ಅಲಾ ವೈಕುಂಠ ಪುರಮುಲೋ ರಿಮೇಕ್ ನಲ್ಲಿ ನಟನೆ ಮಾಡುತ್ತಿರುವ ನಟ ಹಾಗೂ ನಟಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ತೆಲುಗಿನಲ್ಲಿ ಅಲಾ ವೈಕುಂಠ ಪುರಮುಲೋ ಚಿತ್ರ ಬಾರಿ ಸದ್ದು ಮಾಡಿತ್ತು.ಹೆಚ್ಚೇನೂ ಆಕ್ಷನ್ ಸೀನ್ ಗಳಿಲ್ಲದೆ, ಅಪ್ಪಟ ಮನೆಮಂದಿಯೆಲ್ಲ ಕುಳಿತು ನೋಡುವಂತಹ ಚಿತ್ರವಾಗಿದ್ದ ಕಾರಣ ಬಾರಿ ಯಶಸ್ಸು ಗಳಿಸಿತ್ತು. ಪ್ರತಿ ಸೀನ್ ನಲ್ಲಿಯೂ ಕೂಡ ಬಹಳ ಅದ್ಭುತವಾಗಿ ಚಿತ್ರೀಕರಣ ಮಾಡಿದ ಕಾರಣ ತೆಲುಗಿನಲ್ಲೂ ಒಂದು ಇತಿಹಾಸವನ್ನೇ ಸೃಷ್ಟಿಸುವುದರಲ್ಲಿ ಯಶಸ್ವಿಯಾಗಿತ್ತು ಅಲಾ ವೈಕುಂಠ ಪುರಮುಲೋ ಚಿತ್ರ.

ಇನ್ನು ಈ ಅಲಾ ವೈಕುಂಠ ಪುರಮುಲೋ ಚಿತ್ರದ ಹಾಡುಗಳ ಯಶಸ್ಸಿನ ಕುರಿತು ನಿಮಗೆ ಹೇಳುವ ಅವಶ್ಯಕತೆಯೇ ಇಲ್ಲ ಎನಿಸುತ್ತದೆ ಯಾಕೆಂದರೆ ಸಿನಿಮಾ ಬಿಡುಗಡೆಗೂ ಮುನ್ನವೇ ಸಿನಮಾ ಯಶಸ್ಸು ಗಳಿಸುತ್ತದೆ ಎಂದು ಖಚಿತ ಪಡಿಸುವಂತೆ ಅಲಾ ವೈಕುಂಠ ಪುರಮುಲೋ ಚಿತ್ರದ ಹಾಗುಗಳು ಯಶಸ್ವಿಯಾಗಿದ್ದವು. ಅಸಲಿಗೆ ಈ ಅಲಾ ವೈಕುಂಠ ಪುರಮುಲೋ ಚಿತ್ರ ಯಶಸ್ಸು ಗೋಳಲ್ಲೂ ಚಿತ್ರದ ಹಾಡುಗಳು ಕೂಡ ಪ್ರಮುಖ ಕಾರಣಗಳಾಗಿವೆ. ಇನ್ನು ಈ ಚಿತ್ರದ ಮೂಲಕ ರಜನಿಯ ದರ್ಬಾರ್ ಚಿತ್ರವನ್ನು ಹಾಗೂ ಮಹೇಶ್ ಬಾಬು ನಟನೆ ಸರಿಲೆರು ನಿಕೇವ್ವರು ಚಿತ್ರವನ್ನು ಕೂಡ ಅಲ್ಲೂ ಅರ್ಜುನ್ ರವರು ಬಾಕ್ಸ್ ಆಫೀಸ್ ನಲ್ಲಿ ಸೋಲಿದ್ದರು.

ಹೀಗೆ ಇಷ್ಟೆಲ್ಲ ಸದ್ದು ಮಾಡಿ ಯಶಸ್ಸು ತೊಂಡಿರುವ ಚಿತ್ರ ಇದೀಗ ಮರು ನಿರ್ಮಾಣ ಅಂದರೆ ರಿಮೇಕ್ ಆಗುತ್ತಿದೆ. ಬಹಳ ನಿರೀಕ್ಷೆ ಹುಟ್ಟುರಿಸಿರುವ ಕಾರಣ ಈ ಚಿತ್ರ ರಿಮೇಕ್ ಮಾಡಿದರೂ ಕೂಡ ಯಶಸ್ಸು ಪಡೆಯುತ್ತದೆ ಎಂಬುದು ಬಾಲಿವುಡ್ ನ ಲೆಕ್ಕಾಚಾರ, ಇನ್ನು ಹೀಗೆ ರಿಮೇಕ್ ಸಿನಿಮಾ ದಲ್ಲಿ ನಟನೆ ಮಾಡಲು ಬಾಲಿವುಡ್ ಚಿತ್ರರಂಗ ಮುಂದಾಗಿದ್ದು, ಈ ಸಿನಿಮಾದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಇತ್ತೀಚಿಗೆ ಬಾರಿ ಭರವಸೆ ಮೂಡಿಸುತ್ತಿರುವ ನಟ ನಟಿಯರಾದ ಕಾರ್ತಿಕ್ ಅಯಾನ್ ಹಾಗೂ ಕೃತಿ ಸನೋನ್ ರವರನ್ನು ಈ ಸಿನೆಮಾಗೆ ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ. ಈ ಪಾತ್ರಗಳ ಕುರಿತು ಹಾಗೂ ಈ ಆಯ್ಕೆಗಳ ಕುರಿತು ನಿಮ್ಮ ಅಭಿಪ್ರಾಯವನ್ನು ತಿಳಿಸುವುದನ್ನು ಮರೆಯಬೇಡಿ.

Post Author: Ravi Yadav