ಭಾರತದ ಪ್ರವಾಸದಿಂದ ಶ್ರೀಲಂಕಾ ಕ್ರಿಕೇಟ್ ಬೋರ್ಡ್ ಗಳಿಸುತ್ತಿರುವ ಸಂಪಾದನೆ ಎಷ್ಟು ಗೊತ್ತಾ?? ಒಂದೇ ಸರಣಿಗೆ ಇಷ್ಟೊಂದಾ??
ಭಾರತದ ಪ್ರವಾಸದಿಂದ ಶ್ರೀಲಂಕಾ ಕ್ರಿಕೇಟ್ ಬೋರ್ಡ್ ಗಳಿಸುತ್ತಿರುವ ಸಂಪಾದನೆ ಎಷ್ಟು ಗೊತ್ತಾ?? ಒಂದೇ ಸರಣಿಗೆ ಇಷ್ಟೊಂದಾ??
ನಮಸ್ಕಾರ ಸ್ನೇಹಿತರೇ ಆನೆ ಇದ್ದರೂ ಕೋಟಿ ಹೋದರೂ ಕೋಟಿ ಎಂಬ ಗಾದೆ ಸದ್ಯ ಟೀಂ ಇಂಡಿಯಾಕ್ಕೆ ಸೂಟ್ ಆಗುತ್ತದೆ. ಭಾರತ ಸ್ವದೇಶದಲ್ಲಿ ಆಡಲಿ ಅಥವಾ ವಿದೇಶಗಳಲ್ಲಿ ಆಡಲಿ, ಆಯಾ ಕ್ರಿಕೇಟ್ ಮಂಡಳಿಗಳಂತೂ ಭರಪೂರ ಲಾಭ ಮಾಡಿಕೊಳ್ಳುತ್ತವೆ. ಸಂಪೂರ್ಣ ಕಳೆಗಟ್ಟಿದ ತಂಡ ಇಟ್ಟುಕೊಂಡ ಶ್ರೀಲಂಕಾ ಕ್ರಿಕೇಟ್ ಮಂಡಳಿ ಪ್ರಾಯೋಜಕರಿಲ್ಲದೇ ಬಹಳಷ್ಟು ನಷ್ಟ ಅನುಭವಿಸುತ್ತಿತ್ತು. ಸದ್ಯದ ಟೀಂ ಇಂಡಿಯಾದ ಶ್ರೀಲಂಕಾ ಪ್ರವಾಸ ಅದಕ್ಕೆ ಸಂಜೀವಿನಿ ದೊರೆತಂತಿದೆ.
ಮೊದಲು ಭಾರತ ತಂಡ ಕೇವಲ ಮೂರು ಏಕದಿನ ಪಂದ್ಯಗಳ ಪ್ರವಾಸಕ್ಕೆ ಮಾತ್ರ ಒಪ್ಪಿಕೊಂಡಿತ್ತು. ಆದರೇ ಶ್ರೀಲಂಕಾ ಕ್ರಿಕೇಟ್ ಮಂಡಳಿಯ ಮನವಿಯ ನಂತರ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳನ್ನು ಆಯೋಜಿಸಲು ಒಪ್ಪಿಕೊಂಡಿದೆ. ಎಲ್ಲಾ ಪಂದ್ಯಗಳು ಸೋನಿ ಸಿಕ್ಸ್ ಚಾನೆಲ್ ನಲ್ಲಿ ಲೈವ್ ಟೆಲಿಕಾಸ್ಟ್ ಆಗಲಿವೆ. ಪಂದ್ಯದ ಪ್ರಾಯೋಜಕತ್ವವನ್ನು ಅನ್ ಅಕಾಡೆಮಿ ವಹಿಸಿಕೊಳ್ಳುವುದು ಬಹುತೇಖ ಖಚಿತವಾಗಿದೆ. ಅನ್ ಅಕಾಡೆಮಿ ಜೊತೆಗೆ ಡ್ರೀಮ್ 11 , ಕಾಯಿನ್ ಡಿಸಿಎಕ್ಸ್ ಹಾಗೂ ಸ್ಕೋಡಾ ಸಹ ಜಾಹೀರಾತುದಾರರಾಗಿದ್ದಾರೆ.
ಇಂತಹ ಮಹತ್ವದ ಸರಣಿ ಏರ್ಪಡಿಸಿರುವ ಲಂಕಾ, ಈ ಸರಣಿಯಿಂದ ಪಡೆಯಲಿರುವ ಲಾಭ ಎಷ್ಟು ಎಂದು ತಿಳಿದರೇ, ಒಂದು ಕ್ಷಣ ನೀವು ಹೌಹಾರಲಿದ್ದಿರಿ.ಹೌದು ಶ್ರೀಲಂಕಾ ಕ್ರಿಕೇಟ್ ಮಂಡಳಿ ಈ ಸರಣಿಯಿಂದ ಬರೋಬ್ಬರಿ 12 ಮಿಲಿಯನ್ ಡಾಲರ್ ಆದಾಯವನ್ನು ಗಳಿಸಲಿದೆ ಎಂದು ಅಂದಾಜಿಸಲಾಗಿದೆ. ಅಂದರೇ ಭಾರತದ ಕರೆನ್ಸಿ ಪ್ರಕಾರ ಬರೋಬ್ಬರಿ 89 ಕೋಟಿ ರೂಪಾಯಿಗಿಂತಲೂ ಜಾಸ್ತಿ. ಶ್ರೀಲಂಕಾ ತಂಡ ಕಳಪೆ ಪ್ರದರ್ಶನ ನೀಡದೇ, ಉತ್ತಮ ಹೋರಾಟವನ್ನ ನೀಡುವ ಮೂಲಕ ಶ್ರೀಲಂಕಾದ ಕ್ರಿಕೇಟ್ ಪ್ರೇಮಿಗಳಿಗೆ ಕೊಂಚ ಖುಷಿ ನೀಡಬೇಕು. ಕೇವಲ ಬಾಂಗ್ಲಾ ಮತ್ತು ಜಿಂಬಾಬ್ವೆ ವಿರುದ್ದದ ಸರಣಿಯಲ್ಲಿ ಮಾತ್ರ ಜಯಗಳಿಸಿರುವ ಶ್ರೀಲಂಕಾದ ಕ್ರಿಕೇಟ್ ಗುಣಮಟ್ಟ ಕುಸಿಯುತ್ತಿದ್ದರೇ, ಯಾವ ದೇಶವೂ ಅಲ್ಲಿಗೆ ಕ್ರಿಕೇಟ್ ಆಡಲು ಬರುವುದಿಲ್ಲ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.