ರೈತ ಪ್ರತಿಭಟನೆ ಮಾಡುತ್ತಿರುವವರಿಗೆ ಮಾಸ್ಟರ್ ಸ್ಟ್ರೋಕ್ ನೀಡಿದ ಮೋದಿ, ಸಂಪುಟ ಪುನರ್ರಚನೆ ಬೆನ್ನಲ್ಲೇ ರೈತರಿಗೆ ಐತಿಹಾಸಿಕ ಸಿಹಿಸುದ್ದಿ ಏನು ಗೊತ್ತಾ??

ರೈತ ಪ್ರತಿಭಟನೆ ಮಾಡುತ್ತಿರುವವರಿಗೆ ಮಾಸ್ಟರ್ ಸ್ಟ್ರೋಕ್ ನೀಡಿದ ಮೋದಿ, ಸಂಪುಟ ಪುನರ್ರಚನೆ ಬೆನ್ನಲ್ಲೇ ರೈತರಿಗೆ ಐತಿಹಾಸಿಕ ಸಿಹಿಸುದ್ದಿ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ದೆಹಲಿಯಲ್ಲಿ ರೈತರ ಪ್ರತಿಭಟನೆ ಎಷ್ಟರ ಮಟ್ಟಕ್ಕೆ ತಲುಪಿದೆ ಎಂಬುದು ಇಡೀ ದೇಶಕ್ಕೆ ತಿಳಿದಿರುವ ಸಂಗತಿಯಾಗಿದೆ. ರೈತರ ಬದುಕನ್ನು ಖಾಸಗೀಕರಣ ಮಾಡಲಾಗುತ್ತಿದೆ ಹಾಗೂ ಎಪಿಎಂಸಿ ಗಳನ್ನು ಮುಚ್ಚಲಾಗುತ್ತಿದೆ ಎಂದು ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಈ ಸಮಯದಲ್ಲಿ ಕೇಂದ್ರ ಮತ್ತೆ ಮತ್ತೆ ಎಪಿಎಂಸಿ ಗಳನ್ನು ಮುಚ್ಚುವುದಿಲ್ಲ ಎಂದು ಹೇಳುತ್ತಿದೆ. ಆದರೂ ಕೂಡ ಹೊಸ ರೈತ ಮಸೂದೆಗಳನ್ನು ವಾಪಸು ಪಡೆಯಬೇಕು ಹಾಗೂ ರೈತರಿಗೆ ವಿವಿಧ ರೀತಿಯಲ್ಲಿ ಸೌಲಭ್ಯಗಳನ್ನು ನೀಡಬೇಕು ಎಂಬುದು ರೈತರ ಮುಖಂಡರ ವಾದವಾಗಿದೆ‌.

ಹೀಗೆ ಹೇಳುತ್ತಾ ಹೋದರೆ ಹತ್ತಾರು ಷರತ್ತುಗಳನ್ನು ಹಾಕಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ ಅದರಲ್ಲಿ ಪ್ರಮುಖವಾಗಿ ಎಪಿಎಂಸಿ ಗಳನ್ನು ಮುಚ್ಚಲಾಗುತ್ತದೆ ಎಂಬ ಮಾತು ಕೇಳಿ ಬರುತ್ತಿರುವ ಕಾರಣ ರೈತರು ಹೆಚ್ಚಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬುದು ಎಲ್ಲರ ವಾದವಾಗಿದೆ. ಆದರೆ ಇದೇ ಸಮಯದಲ್ಲಿ ಯಾವುದೇ ಕಾರಣಕ್ಕೂ ಎಪಿಎಂಸಿ ಗಳನ್ನು ಮುಚ್ಚುವುದಿಲ್ಲ ರೈತರು ಇಷ್ಟ ಬಂದರೆ ಮಾತ್ರ ಇತರರಿಗೆ ತಮ್ಮ ಬೆಳೆಯನ್ನು ಮಾರಾಟ ಮಾಡಬಹುದು ಇಲ್ಲ ಎಪಿಎಂಸಿ ಗಳಿಗೆ ಎಂದಿನಂತೆ ಬಂದು ತಮ್ಮ ಬೆಳೆಗಳನ್ನು ಮಾರಾಟ ಮಾಡಬಹುದು ಎಂದು ಕೇಂದ್ರ ಸ್ಪಷ್ಟಪಡಿಸಿದೆ ಆದರೆ ಈ ಮಾತನ್ನು ರೈತರು ಒಪ್ಪಲು ಸಿದ್ದವಿಲ್ಲ.

ಹೀಗೆ ರೈತ ಮುಖಂಡರು ಎಪಿಎಂಸಿ ಗಳನ್ನು ಕೇಂದ್ರ ಮುಚ್ಚುತ್ತದೆ ಎಂಬ ಮಾತುಗಳನ್ನು ಆಡುತ್ತಿರುವ ಸಮಯದಲ್ಲಿ ಕೇಂದ್ರ ಸರ್ಕಾರ ಸಂಪುಟ ಪುನರ್ರಚನೆ ಬೆನ್ನಲ್ಲೇ ಐತಿಹಾಸಿಕ ಘೋಷಣೆಯನ್ನು ಮಾಡಿದ್ದು ಎಪಿಎಂಸಿ ಗಳನ್ನು ರಾಷ್ಟ್ರ ಹಾಗೂ ರಾಜ್ಯ ಸಹಕಾರ ಒಕ್ಕೂಟ ಗಳು ಹಾಗೂ ರೈತರ ಉತ್ಪಾದಕರ ಸಂಘಟನೆಗಳ ಒಕ್ಕೂಟ ಬಳಸಿಕೊಳ್ಳಲು ಬರೋಬ್ಬರಿ ಒಂದು ಲಕ್ಷ ಕೋಟಿ ಹಣವನ್ನು ಬಿಡುಗಡೆ ಮಾಡಿದ್ದು ಈ ವಿಷಯವನ್ನು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇನ್ನು ಮುಂದೆ ಎಪಿಎಂಸಿ ಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯ ಬಹುದಾಗಿದ್ದು, ಅರ್ಹತಾ ಮಿತಿಯನ್ನು ಕೂಡ ಹೆಚ್ಚಳ ಮಾಡಲಾಗಿದೆ. ಈ ಹೊಸ ಕಾಯ್ದೆಗಳ ಪ್ರಕಾರ ಎಪಿಎಂಸಿ ಗಳಿಕೆ ದೀರ್ಘಾವಧಿ ಸಾಲ ಸಿಗಲಿದೆ ಹಾಗೂ ಖಾಸಗೀಕರಣಕ್ಕೆ ಎಪಿಎಂಸಿಯಲ್ಲಿ ಮಿತಿಯನ್ನು ಹಾಕಲಾಗಿದೆ. 100000 ಕೋಟಿಯನ್ನು ಬಿಡುಗಡೆ ಮಾಡುವ ಮೂಲಕ ಕೇಂದ್ರ ಎಪಿಎಂಸಿ ಮುಚ್ಚುವ ಯಾವುದೇ ಆಲೋಚನೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