ಐಪಿಎಲ್ ಶುರುವಾಗುವುದಕ್ಕಿಂತ ಮುಂಚೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಿಗ್ ಶಾಕ್. ಏನು ಗೊತ್ತೇ??

ಐಪಿಎಲ್ ಶುರುವಾಗುವುದಕ್ಕಿಂತ ಮುಂಚೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಿಗ್ ಶಾಕ್. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಚೆನ್ನೈ ಸೂಪರ್ ಕಿಂಗ್ ಸದ್ಯ ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ತಂಡ. ಹೆಚ್ಚು ಭಾರಿ ಪ್ಲೇ ಆಫ್ ಗೆ ಹಾಗೂ ಅತಿ ಹೆಚ್ಚು ಭಾರಿ ಫೈನಲ್ ಪ್ರವೇಶಿಸಿದ ತಂಡ ಎಂಬ ಹೆಗ್ಗಳಿಕೆಗೂ ಈ ತಂಡ ಪಾತ್ರವಾಗಿದೆ. ಅದಕ್ಕೆ ಮುಖ್ಯ ಕಾರಣಕರ್ತರೆಂದರೇ ನಾಯಕ ಎಂ.ಎಸ್ ಧೋನಿ ಹಾಗೂ ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ. 2008 ರಿಂದ ಜೊತೆಗಿರುವ ಈ ಜೋಡಿ ಚೆನ್ನೈ ತಂಡಕ್ಕೆ ಅದೆಷ್ಟೋ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದೆ. ಸಿಂಗಲ್ ಆಗಿ ಹಲವಾರು ಮ್ಯಾಚ್ ಗಳನ್ನು ಗೆಲ್ಲಿಸಿರುವ ಉದಾಹರಣೆ ಈ ಜೋಡಿಗಿದೆ.

ಸದ್ಯ ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ದಾಖಲೆ ಸಹ ಸುರೇಶ್ ರೈನಾ ಹೆಸರಿನಲ್ಲಿದೆ. ಕಳೆದ ವರ್ಷ ಯು.ಎ.ಇ ಯಲ್ಲಿ ನಡೆದಿದ್ದ ಐಪಿಎಲ್ ನಲ್ಲಿ ವೈಯುಕ್ತಿಕ ಕಾರಣ ನೀಡಿ ಟೂರ್ನಿಯಿಂದಲೇ ರೈನಾ ಹಿಂದೆ ಸರಿದಿದ್ದರು. ಇದು ಚೆನ್ನೈ ತಂಡದ ಫಲಿತಾಂಶದ ಮೇಲೂ ಪರಿಣಾಮ ಬೀರಿತ್ತು. ಹಲವಾರು ಸೀಸನ್ ಗಳ ನಂತರ ಇದೇ ಮೊದಲ ಭಾರಿ ಚೆನ್ನೈ ತಂಡ ಪ್ಲೇ ಆಫ್ ಗೆ ಪ್ರವೇಶಿಸಲು ವಿಫಲವಾಗಿತ್ತು. ಈ ಭಾರಿ ಭಾರತದಲ್ಲಿ ಅರ್ಧ ನಡೆದಿರುವ ಐಪಿಎಲ್, ಉಳಿದರ್ಧ ಯು.ಎ.ಇ ಯಲ್ಲಿ ನಡೆಯಲಿದೆ. ಆದರೇ ಈ ಮಧ್ಯೆ ಚೆನ್ನೈ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಇತ್ತಿಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಿರುವಾಗ ಸುರೇಶ್ ರೈನಾ ಈ ಶಾಕಿಂಗ್ ಮಾಹಿತಿ ಹೊರಗೆಡವಿದ್ದಾರೆ.

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ರೈನಾ, ಧೋನಿ ಅಂತರಾಷ್ಟ್ರೀಯ ಕ್ರಿಕೇಟ್ ಗೆ ವಿದಾಯ ಹೇಳಿದ ದಿನವೇ ಇವರು ಸಹ ವಿದಾಯ ಹೇಳಿದ್ದರು. ಈಗ ಒಂದು ವೇಳೆ ಧೋನಿ ಐಪಿಎಲ್ ಆಡುವುದಿಲ್ಲ ಎಂದು ತಿಳಿಸಿದರೇ, ನಾನು ಸಹ ಐಪಿಎಲ್ ನಲ್ಲಿ ಆಡುವುದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲಿಗೆ ಸುರೇಶ್ ರೈನಾ ಐಪಿಎಲ್ ನಲ್ಲಿ ಆಡುವುದು ಇನ್ನು ಪ್ರಶ್ನಾರ್ಥಕವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಧೋನಿ ಹಾಗೂ ರೈನಾಗೆ ಇದುವರೆಗೂ ಸೂಕ್ತ ಬ್ಯಾಕ್ ಅಪ್ ಗಳನ್ನು ಸೃಷ್ಠಿ ಮಾಡಿಟ್ಟುಕೊಳ್ಳದೇ ಇರುವುದರಿಂದ ಆ ತಂಡ ಮುಂದಿನ ಐಪಿಎಲ್ ನಲ್ಲಿ ಸಂಕಷ್ಟಕ್ಕಿಡಾಗುವುದು ಬಹುತೇಖ ಖಚಿತ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.