ರೋಹಿತ್ ಅಲ್ಲವೇ ಅಲ್ಲ, ಕೊಹ್ಲಿ ನಂತರ ಕ್ಯಾಪ್ಟನ್ ಯಾರು ಆಗಬೇಕು ಎಂದು ತಿಳಿಸಿದ ಯುವರಾಜ್, ಯಾರಂತೆ ಗೊತ್ತಾ??
ರೋಹಿತ್ ಅಲ್ಲವೇ ಅಲ್ಲ, ಕೊಹ್ಲಿ ನಂತರ ಕ್ಯಾಪ್ಟನ್ ಯಾರು ಆಗಬೇಕು ಎಂದು ತಿಳಿಸಿದ ಯುವರಾಜ್, ಯಾರಂತೆ ಗೊತ್ತಾ??
ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇನ್ನು ನಾಲ್ಕೈದು ವರ್ಷಗಳ ಕಾಲ ಭಾರತ ಕ್ರಿಕೆಟ್ ತಂಡಕ್ಕೆ ಯಾವುದೇ ನಾಯಕತ್ವದ ಬದಲಾವಣೆ ನಡೆಯುವುದು ಸಾಧ್ಯವೇ ಇಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಹೀಗಿರುವಾಗ ರೋಹಿತ್ ಶರ್ಮಾ ರವರು ಭಾರತ ಕ್ರಿಕೆಟ್ ತಂಡದ ಸಂಪೂರ್ಣ ನಾಯಕನಾಗುವ ಕನಸು ಕೇವಲ ಕನಸಾಗಿ ಉಳಿಯುವುದು ಖಚಿತ. ಯಾಕೆಂದರೆ ನಾಲ್ಕೈದು ವರ್ಷಗಳ ನಂತರ ರೋಹಿತ್ ಶರ್ಮ ರವರು ಕ್ರಿಕೆಟ್ ಆಡುವುದು ಅವರ ಫಿಟ್ನೆಸ್ ನೋಡಿದರೇ ಸಾಧ್ಯವೇ ಇಲ್ಲ ಎನಿಸುತ್ತದೆ.
ವಿರಾಟ್ ಕೊಹ್ಲಿ ರವರ ಸಮಕಾಲಿಕ ರಾಗಿರುವ ರೋಹಿತ್ ಶರ್ಮ ರವರು, ಕೊಹ್ಲಿ ರಾವರಿಗಿಂತ ಮುನ್ನ ನಿವೃತ್ತಿ ಪಡೆದುಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಹೀಗಿರುವಾದ ಭಾರತ ತಂಡವನ್ನು ಕೊಹ್ಲಿ ರವರ ನಂತರ ಯಾರು ಮುನ್ನಡೆಸುತ್ತಾರೆ ಎಂಬುದು ಎಲ್ಲರೂ ಮಾಡುತ್ತಿರುವ ಒಂದು ಪ್ರಮುಖ ಚರ್ಚೆಯಾಗಿದೆ. ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್ ಇವರಿಬ್ಬರಲ್ಲಿ ಒಬ್ಬರು ನಾಯಕನಾಗಬಹುದು ಎಂಬ ಮಾತುಗಳು ಕಳೆದ ಒಂದು ವರ್ಷದಿಂದ ಕೇಳಿ ಬರುತಿತ್ತು. ಆದರೆ ಇದೀಗ ಇವರಿಬ್ಬರ ಸಾಲಿಗೆ ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ ರವರು ಕೂಡ ಸೇರಿಕೊಂಡಿದ್ದಾರೆ. ಹಾಗೂ ಇದೆ ಸಮಯದಲ್ಲಿ ಮಾಜಿ ಕ್ರಿಕೆಟಿಗ ವರ್ಲ್ಡ್ ಕಪ್ ಹೀರೋ ಯುವರಾಜ್ ರವರು ಮುಂದಿನ ನಾಯಕ ಯಾರು ಆಗಬೇಕು ಎಂದು ತಿಳಿಸಿದ್ದಾರೆ.
ಇವರ ಆಯ್ಕೆ ಈ ಕೆಳಗಿನಂತೆ ಇದ್ದು, ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ. ಸ್ನೇಹಿತರೇ ಇದೀಗ ಮಾತನಾಡಿರುವ ಯುವರಾಜ್ ಸಿಂಗ್ ರವರು, ಈಗಾಗಲೇ ಮೊದ ಮೊದಲು ಎಲ್ಲರೂ ಟ್ರೊಲ್ ಮಾಡಿದರೂ ಕೂಡ ತದ ನಂತರ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ದೇಶಗಳಲ್ಲಿ ಮಿಂಚಿನ ಪ್ರದರ್ಶನ ನೀಡುವ ಮೂಲಕ ಭಾರತ ತಂಡಕ್ಕೆ ಗೆಲುವಿನ ಸಿಹಿ ನೀಡಿದ ರಿಷಬ್ ಪಂತ್ ರವರು ನಾಯಕನಾಗಬೇಕು, ಐಪಿಎಲ್ ನಲ್ಲಿ ಈಗಾಗಲೇ ತಮ್ಮ ನಾಯಕತ್ವವನ್ನು ರಿಷಬ್ ಪಂತ್ ಸಾಬೀತು ಪಡಿಸಿದ್ದಾರೆ, ಖಂಡಿತಾ ಭಾರತ ತಂಡದ ನಾಯಕ ಈತನು ಆಗಬೇಕು ಎಂದಿದ್ದಾರೆ.