ಆರ್ಸಿಬಿ ಆಟಗಾರರನ್ನು ವಿಶ್ವಕಪ್ ನಿಂದ ಹೊರಗೆ ದಬ್ಬಿ ಕನ್ನಡಿಗನಿಗೆ ಅವಕಾಶ ನೀಡಿದ ಎಂದ ಲಕ್ಷ್ಮಣ್ ಯಾರಂತೆ ಗೊತ್ತಾ??

ಆರ್ಸಿಬಿ ಆಟಗಾರರನ್ನು ವಿಶ್ವಕಪ್ ನಿಂದ ಹೊರಗೆ ದಬ್ಬಿ ಕನ್ನಡಿಗನಿಗೆ ಅವಕಾಶ ನೀಡಿದ ಎಂದ ಲಕ್ಷ್ಮಣ್ ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಟಿ20 ವಿಶ್ವಕಪ್ ಗೆ ಕ್ಷಣಗಣನೆ ಶುರುವಾಗುವ ಸಮಯದಲ್ಲೇ, ಈಗ ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಯಾರಿರಬೇಕು ಎಂಬ ಚರ್ಚೆ ಈಗ ಜೋರಾಗಿದೆ. ಭಾರತ ಕ್ರಿಕೇಟ್ ತಂಡದ ಮಾಜಿ ಆಟಗಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಲ್ಲಿ ನಿರತರಾಗಿದ್ದು, ಈಗಿನ ಸರದಿ ಭಾರತ ತಂಡದ ಮಾಜಿ ಸ್ಪಿನ್ನರ್ ಹಾಗೂ ಹಾಲಿ ವೀಕ್ಷಕ ವಿವರಣೆಗಾರ ಲಕ್ಷ್ಮಣ ಶಿವರಾಮಕೃಷ್ಣನ್ ಭಾರತ ತಂಡದಲ್ಲಿ ಈ ಸ್ಪಿನ್ನರ್ ಗಳನ್ನು ಆಡಿಸಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸದ್ಯ ಭಾರತ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದ ಯುಜವೇಂದ್ರ ಚಾಹಲ್ ಹೇಳಿಕೊಳ್ಳುವಂತಹ ಲಯದಲ್ಲಿಲ್ಲ. ಐಪಿಎಲ್ ನಲ್ಲಿ ಅವರು ವಿಕೇಟ್ ಪಡೆಯುತ್ತಿರಲಿಲ್ಲ ಜೊತೆಗೆ ಅತಿ ದುಬಾರಿಯಾಗುತ್ತಿದ್ದರು. ಇದು ತಂಡದ ಮೇಲೆ ಪರಿಣಾಮ ಬೀರುತ್ತಿತ್ತು. ಮತ್ತೊಬ್ಬ ಚೈನಾಮನ್ ಸ್ಪಿನ್ನರ್ ಆಗಿರುವ ಕುಲದೀಪ್ ಯಾದವ್ ಸಹ ಫಾರ್ಮ್ ಕಳೆದುಕೊಂಡಿದ್ದು, ಅವರನ್ನ ಆಡುವ ಹನ್ನೊಂದರ ಬಳಗದಲ್ಲಿಯೂ ಸೇರಿಸುತ್ತಿಲ್ಲ. ಹಾಗಾಗಿ ಯುಜವೇಂದ್ರ ಚಾಹಲ್ ಬದಲು ಭಾರತ ತಂಡ ಈ ಉದಯೋನ್ಮುಖ ಲೆಗ್ ಸ್ಪಿನ್ನರ್ ನ್ನು ಟಿ20 ವಿಶ್ವಕಪ್ ನಲ್ಲಿ ಆಡಿಸಬೇಕು ಎಂದು ಹೇಳಿದ್ದಾರೆ.

ಅಷ್ಟಕ್ಕೂ ಆ ಸ್ಪಿನ್ನರ್ ಯಾರು ಎಂಬ ನಿಮ್ಮ ಕುತೂಹಲಕ್ಕೆ ಉತ್ತರ ಬೇರಾರೂ ಅಲ್ಲ, ಬೀದರ್ ನ ವರುಣ್ ಚಕ್ರವರ್ತಿ. ಕೆಕೆಆರ್ ತಂಡದ ಪರ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ವರುಣ್ ಚಕ್ರವರ್ತಿ, ಅಬುಧಾಭಿಯಲ್ಲಿ ನಡೆದಿದ್ದ ಐಪಿಎಲ್ ನಲ್ಲಿ ಉತ್ತಮ ಎಕಾನಮಿ ರೇಟ್ ನಲ್ಲಿ , ಹೆಚ್ಚು ವಿಕೇಟ್ ಪಡೆದಿದ್ದರು. ಹಾಗಾಗಿ ಯುಜವೇಂದ್ರ ಚಾಹಲ್ ಬದಲು ಲೆಗ್ ಸ್ಪಿನ್ನರ್ ಆಗಿ ವರುಣ್ ಚಕ್ರವರ್ತಿಯವರನ್ನ ಆಡಿಸಬೇಕು ಎಂದು ಲಕ್ಷ್ಮಣ ಶಿವರಾಮಕೃಷ್ಣನ್ ಹೇಳಿದ್ದಾರೆ.

ಆದರೇ ವರುಣ್ ಚಕ್ರವರ್ತಿ ಬಹಳಷ್ಟು ಫಿಟ್ ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿಂದೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದ ವರುಣ್ ಚಕ್ರವರ್ತಿ, ಫಿಟ್ ನೆಸ್ ಪರೀಕ್ಷೆಯಾದ ಯೋ-ಯೋ ಟೆಸ್ಟ್ ನಲ್ಲಿ ಫೇಲ್ ಆದ ಕಾರಣ ತಂಡದಿಂದ ಹೊರಗೆ ಬಿದ್ದಿದ್ದರು. ದೈಹಿಕ ಸಾಮರ್ಥ್ಯಕ್ಕೆ ಹೆಚ್ಚು ಮಹತ್ವ ಕೊಡುವ ಈ ಸಮಯದಲ್ಲಿ ವರುಣ್ ಚಕ್ರವರ್ತಿ ಯೋ-ಯೋ ಟೆಸ್ಟ್ ನಲ್ಲಿ ಪಾಸ್ ಆದರೇ ಮಾತ್ರ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಲಕ್ಷ್ಮಣ ಶಿವರಾಮಕೃಷ್ಣನ್ ರವರ ಅಭಿಪ್ರಾಯದ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.