ಜೆಡಿಎಸ್ ಮುಕ್ತ ಮಂಡ್ಯ ಮಾಡಲು ಸುಮಲತಾ ರವರಿಗೆ ಮತ್ತೊಂದು ಅಸ್ತ್ರ ನೀಡಿದ ಶಿವರಾಮೇಗೌಡ, ಕುಮಾರಸ್ವಾಮಿ ರವರಿಗೆ ಬಿಗ್ ಶಾಕ್. ಏನು ಗೊತ್ತಾ??
ಜೆಡಿಎಸ್ ಮುಕ್ತ ಮಂಡ್ಯ ಮಾಡಲು ಸುಮಲತಾ ರವರಿಗೆ ಮತ್ತೊಂದು ಅಸ್ತ್ರ ನೀಡಿದ ಶಿವರಾಮೇಗೌಡ, ಕುಮಾರಸ್ವಾಮಿ ರವರಿಗೆ ಬಿಗ್ ಶಾಕ್. ಏನು ಗೊತ್ತಾ??
ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಸುಮಲತಾ ಹಾಗೂ ಜೆಡಿಎಸ್ ಪಕ್ಷದ ನಡುವಿನ ವಿಚಾರಗಳು ಬಾರಿ ಚರ್ಚೆ ನಡೆಯುತ್ತಿವೆ. ಪ್ರತಿಯೊಂದು ವಿಚಾರಗಳನ್ನು ಹಾಗೂ ಹೇಳಿಕೆಗಳನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಎಲ್ಲರೂ ಮರೆತಂತೆ ಕಾಣುತ್ತಿದೆ, ಯಾಕೆಂದರೆ ಮಂಡ್ಯ ರಾಜಕೀಯದಲ್ಲಿ ಇದೀಗ ಮಾತನಾಡುತ್ತಿರುವ ಮಾತುಗಳಿಗೆ ಯಾವುದೇ ಬ್ರೇಕ್ ಇಲ್ಲದಂತಾಗಿದೆ. ಇನ್ನು ಇದೇ ಸಮಯದಲ್ಲಿ ಕಳೆದ ಬಾರಿಯ ಲೋಕಸಭಾ ಚುನಾವಣೆಯ ವೇಳೆ ನಡೆದ ಘಟನೆಗಳು ಮರುಕಳಿಸುತ್ತಿವೆ.
ಹೌದು ಸ್ನೇಹಿತರೇ, ಕಳೆದ ಬಾರಿ ಲೋಕಸಭಾ ಚುನಾವಣೆಯ ವೇಳೆ ಸುಮಲತಾ ರವರು ಗೆಲ್ಲಲು ಪರೋಕ್ಷ ಕಾರಣ ಕುಮಾರಸ್ವಾಮಿ ರೆವೆಣ್ಣ ಸೇರಿದಂತೆ ಜೆಡಿಎಸ್ ನಾಯಕರು ಅಂಬರೀಷ್ ರವರ ಕುರಿತು ಹಾಗೂ ಸುಮಲತಾ ರವರ ಕುರಿತು ನೀಡಿದ ಹೇಳಿಕೆ ಕಾರಣ ಎಂಬುದು ಎಲ್ಲರಿಗೂ ತಿಳಿದೇ ಇದೇ. ಆದರೆ ಈ ಬಾರಿ ಗಣಿಗಾರಿಕೆ ವಿಚಾರದಲ್ಲಿ ಕುಮಾರಸ್ವಾಮಿ ಯಿಂದ ಹಿಡಿದು, ಎಲ್ಲ ಜೆಡಿಎಸ್ ನಾಯಕರು ಕೇವಲ ಸುಮಲತಾ ರವರನ್ನು ಟಾರ್ಗೆಟ್ ಮಾಡುತ್ತಿದ್ದರು. ಅಂಬರೀಷ್ ರವರ ಕುರಿತು ಹೋಗಲಿ, ಸ್ಮಾರಕ ಕಟ್ಟಿಸಿದ್ದು ನಾನೇ ಎಂದು ಕೂಡ ಕುಮಾರಸ್ವಾಮಿ ರವರು ಹೇಳಿದ್ದರು. ಈ ಮೂಲಕ ಸುಮಲತಾ ರವರಿಗೆ ಇರುವ ಅಂಬಿ ಅಭಿಮಾನಿಗಳನ್ನು ಸೆಳೆಯಲು ಆಲೋಚನೆ ಮಾಡಲಾಗುತಿತ್ತು.
ಆದರೆ ಅದೇ ಸಮಯದಲ್ಲಿ ಸುಮಲತಾ ರವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮುಕ್ತ ಮಂಡ್ಯ ಮಾಡಲು ಪಣ ತೊಟ್ಟು, ಸವಾಲು ಹಾಕಿದ್ದಾರೆ. ಈ ಸಮಯದಲ್ಲಿ ಜೆಡಿಎಸ್ ನಾಯಕ ಶಿವರಾಮೇಗೌಡ ರವರು ಸುಮಲತಾ ರವರಿಗೆ ಮತ್ತೊಂದು ಅಸ್ತ್ರ ನೀಡಿದ್ದಾರೆ. ಹೌದು ಸ್ನೇಹಿತರೇ, ಇದೀಗ ಮಾತನಾಡಿರುವ ಶಿವರಾಮೇಗೌಡ ರವರು ಮಂಡ್ಯ ಜಿಲ್ಲೆಗೆ ಅಂಬರೀಷ್ ರವರ ಕೊಡುಗೆ ಸಂಪೂರ್ಣ ಶೂನ್ಯ, ಮುಂದಿನ ಜಿಲ್ಲಾ ಪಂಚಾಯತಿ ಚುನಾವಣೆಗೆ ಸುಮಲತಾ ರವರು ಅಭ್ಯರ್ಥಿಗಳನ್ನು ಹಾಕಲಿ ಇದು ನನ್ನ ಚಾಲೆಂಜ್, ಒಂದು ಸಲ ಮಂಡ್ಯ ಜನರನ್ನು ಯಾಮಾರಿಸಿದ್ದರ, ಮತ್ತೊಮ್ಮೆ ಸಾಧ್ಯವಿಲ್ಲ, ನೀವು ಮಂಡ್ಯ ರಾಜೇಕೀಯದಲ್ಲಿ ಜೀರೋ ಎಂದು ಹೇಳಿದ್ದಾರೆ. ಈ ಮೂಲಕ ಅಂಬಿ ಅಭಿಮಾನಿಗಳನ್ನು ಕೆಣಕಿದ್ದಾರೆ.