ಈ ವಾರ ಕಿಚ್ಚ ಯಾರಿಗೂ ತನ್ನ ಚಪ್ಪಾಳೆ ನೀಡದೆ ಇದ್ದರೂ ಪ್ರೇಕ್ಷಕರು ಕಿಚ್ಚನ ಚಪ್ಪಾಳೆ ನೀಡಿದ್ದು ಯಾರಿಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ ನಲ್ಲಿ ಪ್ರತಿ ಸ್ಪರ್ದಿಗಳು ಕೂಡ ತಮ್ಮನ್ನು ತಾವು ಪ್ರತಿಯೊಂದರಲ್ಲೂ ತೊಡಗಿಸಿಕೊಂಡು ಆಟವಾಡುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗೂ ಮನೆಯಲ್ಲಿರುವ ಎಲ್ಲರಿಗೂ ಕೂಡ ಇತರ ಸ್ಪರ್ದಿಗಳ ಬಗ್ಗೆ ಹಾಗೂ ಪ್ರೇಕ್ಷಕರ ಅಭಿಪ್ರಾಯದ ಬಗ್ಗೆ ತಿಳಿದಿರುವ ಕಾರಣ ಪ್ರತಿಯೊಂದು ಹೆಜ್ಜೆಯು ಕೂಡ ಬಾರಿ ಲೆಕ್ಕಾಚಾರದ ಹೆಜ್ಜೆಯಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.

ಇನ್ನು ಹೀಗೆ ಲೆಕ್ಕಾಚಾರದ ಹಾದಿಯಲ್ಲಿ ಕಳೆದ ವಾರ ಮನೆಯಲ್ಲಿ ನಿಜಕ್ಕೂ ಒಂದು ರೀತಿ ಯಾರು ನಂಬಲಾರದ ಘಟನೆಗಳು ನಡೆದವು. ಕ್ಯಾಪ್ಟನ್ ಎಂಬುದನ್ನು ಮರೆತ ದಿವ್ಯ ಉರುದುಗರವರು ನೇರವಾಗಿ ಪ್ರಶಾಂತ್ ರವರ ಕುರಿತು ಯಾವುದೇ ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಳ್ಳಲಿಲ್ಲ. ಹಾಗೂ ತಮಗೆ ಇಷ್ಟ ಬಂದ ಸ್ಪರ್ದಿಗಳ ಜೊತೆ ಮಾತನಾಡಿ ಆಟದ ರೂಲ್ಸ್ ಅನ್ನು ತಮಗೆ ಇಷ್ಟ ಬಂದಂತೆ ಬದಲಾಯಿಸಿಕೊಂಡರು. ಇನ್ನು ಅರವಿಂದ್ ಹಾಗೂ ಪ್ರಶಾಂತ್ ರವರ ಕೂಡ ಆಡಿದ ರೀತಿ ಬಾರಿ ಸದ್ದು ಮಾಡಿದೆ.

ಹೀಗೆ ಯಾವುದೇ ಸ್ಪರ್ದಿಗಳಿಂದ ನಿರೀಕ್ಷೆಯ ಆಟ ಹೊರಬರದ ಕಾರಣ ಈ ವಾರ ಕಿಚ್ಚನ ಚಪ್ಪಲಿಯನ್ನು ಯಾರಿಗೂ ನೀಡುವುದಿಲ್ಲ ಎಂದು ಅವರೇ ಇಟ್ಟುಕೊಂಡರು. ಆದರೆ ಈ ಬಾರಿ ಪ್ರೇಕ್ಷಕರು ತಾವೇ ನಿರ್ಧಾರ ಮಾಡಿ ಈ ವಾರದ ಚಪ್ಪಾಳೆಯನ್ನು ಈ ವಾರ ಮನೆಯಲ್ಲಿ ನಡೆದ ಪ್ರತಿ ಘಟನೆಗಳನ್ನು ಚರ್ಚಿಸಿ, ಎಲ್ಲ ಸ್ಪರ್ದಿಗಳ ಮೈ ಚಳಿ ಬಿಡಿಸಿ, ಅತ್ಯದ್ಭುತವಾಗಿ ಪಂಚಾಯತಿ ನಡೆಸಿದ ಕಾರಣ ಈ ವಾರ ಕಿಚ್ಚನ ಚಪ್ಪಾಳೆ ಯನ್ನು ಕಿಚ್ಚ ಸುದೀಪ್ ರವರಿಗೆ ನೀಡಬೇಕು ಎಂದಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Post Author: Ravi Yadav