಶಿಸ್ತಿನಿಂದ ಕೂಡಿದ ವ್ಯಕ್ತಿಗಳಾಗಿದ್ದರು. ಆ ಸಮಯದಲ್ಲಿ ಹೊಸಬರಾಗಿದ್ದ ನನಗೆ ಮತ್ತು ಇರ್ಫಾನ್ ಪಠಾಣ್ ಹಾಗೂ ರಾಬಿನ್ ಉತ್ತಪ್ಪನವರಿಗೆ ಕಠಿಣ ಪರಿಶ್ರಮಪಡುವಂತೆ ಸೂಚಿಸುತ್ತಿದ್ದರು. ನಮ್ಮ ನ್ಯೂನ್ಯತೆಗಳಿಗೆ ಸೂಕ್ತ ಪರಿಹಾರಗಳನ್ನ ಉತ್ತಮ ಮಾದರಿಯಲ್ಲಿ ನೀಡುತ್ತಿದ್ದರು ಎಂದು ಹೇಳಿದ್ದಾರೆ. ಇದು ಸದ್ಯ ಜಾಗತಿಕ ಕ್ರಿಕೇಟ್ ವಲಯದಲ್ಲಿ ಬಹಳಷ್ಟು ಚರ್ಚೆಗೆ ಈಡು ಮಾಡುತ್ತಿದೆ. ವಿವಾದಾತ್ಮಕ ಕೋಚ್ ಗ್ರೇಗ್ ಚಾಪೆಲ್ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.