ಟಿ20 ವಿಶ್ವಕಪ್ ಗೆ ಭಾರತ ತಂಡವನ್ನ ರಚಿಸಿದ ಕ್ರಿಕೆಟ್ ಲೆಜೆಂಡ್ ಬ್ರಾಡ್ ಹಾಗ್, ತಂಡದಲ್ಲಿ ಯಾರ್ಯಾರಿದ್ದಾರೆ ಗೊತ್ತಾ??

ಟಿ20 ವಿಶ್ವಕಪ್ ಗೆ ಭಾರತ ತಂಡವನ್ನ ರಚಿಸಿದ ಕ್ರಿಕೆಟ್ ಲೆಜೆಂಡ್ ಬ್ರಾಡ್ ಹಾಗ್, ತಂಡದಲ್ಲಿ ಯಾರ್ಯಾರಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಅಕ್ಟೋಬರ್ ನವೆಂಬರ್ ನಲ್ಲಿ ಭಾರತದಲ್ಲಿ ನಡೆಯಬೇಕಿದ್ದ ವಿಶ್ವ ಟಿ 20 ಕಪ್ ಈಗ ಯು.ಎ.ಇ ಹಾಗೂ ಅಬುಧಾಬಿಗೆ ವಲಸೆ ಹೋಗಿರುವುದು ನಿಮಗೆ ತಿಳಿದಿರುವ ವಿಷಯವಾಗಿದೆ. ಈ ಬಗ್ಗೆ ಈಗ ಮಾತನಾಡಿರುವ ಆಸ್ಟ್ರೇಲಿಯಾ ತಂಡದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಈಗ ತಮ್ಮ ಆಯ್ಕೆಯ ಭಾರತ ತಂಡವನ್ನು ರಚಿಸಿದ್ದಾರೆ. ಬ್ರಾಡ್ ಹಾಗ್ ರಚಿಸಿರುವ ಈ ತಂಡದಲ್ಲಿ ಐವರು ಬ್ಯಾಟ್ಸ್ ಮನ್ ಗಳು, ಇಬ್ಬರು ಆಲ್ ರೌಂಡರ್ ಗಳು, ಇಬ್ಬರು ಸ್ಪಿನ್ನರ್ ಗಳು ಹಾಗೂ ಮೂವರು ವೇಗಿಗಳಿದ್ದಾರೆ.

ಬ್ರಾಡ್ ಹಾಗ್ ಪ್ರಕಾರ ಭಾರತದ ಇನ್ನಿಂಗ್ಸ್ ನ್ನು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಆರಂಭಿಸಬೇಕು ಎಂದು ಹೇಳಿದ್ದಾರೆ. ಈ ಹಿಂದಿನ ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ವಿರಾಟ್ ಆರಂಭಿಕರಾಗಿ ಉತ್ತಮ ಲಯ ತೋರಿದ್ದರು ಎಂದು ಹೇಳಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ರಾಹುಲ್ ಗಿಂತ ಸೂರ್ಯಕುಮಾರ್ ಯಾದವ್ ಉತ್ತಮ ಆಯ್ಕೆಯಾಗಬಲ್ಲರು ಎಂದು ಹೇಳಿದ್ದಾರೆ. ಸೂರ್ಯಕುಮಾರ್ ಯಾದವ್ ಮೂರನೇ ಕ್ರಮಾಂಕದಲ್ಲಿ, ಕೆ.ಎಲ್.ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಹಾಗೂ ವಿಕೇಟ್ ಕೀಪರ್ ಬ್ಯಾಟ್ಸಮನ್ ರಿಷಭ್ ಪಂತ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಯಬೇಕು ಎಂದು ಹೇಳಿದ್ದಾರೆ.

ಇನ್ನು ಫಿನೀಶರ್ ಗಳಾಗಿ ಆರನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಏಳನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾರ ಹೆಸರನ್ನ ಆಯ್ಕೆ ಮಾಡಿದ್ದಾರೆ. ಇನ್ನು ವೇಗದ ಬೌಲರ್ ಗಳಾಗಿ ಶಾರ್ದೂಲ್ ಠಾಕೂರ್, ಭುವನೇಶ್ವರ್ ಕುಮಾರ್, ಜಸ್ಪ್ರಿತ್ ಬುಮ್ರಾ ರನ್ನ ಆಯ್ಕೆ ಮಾಡಿದ್ದಾರೆ. ಇನ್ನು ಸ್ಪಿನ್ ವಿಭಾಗದಲ್ಲಿ ಲೆಗ್ ಸ್ಪಿನ್ನರ್ ಯುಜವೇಂದ್ರ ಚಾಹಲ್ ರನ್ನ ಆಯ್ಕೆ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಿದರೇ ಶಾರ್ದೂಲ್ ಠಾಕೂರ್ ಬದಲಿಗೆ ವಾಷಿಂಗ್ಟನ್ ಸುಂದರ್ ರವರನ್ನ ಆಡಿಸಬಹುದು ಎಂದು ಸಲಹೆ ನೀಡಿದ್ದಾರೆ.

ಒಟ್ಟಾರೆಯಾಗಿ ಬ್ರಾಡ್ ಹಾಗ್ ರಚಿಸಿದ ತಂಡ ಹೀಗಿದೆ. – ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಕೆ.ಎಲ್.ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಭುವನೇಶ್ವರ್ ಕುಮಾರ್,ಜಸ್ಪ್ರೀತ್ ಬುಮ್ರಾ, ಯುಜವೇಂದ್ರ ಚಾಹಲ್. 12 ನೇ ಆಟಗಾರ, ವಾಷಿಂಗ್ಟನ್ ಸುಂದರ್. ಈ ತಂಡದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.