ಕನ್ನಡದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸುವಂತಹ ರವಿ ಚಂದ್ರನ್ ರವರ ಸಿನೆಮಾದ ಕನಸು ಹಾಗೆ ಉಳಿದಿದೆ, ಯಾವುದು ಹಾಗೂ ಕಾರಣವೇನು ಗೊತ್ತೇ??
ಕನ್ನಡದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸುವಂತಹ ರವಿ ಚಂದ್ರನ್ ರವರ ಸಿನೆಮಾದ ಕನಸು ಹಾಗೆ ಉಳಿದಿದೆ, ಯಾವುದು ಹಾಗೂ ಕಾರಣವೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕ್ರೇಜಿಸ್ಟಾರ್ ರವಿಚಂದ್ರನ್ ಒಬ್ಬ ಕನಸುಗಾರ. ಅವರ ಪ್ರತಿ ಚಿತ್ರಗಳಲ್ಲಿಯೂ ಇದನ್ನ ಸಾಬೀತು ಪಡಿಸಿದ್ದಾರೆ ರವಿಚಂದ್ರನ್. ಹಾಗಾಗಿಯೇ ಕನ್ನಡ ಚಿತ್ರರಂಗದ ಒಬ್ಬ ಅಚ್ಚುಮೆಚ್ಚಿನ ಸ್ಟಾರ್ ರವಿಚಂದ್ರನ್. ರವಿಚಂದ್ರನ್ ಅವರ ಕನಸು ಯಾವುದಾಗಿತ್ತು ಎಂಬುದನ್ನು ನೋಡುವುದಾದರೆ ರವಿಚಂದ್ರನ್ ಒಬ್ಬ ಅತ್ಯುತ್ತಮ ನಟ. ಅತೀ ಹೆಚ್ಚು ಬಜೆಟ್ ನ್ನು ಹಾಕಿ ಚಿತ್ರ ನಿರ್ಮಿಸುವಲ್ಲಿ ಕ್ರೇಜಿಸ್ಟಾರ್ ಫೇಮಸ್. ಯಾಕೆಂದ್ರೆ ರವಿಚಂದ್ರನ್ ಅವರ ಚಿತ್ರದಲ್ಲಿ ಏನಾದರೂ ಒಂದು ಸ್ಪೇಷಲ್ ಇರತ್ತೆ. ಫಾರಿನ್ ಗಳಲ್ಲಿ ಶೂಟ್ ಇರತ್ತೆ. ಅಷ್ಟೇ ಅಲ್ಲ, ಕನ್ನಡಕ್ಕೆ ಕೆಲವು ಬಾಲಿವುಡ್ ನಟಿಯರನ್ನ ಕನ್ನಡಕ್ಕೆ ಪರಿಚಯ ಮಾಡಿದವರು ಕೂಡ ರವಿಚಂದ್ರನ್ ಅವರೆ!
ರವಿಚಂದ್ರನ್ ಅವರ ಕನಸು ಮಂಜಿನ ಹನಿ ಚಿತ್ರ! ಹೌದು ತಮ್ಮ ಉಳಿದ ಚಿತ್ರಗಳಂತೆ ಮಂಜಿನ ಹನಿ ಕೂಡ ವಿಶೇಷವಾಗಿ ನಿರ್ಮಿಸಬೇಕು ಅಂತ ಕನಸು ಹೊತ್ತವರು ರವಿಚಂದ್ರನ್. 2007 ರಲ್ಲಿಯೇ ಮಂಜಿನ ಹನಿ ನಿರ್ಮಿಸಲು ತಯಾರಾಗಿದ್ದ ರವಿಚಂದ್ರನ್ ಅವರಿಗೆ ನಿರ್ಮಾಪಕರಾಗಿ ಸಂದೇಶ್ ನಾಗರಾಜ್ ಜೊತೆಯಾಗಿದ್ದರು. ’ಹಠವಾದಿ’ ಯಂಥ ಸಿನಿಮಾವನ್ನು ಒಟ್ಟಿಗೆ ನಿರ್ಮಿಸಿದ್ದ ಈ ಇಬ್ಬರೂ ಬಜೆಟ್ ಜಾಸ್ತಿ ಇರುವ ಮಂಜಿನ ಹನಿ ನಿರ್ಮಾಣಕ್ಕೆ ಶುಭ ಹಾಡಿದ್ರು. 5-6 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದ ಈ ಚಿತ್ರಕ್ಕೆ ಹಣ ಹಾಕುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ರು ನಿಮಾಪಕ ಸಂದೇಶ್ ನಾಗರಾಜ್. ಯಾಕೆಂದರೆ ಕನಸುಗಾರನ ಸಿನಿಮಾ ಕಥೆಯೇ ಹಾಗಿತ್ತು. ಬಹಳ ವಿಭಿನ್ನವಾಗಿತ್ತು.
