ಮನೆಯಿಂದ ಹೊರಬಂದ ತಕ್ಷಣ ವರಸೆ ಬದಲಾಯಿಸಿದ ರಘು, ಬಿಗ್ ಬಾಸ್ ವಿನ್ನರ್ ಯಾರು ಆಗುತ್ತಾರೆ ಎಂದು ಹೇಳಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ಈ ವಾರ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಎರಡನೇ ಸ್ಪರ್ದಿಯಾಗಿ ಬಿಗ್ ಬಾಸ್ ಮನೆಯಿಂದ ರಘು ರವರು ಹೊಸ ಬಂದಿದ್ದಾರೆ ಎಂಬುದು ಬಹುಶಃ ನಿಮಗೆಲ್ಲರಿಗೂ ತಿಳಿದಿರುವ ಸಂಗತಿ. ಮನೆಯ ಎಲ್ಲ ಸ್ಪರ್ದಿಗಳು ನಾಮಿನೇಟ್ ಆಗಿರುವ ಸಮಯದಲ್ಲಿ ರಘು ರವರು ಅಥವಾ ಚಕ್ರವರ್ತಿ ರವರು ಮನೆಯಿಂದ ಹೊರ ಬರಬಹುದು, ಶಮಂತ್ ರವರು ಕೂಡ ಎಲಿಮಿನೇಟ್ ಆಗಬಹುದು ಎಂಬ ಲೆಕ್ಕಾಚಾರಗಳು ಬಾರಿ ಸಂಖ್ಯೆಯಲ್ಲಿ ಕೇಳಿ ಬಂದಿದ್ದವು.

ಮೊದಲಿಂದಲೂ ರಘು ರವರು ಅದ್ಯಾಕೋ ತಿಳಿದಿಲ್ಲ ಅಷ್ಟೇನು ಸದ್ದು ಮಾಡಲೇ ಇಲ್ಲ ಎಂದರೆ ತಪ್ಪಾಗಲಾರದು. ಯಾಕೆಂದರೆ ಇವರ ವಿಡಿಯೋ ಗಳನ್ನೂ ನಾವು ನೀವು ಎಲ್ಲರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ನೋಡಿ ಬಾರಿ ನಕ್ಕಿದ್ದೇವೆ. ಇದನ್ನೇ ಅವರು ಬಿಗ್ ಬಾಸ್ ಮನೆಯಲ್ಲಿ ಮುಂದು ವರೆಸಿದ್ದರೇ ಕಂಡಿತಾ ಇವರು ಒಬ್ಬರು ಫೈನಲ್ ಸ್ಪರ್ದಿಯಾಗಿರುತ್ತಿದ್ದರು. ಆದರೆ ಅದ್ಯಾಕೋ ತಿಳಿದಿಲ್ಲ ಇವರು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲಿಲ್ಲ.

ಇನ್ನು ಮನೆಯಲ್ಲಿರುವಾಗ ಎಲ್ಲ ಸ್ಪರ್ದಿಗಳ ಜೊತೆ ಚೆನ್ನಾಗಿ ಬಾಂದವ್ಯ ಇಟ್ಟುಕೊಂಡಿದ್ದ ರಘು ರವರು, ತಮ್ಮದೇ ಆದ ಒಂದು ರೀತಿಯ ವ್ಯಕ್ತಿತ್ವವನ್ನು ಹೊಂದಿದ್ದರು ಎಂದರೆ ತಪ್ಪಾಗಲಾರದು. ಇದೀಗ ಮನೆಯಿಂದ ಹೊರಬಂದ ಬಳಿಕ ಸುದೀಪ್ ರವರ ಬಳಿ ಮಾತನಾಡಿರುವ ರಘು ರವರು ಮನೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದಾರೆ. ಹೀಗೆ ಮಾತನಾಡುವಾಗ ವಿನ್ನರ್ ಯಾರು ಎಂದು ಪ್ರಶ್ನೆ ಮಾಡಿದಾಗ ಉತ್ತರ ನೀಡಿರುವ ರಘು ರವರು, ವೈಷ್ಣವಿ ರವರು ವಿನ್ನರ್ ಆಗುತ್ತಾರೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Post Author: Ravi Yadav