ದೆಹಲಿಗೆ ಹೋಗಿ ಬಂದ ಬೆನ್ನಲ್ಲೇ ಒಕ್ಕಲಿಗರ ಕುರಿತು ಮಹತ್ವದ ನಿರ್ಧಾರ ತೆಗೆದುಕೊಂಡ ಬಿಎಸ್ವೈ ಏನು ಗೊತ್ತಾ??

ದೆಹಲಿಗೆ ಹೋಗಿ ಬಂದ ಬೆನ್ನಲ್ಲೇ ಒಕ್ಕಲಿಗರ ಕುರಿತು ಮಹತ್ವದ ನಿರ್ಧಾರ ತೆಗೆದುಕೊಂಡ ಬಿಎಸ್ವೈ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಬ್ರಾಹ್ಮಣ ಅಭಿವೃದ್ಧಿ ನಿಗಮ ಶುರುವಾದ ಬೆನ್ನಲ್ಲೇ , ಈ ಜಾತಿ ಅಭಿವೃದ್ಧಿ ನಿಗಮಗಳ ಕೂಗೂ ಕೇಳತೊಡಗಿತು. ಶಿರಾ ಉಪಚುನಾವಣೆಯಲ್ಲಿ ಈ ನಿಗಮಗಳ ರಾಜಕಾರಣ ಬಸವಕಲ್ಯಾಣ ಉಪಚುನಾವಣೆ ಹೊತ್ತಿಗೆ ತಾರಕಕೇರಿತ್ತು. ಮರಾಠ ಅಭಿವೃದ್ಧಿ ನಿಗಮ ಘೋಷಿಸಿದ ತಕ್ಷಣ, ಎಲ್ಲಾ ಪ್ರಮುಖ ಜಾತಿ ಜನಾಂಗದವರು ತಮಗೂ ಸಹ ಸರ್ಕಾರ ಅಭಿವೃದ್ಧಿ ನಿಗಮ ಘೋಷಿಸಬೇಕೆಂಬ ಅಹವಾಲುಗಳನ್ನು ಸಲ್ಲಿಸತೊಡಗಿದರು.ಈ ಮಧ್ಯೆ ಕರ್ನಾಟಕದ ಎರಡನೇ ಅತಿ ದೊಡ್ಡ ಸಮುದಾಯವಾದ ಒಕ್ಕಲಿಗ ಸಮುದಾಯ ಸಹ ತಮಗೂ ಅಭಿವೃದ್ಧಿ ನಿಗಮ ಘೋಷಿಸಬೇಕೆಂದು ಕೋರಿಕೊಂಡಿದ್ದರು.

ಇತ್ತ ನಿನ್ನೆಯಷ್ಟೇ ದೆಹಲಿ ಪ್ರವಾಸ ಮುಗಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪಿಸಲು ಹಸಿರು ನಿಶಾನೆ ತೋರಿದ್ದಾರೆ. ಒಕ್ಕಲಿಗ ಅಭಿವೃದ್ಧಿ ನಿಗಮ ಎಂಬ ಆದೇಶವೊಂದನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಈ ಬಗ್ಗೆ ಮಹತ್ವದ ಆದೇಶ ಹೊರಡಿಸಿ ನಿಗಮಕ್ಕೆ 500 ಕೋಟಿ ರೂಪಾಯಿಯನ್ನು ಸಹ ಇರಿಸಿದೆ.

ಒಕ್ಕಲಿಗ ಒಕ್ಕದಿದ್ದರೇ, ಬಿಕ್ಕುವುದು ನಾಡೆಲ್ಲಾ ಎಂಬ ನಾಣ್ಣುಡಿಯಂತೆ, ರಾಜ್ಯಾದ್ಯಂತ ಶೇಕಡಾ 17 ರಷ್ಟು ಇರುವ ಈ ಸಮುದಾಯ, ರಾಜ್ಯದ ಆದಾಯದಲ್ಲಿ ಶೇಕಡಾ 35 ರಷ್ಟನ್ನು ನೀಡುತ್ತದೆ ಎಂಬುದು ಗಮನಾರ್ಹವಾದ ವಿಷಯವಾಗಿದೆ. ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಈ ಸಮುದಾಯಕ್ಕೆ ಈಗ ಸರ್ಕಾರ ಅಭಿವೃದ್ಧಿ ನಿಗಮ ಘೋಷಿಸುವ ಮೂಲಕ ಒಂದು ದೊಡ್ಡ ಬಿಗ್ ಗಿಫ್ಟ್ ನೀಡಿದೆ ಎಂದು ಹೇಳಬಹುದು.

ಒಕ್ಕಲಿಗ ಸಮುದಾಯವು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಪ್ರವರ್ಗ 3ಎನಲ್ಲಿ ಬರುತ್ತದೆ. ಕ್ರಮ ಸಂಖ್ಯೆ 1ರ ಎಯಿಂದ ಟಿ ವರೆಗೆ ನಮೂದಾಗಿರುವ ಒಕ್ಕಲಿಗ, ವಕ್ಕಲಿಗ, ನಾಮಧಾರ್ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ಗಂಗಡ್​ಕಾರ್ ಒಕ್ಕಲಿಗ ದಾಸ್ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ ಗೌಡ, ಹೊಸದೇವರ ಒಕ್ಕಲು, ಹಳ್ಳಿಕಾರ್, ಕುಂಚಿಟಿಗ, ಗೌಡ, ಕಾಪು, ಹೆಗ್ಗಡೆ, ರಡ್ಡಿ, ಗೌಂಡರ್, ನಾಮಧಾರಿ ಗೌಡ, ಉಪ್ಪಿನ ಕೊಳಗ,ಉತ್ತಮ ಕೊಳಗ ಜಾತಿಗಳ ಅಭಿವೃದ್ಧಿಗೆ ಈ ನಿಗಮ ಕೆಲಸ ಮಾಡಲಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.