ಕೊಹ್ಲಿ ಸಹಾಯಕ್ಕೆ ನಿಂತ ಕಪಿಲ್, ಕನ್ನಡಿಗರಿಗೆ ಮತ್ತೊಂದು ಸಿಹಿ ಸುದ್ದಿ, ಮುಂಬೈ ಲಾಬಿ ಆಟಕ್ಕೆ ಬ್ರೇಕ್. ನಡೆದ್ದದೇನು ಗೊತ್ತೇ??
ಕೊಹ್ಲಿ ಸಹಾಯಕ್ಕೆ ನಿಂತ ಕಪಿಲ್, ಕನ್ನಡಿಗರಿಗೆ ಮತ್ತೊಂದು ಸಿಹಿ ಸುದ್ದಿ, ಮುಂಬೈ ಲಾಬಿ ಆಟಕ್ಕೆ ಬ್ರೇಕ್. ನಡೆದ್ದದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ, ಭಾರತ ತಂಡದ ಆಯ್ಕೆಯ ಕುರಿತು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಚರ್ಚೆ ನಡೆಯುತ್ತಿರಲಿಲ್ಲ. ಯಾಕೆಂದರೆ ಪ್ರತಿಭೆ ಹೊಂದಿರುವ ಯಾರೇ ಆಗಲಿ, ಉತ್ತಮ ಪ್ರದರ್ಶನ ನೀಡಿದರೂ ಎಂದರೆ ಭಾರತ ತಂಡಕ್ಕೆ ಆಯ್ಕೆ ಯಾಗುತ್ತಿದ್ದರು. ಮೊದಲಿನ ಹಾಗೆ ರಾಜ್ಯಗಳ ಅನುಸಾರ ಅಥವಾ ಇನ್ಯಾವುದೋ ಸ್ಟಾರ್ ಪ್ರಭಾವ ಹೊಂದಿರುವವರಿಗೆ ಉತ್ತಮ ಪ್ರದರ್ಶನ ನೀಡದೇ ಇದ್ದರೂ ಕೂಡ ತಂಡದಲ್ಲಿ ಸ್ಥಾನ ನೀಡಿ ಪ್ರತಿಭಾವಂತರನ್ನು ಹೊರಗಿಡಲು ಕೊಹ್ಲಿ ಹಾಗೂ ಗಂಗೂಲಿ ಬಿಡುತ್ತಿರಲಿಲ್ಲ.
ಪ್ರತಿ ಬಾರಿ ಹಲವಾರು ಕ್ರಿಕೆಟ್ ವಿಶ್ಲೇಷಕರು ಮುಂಬೈ ಆಟಗಾರರಿಗೆ ಹೆಚ್ಚಿನ ಮಣೆ ಹಾಕುತ್ತಿದ್ದರೂ ಕೂಡ ಯಾರು ಅಷ್ಟಾಗಿ ಸೊಪ್ಪು ಹಾಕುತ್ತಿರಲಿಲ್ಲ, ಆದರೆ ಕಳೆದ ಎರಡು ವಾರದಿಂದ ಇದರ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ, ಇದಕ್ಕೆ ಕಾರಣ ತಂಡದಲ್ಲಿ ಮುಂಬೈ ಲಾಬಿ ಇದೆ ಎನ್ನುವ ಸಮಯದಲ್ಲಿ ನಾಯಕನಾಗಿ ಆಯ್ಕೆಯಾಗಿ ಮುಂಬೈ ಲಾಭಿಗೆ ಅವಕಾಶ ನೀಡದೇ ನಾಯಕನಾಗಿ ಮೆರೆದಿದ್ದ ಕೊಹ್ಲಿ ರವರು ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ನಲ್ಲಿ ಸೊತ್ತಿದ್ದು.
ಹೌದು, ಇದನ್ನು ತಂಡದ ಸೋಲು ಎನ್ನದೆ ಕೊಹ್ಲಿಯ ಸೋಲು ಈ ಕೂಡ ನಾಯಕ್ತ್ವವನ್ನು ರೋಹಿತ್ ಗೆ ಒಪ್ಪಿಸಬೇಕು ಎಂಬ ಮಾತುಗಳು ಕೇಳಿ ಬಂದಿದ್ದವು. ಅಷ್ಟೇ ಅಲ್ಲ, ಹಲವಾರು ಆಟಗಾರರಿಗೆ ಮಣೆ ಹಾಕಿ ಮೇಜರ್ ಸರ್ಜರಿ ಮಾಡಬೇಕು ಎಂಬ ಧ್ವನಿಯನ್ನು ಮುಂಬೈ ನ ಮಾಜಿ ಆಟಗಾರರು, ಮುಂಬೈ ನ ಕ್ರಿಕೆಟ್ ವಿಶ್ಲೇಷಕರು ಆಡಿದ್ದರು. ಅದೇ ಕಾರಣಕ್ಕಾಗಿ ಇಂಗ್ಲೆಂಡ್ ಗೆ ರಾಹುಲ್, ಮಾಯಾಂಕ್ ಸೇರಿದಂತೆ ವಿವಿಧ ಆರಂಭಿಕ ಆಟಗಾರರು ತೆರಳಿದ್ದರೂ ಕೂಡ ಶುಭಮ್ ಗಿಲ್ ಇಂಜುರಿ ಆದ ತಕ್ಷಣ ಪೃಥ್ವಿ ಶಾ ರವರನ್ನು ಇಂಗ್ಲೆಂಡ್ ಕಳುಹಿಸಲು ಗವಾಸ್ಕರ್ ಸೇರಿದಂತೆ ಮುಂಬೈ ನ ಮಾಜಿ ಆಟಗಾರರು, ಮುಂಬೈ ನ ಕ್ರಿಕೆಟ್ ವಿಶ್ಲೇಷಕರು ಪಟ್ಟು ಹಿಡಿದಿದ್ದರು.