’ಮಂಜಿನ ಹನಿ’ ಸಿನಿಮಾ ನಿರ್ಮಾಣದ ಕಥೆ: ಮಂಜಿನ ಹನಿ ಚಿತ್ರದ ಚಿತ್ರಿಕರಣ ಆರಂಭವಾಯಿತು. ಸುಮಾರು ಅರ್ಧದಷ್ಟು ಚಿತ್ರದ ಚಿತ್ರೀಕರಣವೂ ಆಗಿತ್ತು. ಇದಕ್ಕೆ ನಾಯಕಿಯರಾಗಿ ಚಾರುಲತಾ ಮತ್ತು ಪೂನಂ ಕೌರ್ ಆಯ್ಕೆಯಾಗಿದ್ದರು. ಚಿತ್ರೀಕರಣ ಅರ್ಧದಷ್ಟು ಆದ ನಂತರ ಸಮಸ್ಯೆಗಳ ಸರಮಾಲೆಗಳೇ ಶುರುವಾಯಿತು. ನಿರ್ಮಾಪಕರು ಚಿತ್ರವನ್ನು ಮುಂದುವರಿಸುವುದಿಲ್ಲ ಎಂದು ಕೈ ಎತ್ತಿದರು. ಇದಾದ ನಂತರ ನಿರ್ಮಾಪಕರಿಗೆ ಕೊಡಬೇಕಾದದ್ದನ್ನು ಕೊಟ್ಟು ಚಿತ್ರ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತರು ರವಿಚಂದ್ರನ್. ಅದರಂತೆ ಸಿನಿಮಾ ಚಿತ್ರೀಕರಣ ಕೂಡ ಪೂರ್ಣಗೊಳಿಸಿದ್ರು.
ರವಿಚಂದ್ರನ್ ಕನಸಿನ ಕೂಸು ’ಮಂಜಿನ ಹನಿ’ ತೆರೆಕಾಣಲಿಲ್ಲವೇಕೆ ಗೊತ್ತಾ?? ಸ್ನೇಹಿತರೇ ಚಿತ್ರ ನಿರ್ಮಾಣವಾದ ನಂತರ ಎಡಿಟಿಂಗ್ ಮಾಡಲು ಕುಳಿತ ರವಿಚಂದ್ರನ್ ಅವರಿಗೆ ತೃಪ್ತಿ ಇರಲಿಲ್ಲ. ಸಾಕಷ್ಟು ಸನ್ನಿವೇಶಗಳು ಬೇಡವೆನಿಸಿ ತೆಗೆದು ಹಾಕಿದ್ರು. ಹೀಗೆ ಎಡಿಟ್ ಮಾಡುತ್ತಾ ಮಾಡುತ್ತಾ ಇಡೀ ಚಿತ್ರವೇ ಸರಿಯಿಲ್ಲ ಎನ್ನಿಸಿತು ಕ್ರೇಜಿಸ್ಟಾರ್ ಗೆ! ಈ ಚಿತ್ರದಲ್ಲಿ 9 ಪಾತ್ರಗಳು ಮುಖ್ಯವಾದವು. ಮನುಷ್ಯನ ಮನಸ್ಸಿನ ಒಳಹೊಕ್ಕು ಅಲ್ಲಿನ ಭಾವನೆಗಳನ್ನು ಹೊರಹಾಕುವಂಥ ಅಥವಾ ಮನುಷ್ಯನ ಮನಸ್ಸಿಗೆ ಸಂಬಂಧಪಟ್ಟ ಈ ಸಿನಿಮಾದಲ್ಲಿ ಗ್ರಾಫಿಕ್ಸ್ ಆಟ ಬಹಳಷ್ಟಿದೆ. ಹಾಗಾಗಿ ಸಿಜಿ ವರ್ಕ್ ಗೇ ಕೋಟಿಗಟ್ಟಲೆ ಬೇಕು.
ಈ ಚಿತ್ರ ನಿರ್ಮಾಣಕ್ಕೆ ಇನ್ನೂ ಕನಿಷ್ಠ 50 ಕೋಟಿ ಖರ್ಚು ಮಾಡಬೇಕು. ಹಾಗಾಗಿ ಚಿತ್ರ ಪೂರ್ಣಗೊಳ್ಳದೇ ಹಾಗೆ ನಿಂತಿದೆ ಎಂದು ರವಿಚಂದ್ರನ್ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಕೇವಲ ಉತ್ತಮ ನಟ ಮಾತ್ರವಲ್ಲದೇ, ಉತ್ತಮ ನಿರ್ದೇಶಕ ಮತ್ತು ಒಳ್ಳೆಯ ತಂತ್ರಜ್ಞರೂ ಕೂಡ ಆಗಿರುವ ರವಿಚಂದ್ರನ್ ಅವರ ಕನಸಿನ ಕೂಸು ’ಮಂಜಿನ ಹನಿ’ ಬೇಗ ಎದ್ದೇಳಲಿ, ಬೇಗ ಅಭಿಮಾನಿಗಳ ಕಣ್ತುಂಬುವಂತಾಗಲಿ ಎಂದು ಹಾರೈಸೋಣ!