ಶ್ರೀಲಂಕಾ ಕ್ರಿಕೇಟ್ ಅನ್ನು ಮೇಲೆತ್ತಲು ಮಹೇಲಾ ಜಯವರ್ಧನೆ ಮಾಡುತ್ತಿರುವ ತ್ಯಾಗ ಎಂತಹದು ಗೊತ್ತೇ?? ಮಾಡವುತ್ತಿರುವುದಾದರೂ ಏನು ಗೊತ್ತೇ??
ಶ್ರೀಲಂಕಾ ಕ್ರಿಕೇಟ್ ಅನ್ನು ಮೇಲೆತ್ತಲು ಮಹೇಲಾ ಜಯವರ್ಧನೆ ಮಾಡುತ್ತಿರುವ ತ್ಯಾಗ ಎಂತಹದು ಗೊತ್ತೇ?? ಮಾಡವುತ್ತಿರುವುದಾದರೂ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಶ್ರೀಲಂಕಾ ಕ್ರಿಕೇಟ್ ತಂಡ ಎಂದರೇ ಗುಣಮಟ್ಟದ ವಿಶ್ವಶ್ರೇಷ್ಠರಿಂದ ತುಂಬಿದ ತಂಡವಾಗಿತ್ತು. ಹಲವಾರು ವಿಶ್ವದಾಖಲೆಗಳನ್ನು ಸೃಷ್ಠಿಸಿದ ಹಾಗೂ ಮುರಿದ ತಂಡವಾಗಿತ್ತು. ಒಂದು ಭಾರಿ ವಿಶ್ವಚಾಂಪಿಯನ್, ಒಂದು ಟಿ20 ವಿಶ್ವ ಚಾಂಪಿಯನ್, ಚಾಂಪಿಯನ್ಸ್ ಟ್ರೋಫಿ ಜಂಟಿ ವಿಜೇತ, ವಿಶ್ವ ಕಪ್ ನಲ್ಲಿ ಮೂರು ಭಾರಿ ಫೈನಲ್ ಗೆ ಹೋಗಿದ್ದು, ಟಿ20 ವಿಶ್ವಕಪ್ ನಲ್ಲಿ ಮೂರು ಭಾರಿ ಫೈನಲ್ ಪ್ರವೇಶಿಸಿದ್ದು ತಂಡದ ಹೆಗ್ಗಳಿಕೆಯಾಗಿತ್ತು.
ಸನತ್ ಜಯಸೂರ್ಯ, ಮರ್ವನ್ ಅಟ್ಟಪಟ್ಟು, ತಿಲಕರತ್ನೆ ದಿಲ್ಶಾನ್, ಅರ್ಜುನ್ ರಣತುಂಗಾ, ಅರವಿಂದ ಡಿಸಿಲ್ವಾ,ಕುಮಾರ ಸಂಗಕ್ಕಾರ, ಮಹೇಲ ಜಯವರ್ಧನೆ,ಮುತ್ತಯ್ಯ ಮುರಳೀಧರನ್, ಚಮಿಂಡಾ ವಾಸ್, ದಿಲ್ಹಾರ ಫರ್ನಾಂಡೋ, ನುವಾನ್ ಕುಲಶೇಖರ, ಅಜಂತಾ ಮೆಂಡಿಸ್, ಆಂಜೆಲೋ ಮ್ಯಾಥ್ಯುಸ್, ಉಪುಲ್ ತರಂಗಾ ಹೀಗೆ ಸಾಲು ಸಾಲು ಪ್ರತಿಭಾನ್ವಿತ ಆಟಗಾರರು ಹೊರಹೊಮ್ಮಿದ್ದರು.
ಆದರೇ ಸದ್ಯದ ತಂಡದಲ್ಲಿ ಅಂತಹ ಆಟಗಾರರ ಕೊರತೆ ಬಹಳಷ್ಟಿದೆ. ಪ್ರಸ್ತುತ ಶ್ರೀಲಂಕಾ ತಂಡ ಒಂದೂ ಸರಣಿ ಗೆಲ್ಲದೇ ಅದೆಷ್ಟು ವರ್ಷಗಳಾಯಿತೋ ಎಂಬಂತಾಗಿದೆ. ಐಸಿಸಿ ಅಂಕಪಟ್ಟಿಯಲ್ಲೂ ಸಹ ಶ್ರೀಲಂಕಾ ತಂಡ ಬಹಳ ಕೆಳಗಿದೆ. ಹೀಗೆ ಮುಂದುವರೆದರೇ, ಶ್ರೀಲಂಕಾ ಕ್ರಿಕೇಟ್ ತಂಡ, ವಿಶ್ವ ಕ್ರಿಕೇಟ್ ನಲ್ಲಿ ಸಂಪೂರ್ಣ ಅಳಿಸಿ ಹೋಗುವ ಸಾಧ್ಯತೆಯಿತ್ತು.
ಹಾಗಾಗಿ ಈಗ ಶ್ರೀಲಂಕಾ ತಂಡದ ಮಾಜಿ ನಾಯಕ ಮಹೇಲಾ ಜಯವರ್ಧನೆ ಒಂದು ಧೃಡ ನಿರ್ಧಾರಕ್ಕೆ ಬಂದಿದ್ದಾರೆ. ಅದೆನೆಂದರೇ ಅವರು ಒಂದು ರೂಪಾಯಿ ಸಂಭಾವನೆ ಪಡೇಯದೇ ಶ್ರೀಲಂಕಾದ ಅಂಡರ್ 19 ತಂಡದ ಮುಖ್ಯ ಸಲಹೆಗಾರನಾಗುತ್ತೇನೆ ಎಂದು ತಿಳಿಸಿದ್ದಾರೆ. ಈ ಮೂಲಕ ಶ್ರೀಲಂಕಾ ಕ್ರಿಕೇಟ್ ನ ಬೇರು ಮಟ್ಟದಲ್ಲಿ ಗಟ್ಟಿಗೊಳಿಸುವತ್ತ ಹೆಜ್ಜೆ ಹಾಕಿದ್ದಾರೆ. ಭಾರತದಲ್ಲಿ ರಾಹುಲ್ ದ್ರಾವಿಡ್ ರಂತೆ, ಶ್ರೀಲಂಕಾದಲ್ಲಿ ಮಹೇಲಾ ಜಯವರ್ಧನೆ ಸಹ ಉತ್ತಮ ಯುವ ಕ್ರಿಕೇಟಿಗರನ್ನು ಹುಟ್ಟುಹಾಕುವಲ್ಲಿ ಕೆಲಸ ಮಾಡುವತ್ತ ಸಾಗಿದ್ದಾರೆ. ಅವರ ಪ್ರಯತ್ನ ಯಶಸ್ವಿಯಾಗಲಿ. ಮಹೇಲಾ ಜಯವರ್ಧನೆಯವರ ಈ ತ್ಯಾಗದ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.