ಆದರೆ ಈ ವಿಷಯ ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್ ರವರಿಗೆ ಕೇಳುತ್ತಿದ್ದಂತೆ ಸದಾ ಕೂಲ್ ಆಗಿ ಇರುವ ಕಪಿಲ್ ದೇವ್ ರವರು ಕೂಡ ಗರಂ ಆಗಿದ್ದರು. ಅದೇಗೆ ನೀವು ಇಂಗ್ಲೆಂಡ್ ನಲ್ಲಿ ವಿವಿಧ ಆರಂಭಿಕ ಆಟಗಾರರು ಇದ್ದರೂ ಕೂಡ ಶುಭಮ್ ಸ್ಥಾನಕ್ಕೆ ಪೃಥ್ವಿ ಶಾ ರವರನ್ನು ಆಯ್ಕೆ ಮಾಡುತ್ತೀರಿ. ಅವರನ್ನು ಅಲ್ಲಿಗೆ ಕಳುಹಿಸಿದ್ದು ಬೆಂಚ್ ಕಾಯಲು ಅಲ್ಲ, ತಂಡ ಗೆಲ್ಲುವ ವರೆಗೂ ಇದ್ದ ಆಟಗಾರರಿಗೆ ಸೋತಾಗ ಅವಕಾಶ ಕೂಡ ನೀಡದೇ ಹೇಗೆ ಬದಲಾಯಿಸುತ್ತೀರಿ. ರಾಹುಲ್ ಮಾಯಾಂಕ್ ಆಟ ಕೂಡ ಆಡಿಲ್ಲ, ಅವರ ಬದಲು ಹೇಗೆ ಪೃಥ್ವಿ ಯನ್ನು ಕಳುಹಿಸುತ್ತೀರಿ.
ಇನ್ನು ಕೊಹ್ಲಿ ರಾಜೀನಾಮೆ ಕೇಳುವ ಪ್ರತಿಯೊಬ್ಬರೂ ಸುಮ್ಮನೆ ಇರಬೇಕು, ಭಾರತ ತಂಡ ಸ್ವಿಂಗ್ ಬೌಲರ್ ಇಲ್ಲದೆ ಹೋಗಿದ್ದು ತಪ್ಪಲ್ಲ, ಯಾಕೆಂದರೆ ಮಳೆ ಬರುತ್ತದೆ ಎಂದು ತಂಡಕ್ಕೆ 30 ಸದಸ್ಯರನ್ನು ಆಯ್ಕೆ ಮಾಡಿದಾಗ ತಿಳಿದಿರಲಿಲ್ಲ. ಇಲ್ಲವಾದಲ್ಲಿ ಅದು ವೇಗದ ಪಿಚ್ ಆಗುತ್ತಿತ್ತು, ಅಲ್ಲಿ ಭಾರತೀಯ ಸ್ಪಿನ್ನರ್ ಗಳು ಮ್ಯಾಜಿಕ್ ಮಾಡುತ್ತಿದ್ದರು. ಆಸ್ಟ್ರೇಲಿಯಾ ದಲ್ಲಿ ಮಾಡಲಿಲ್ಲವೇ?? ಈಗ ಕೊಹ್ಲಿ ನಾಯಕತ್ವ ನೆನಪಾಯಿತೇ ಎಂದಿದ್ದರು.
ಇದಾದ ಬಳಿಕ ಎಲ್ಲರೂ ಕಪಿಲ್ ದೇವ್ ರವರ ಮಾತಿಗೆ ಬೆಂಬಲ ಸೂಚಿಸಿದ ಕಾರಣ ಮುಂದಿನ ಇಂಗ್ಲೆಂಡ್ ಪ್ರವಾಸಕ್ಕೆ ಪೃಥ್ವಿ ಶಾಹ್ ರವರನ್ನು ಕಳುಹಿಸದೆ ಇರಲಿ ಬಿಸಿಸಿಐ ನಿರ್ಧಾರ ಮಾಡಿ, ಶುಭಮ್ ಗಿಲ್ ರವರ ಸ್ಥಾನಕ್ಕೆ ಕೊಹ್ಲಿ ರವರ ಆಯ್ಕೆಯಂತೆ ರಾಹುಲ್ ಹಾಗೂ ಮಾಯಾಂಕ್ ಅಗರ್ವಾಲ್ ರವರನ್ನು ಬಳಸಿಕೊಳ್ಳಲು ನಿರ್ಧಾರ ಮಾಡಿದೆ ಎಂಬುದು ಖಚಿತವಾಗಿದೆ. ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ ಆಯ್ಕೆ ಸಮಿತಿ ಪೃಥ್ವಿ ಶಾ ಇಂಗ್ಲೆಂಡ್ ಗೆ ಹೋಗುವುದಿಲ್ಲ ಎಂದು ಖಚಿತ ಪಡಿಸಿದೆ.