ಕೊಹ್ಲಿ ಆರಂಭಿಕರಾದರೇ, ಟಿ20 ವಿಶ್ವಕಪ್ ನಲ್ಲಿ ಮೂರನೇ ಕ್ರಮಾಂಕದಲ್ಲಿ ಯಾರು ಆಡಬೇಕು ಎಂದು ತಿಳಿಸಿದ ಸಂಜಯ್, ಯಾರಂತೆ ಗೊತ್ತಾ??

ಕೊಹ್ಲಿ ಆರಂಭಿಕರಾದರೇ, ಟಿ20 ವಿಶ್ವಕಪ್ ನಲ್ಲಿ ಮೂರನೇ ಕ್ರಮಾಂಕದಲ್ಲಿ ಯಾರು ಆಡಬೇಕು ಎಂದು ತಿಳಿಸಿದ ಸಂಜಯ್, ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಭಾರತದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಯು.ಎ.ಇ ಗೆ ಶಿಫ್ಟ್ ಆಗಿರುವದು ನಿಮಗೆಲ್ಲಾ ತಿಳಿದಿದೆ. ಇದೇ ಅಕ್ಟೋಬರ್ ಹಾಗೂ ನವೆಂಬರ್ ನಲ್ಲಿ ವಿಶ್ವ ಟಿ20 ಸರಣಿ ನಡೆಯಲಿದೆ. ಈಗಾಗಲೇ ವಿಶ್ವಕಪ್ ಟಿ20 ಟೂರ್ನಿಗೆ ಭಾರತ ಶ್ರೀಲಂಕಾ ವಿರುದ್ದದ ಸರಣಿಯೇ ಅಭ್ಯಾಸವಾಗಲಿದೆ. ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಕ್ರಿಕೇಟ್ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೇಕರ್ ಈಗ ತಮ್ಮ ಸಲಹೆಯೊಂದನ್ನ ನೀಡಿದ್ದಾರೆ.

ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಮಾತನಾಡಿರುವ ಸಂಜಯ್, ಮೂರನೇ ಕ್ರಮಾಂಕದಲ್ಲಿ ಕೆ.ಎಲ್.ರಾಹುಲ್ ಆಡಬಾರದು ಎಂದು ಹೇಳಿದ್ದಾರೆ. ಕೆ.ಎಲ್.ರಾಹುಲ್ ಬದಲು ನಾನು ಸೂರ್ಯ ಕುಮಾರ್ ಯಾದವ್ ಮೂರನೇ ಕ್ರಮಾಂಕದಲ್ಲಿ ಆಡಬೇಕು ಎಂದು ಹೇಳಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದರೇ ಸೂರ್ಯಕುಮಾರ್ ಯಾದವ್ , ಕೆ.ಎಲ್ ರಾಹುಲ್ ಗಿಂತಲೂ ಸೂಕ್ತ ಆಟಗಾರರಾಗುತ್ತಾರೆ ಎಂದು ಹೇಳಿದ್ದಾರೆ. ಇನ್ನು ವಿಕೇಟ್ ಕೀಪರ್ ಗಳ ಆಯ್ಕೆ ಬಗ್ಗೆ ಮಾತನಾಡಿರುವ ಸಂಜಯ್, ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ನಡುವೆ ನಾನು ಇಶಾನ್ ಕಿಶನ್ ರನ್ನ ಆರಿಸುತ್ತೇನೆ.

ಸ್ಥಿರ ಪ್ರದರ್ಶನದ ದೃಷ್ಠಿಯಿಂದ ನೋಡಿದರೇ, ಸಂಜು ಸ್ಯಾಮ್ಸನ್ ಗಿಂತ ಇಶಾನ್ ಕಿಶನ್ ಉತ್ತಮ ಆಯ್ಕೆ ಎಂದು ಹೇಳಿದ್ದಾರೆ. ವಿಶ್ವ ಟಿ20 ಸರಣಿಗೆ ಸಂಜಯ್ ಆರಿಸಿದ ತಂಡ ಹೀಗಿದೆ. – ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆ.ಎಲ್.ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್,ವಾಷಿಂಗ್ಟನ್ ಸುಂದರ್, ಜಸಪ್ರಿತ್ ಬುಮ್ರಾ, ಯುಜವೇಂದ್ರ ಚಾಹಲ್. ಈ ತಂಡದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೂ ನಿಮ್ಮ ಆಯ್ಕೆಯ ತಂಡವನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ‌.