ಉತ್ತಮಾಗಿ ಆಡದೇ ಇದ್ದರೇ ಮೂವರು ಆಟಗಾರ ಕ್ರಿಕೆಟ್ ಜೀವನವೇ ಅಂತ್ಯ, ಕೊನೆಯ ಅವಕಾಶ ಪಡೆದಿರುವವರು ಯಾರ್ಯಾರು ಗೊತ್ತೇ??

ಉತ್ತಮಾಗಿ ಆಡದೇ ಇದ್ದರೇ ಮೂವರು ಆಟಗಾರ ಕ್ರಿಕೆಟ್ ಜೀವನವೇ ಅಂತ್ಯ, ಕೊನೆಯ ಅವಕಾಶ ಪಡೆದಿರುವವರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೆಹೀತರೇ ಭಾರತ ಕ್ರಿಕೇಟ್ ತಂಡ ಈಗ ಪ್ರತಿಭೆಗಳಿಂದ ತುಂಬಿ ತುಳುಕುತ್ತಿದೆ. ಆಡುವ ಹನ್ನೊಂದು ಆಟಗಾರರು ಯಾರು ಎಂಬುದನ್ನ ಆಯ್ಕೆ ಮಾಡುವುದೇ ನಾಯಕ,ಕೋಚ್ ಮತ್ತು ತಂಡದ ಮ್ಯಾನೇಜ್ ಮೆಂಟ್ ಗೆ ದೊಡ್ಡ ಸವಾಲಾಗುತ್ತಿದೆ. ಈ ನಡುವೆ ಆಟಗಾರರ ಪ್ರದರ್ಶನದಲ್ಲಿ ಕೊಂಚ ವ್ಯತ್ಯಾಸ ಕಂಡು ಬಂದರೂ ಮುಲಾಜಿಲ್ಲದೇ ತಂಡದಿಂದ ಗೇಟ್ ಪಾಸ್ ನೀಡಲಾಗುತ್ತಿದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೇ, ರಾಹುಲ್ ಮತ್ತು ಮಯಾಂಕ್. ಸದ್ಯ ಶ್ರೀಲಂಕಾದಲ್ಲಿ ಕಳುಹಿಸಿದ ಭಾರತ ತಂಡದಲ್ಲಿರುವ ಈ ಅನುಭವಿ ಆಟಗಾರರು , ಒಂದು ವೇಳೆ ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೇ, ಅವರಿಗೆ ಭಾರತ ತಂಡದಲ್ಲಿ ಬಾಗಿಲು ಬಹುತೇಖ ಮುಚ್ಚಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬನ್ನಿ ಆ ಮೂವರು ಆಟಗಾರರು ಯಾರು ಎಂಬುದನ್ನ ತಿಳಿದುಕೊಳ್ಳೋಣ.

1.ಕುಲದೀಪ್ ಯಾದವ್ – ಭಾರತದ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಮೊದಲಿನ ಮೊನಚನ್ನ ಉಳಿಸಿಕೊಂಡಿಲ್ಲ. ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕರೂ, ಒಂದೇ ಒಂದು ವಿಕೇಟ್ ಪಡೆಯದೇ ನಿರಾಸೆ ಮೂಡಿಸಿದರು. ಹಾಗಾಗಿ ಲಂಕಾ ಪ್ರವಾಸ ಕುಲದೀಪ್ ಗೆ ಕೊನೆಯ ಅವಕಾಶ. ಇಲ್ಲಿ ವಿಫಲರಾದರೇ ಭಾರತ ತಂಡದಲ್ಲಿ ಆಡುವುದು ಬಹುತೇಖ ಅಂತ್ಯವಾಗಲಿದೆ.

2.ಸಂಜು ಸ್ಯಾಮ್ಸನ್ – ಕೇರಳದ ಪ್ರತಿಭಾವಂತ ವಿಕೇಟ್ ಕೀಪರ್ ಬ್ಯಾಟ್ಸಮನ್ ಗೆ ಅಸ್ಥಿರ ನಿರ್ವಹಣೆಯೇ ಮಗ್ಗುಲ ಮುಳ್ಳಾಗಿದೆ. ಸಿಕ್ಕ ಅವಕಾಶಗಳಲ್ಲಿ ಹಲವನ್ನ ಹಾಳು ಮಾಡಿಕೊಂಡಿದ್ದಾರೆ. ರಿಷಭ್ ಪಂತ್ ಈಗಾಗಲೇ ತಂಡದ ವಿಕೇಟ್ ಕೀಪರ್ ಆಗಿರುವುದು ಹಾಗೂ ಮೀಸಲು ವಿಕೇಟ್ ಕೀಪರ್ ಗಳಾಗಿ ಕೆ.ಎಲ್.ರಾಹುಲ್ ಮತ್ತು ಇಶಾನ್ ಕಿಶನ್ ಇರುವ ಕಾರಣ ಸಂಜು ಸ್ಯಾಮ್ಸನ್ ಈ ಭಾರಿ ಮಿಂಚಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

3.ಮನೀಶ್ ಪಾಂಡೆ – ವಿರಾಟ್ ಕೋಹ್ಲಿ ಅಂಡರ್ 19 ವಿಶ್ವಕಪ್ ಗೆದ್ದಾಗ ಆ ತಂಡದ ಸದಸ್ಯರಾಗಿದ್ದ ಪಾಂಡೆಗೆ ಅವಕಾಶಗಳೇ ದೊರೆಯಲಿಲ್ಲ. ತಂಡದಲ್ಲಿ ಸ್ಥಾನ ಸಿಕ್ಕಾಗ ಆಡಿದ್ದರಕ್ಕಿಂತ ಬೆಂಚು ಕಾಯಿಸಿದ್ದೇ ಹೆಚ್ಚು. ಈಗ ಶ್ರೀಲಂಕಾ ಪ್ರವಾಸದಲ್ಲಿ ಎಲ್ಲಾ ಪಂದ್ಯಗಳಲ್ಲಿಯೂ ಆಡುವ ಅವಕಾಶ ದೊರೆಯಲಿದೆ. ಪಾಂಡೆ ಅವಕಾಶಗಳನ್ನ ಸದ್ಭಳಕೆ ಮಾಡಿಕೊಳ್ಳದಿದ್ದಲ್ಲಿ ಭಾರತ ತಂಡದಿಂದ ಹೊರಗುಳಿಯುವ ಸಾಧ್ಯತೆಯೇ ಹೆಚ್ಚು. ಈ ಮೂವರು ಆಟಗಾರರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.