ಒಂದು ಲಸಿಕೆಗಾಗಿ ದರ್ಶನ್ ಸಿನಿಮಾದ ನಟಿ ಯಾವ ರೀತಿ ಕೆಳಮಟ್ಟಕ್ಕೆ ಇಳಿದಿದ್ದಾರೆ ಗೊತ್ತಾ?? ಯಪ್ಪಾ.

ನಮಸ್ಕಾರ ಸ್ನೇಹಿತರೇ ದೇಶಾದ್ಯಂತ ಈಗಾಗಲೇ ಮಹಾಮಾರಿ ಯಿಂದಾಗಿ ಜನರು ಸಾಕಷ್ಟು ಬಳಲುತ್ತಿದ್ದಾರೆ. ಲಸಿಕೆಯನ್ನು ಹಾಕಿಕೊಳ್ಳಲು ತಾಮುಂದು ನಾಮುಂದು ಎಂದು ಜನರು ಆರೋಗ್ಯ ಕೇಂದ್ರಗಳ ಬಳಿಗೆ ಸೇರಿದ್ದಾರೆ. ಉನ್ನತ ಅಧಿಕಾರಿಗಳು ಸಹ ಎಲ್ಲ ಜನರಿಗೆ ಸಿಕ್ಕಿ ಹಾಕಿಕೊಳ್ಳುವಂತೆ ದಿನದಿಂದ ದಿನಕ್ಕೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಇನ್ನು ಈ ಎಲ್ಲದರ ನಡುವೆ ದರ್ಶನ್ ಚಿತ್ರದ ನಾಯಕಿ ಒಬ್ಬರು ಲಸಿಕೆಯನ್ನು ಹಾಕಿಕೊಳ್ಳಲು ವಾಮಮಾರ್ಗ ಉಪಯೋಗಿಸಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೌದು ಈ ಕುರಿತಂತೆ ನಿಮಗೆ ಸಂಪೂರ್ಣ ಮಾಹಿತಿಯನ್ನು ವಿವರವಾಗಿ ಹೇಳುತ್ತೇನೆ ಬನ್ನಿ.

ಹೌದು ನಾವು ಹೇಳಲು ಹೊರಟಿರುವ ನಟಿ ಇನ್ಯಾರು ಅಲ್ಲ ಚೋಪ್ರಾ ಫ್ಯಾಮಿಲಿಯಿಂದ ಬಂದಿರುವ ಮೀರಾ ಚೋಪ್ರಾ. ಹೌದು ಮೀರಾ ಚೋಪ್ರಾ ರವರು ಬಾಲಿವುಡ್ ನ ಖ್ಯಾತ ನಟಿ ಹಾಗೂ ಈಗಾಗಲೇ ಹಾಲಿವುಡ್ನಲ್ಲಿ ಕೂಡ ಹೆಸರು ಮಾಡಿರುವ ನಟಿ ಪ್ರಿಯಾಂಕ ಚೋಪ್ರಾ ರವರ ಸಂಬಂಧದಲ್ಲಿ ಸಹೋದರಿ ಆಗಿರುವ ಇವರು ಕೇವಲ ಹಿಂದಿ ಚಿತ್ರರಂಗ ಮಾತ್ರವಲ್ಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೂಡ ನಟನೆ ಮಾಡಿದವರು. ಮೀರಾ ಚೋಪ್ರಾ ಅವರು ನಟಿಸಿದ್ದು ಕೆಲವೇ ಚಿತ್ರಗಳಲ್ಲಿ ಆದರೂ ಬಹಳಷ್ಟು ಸುದ್ದಿಯಲ್ಲಿದ್ದರು.

ಇನ್ನು ಅವರು ತಮಿಳು ಕನ್ನಡ ಹಿಂದಿ ತೆಲುಗು ಹಲವಾರು ಭಾಷೆಗಳಲ್ಲಿ ಏನಿಲ್ಲವೆಂದರೂ 30ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೂಪರ್ ಹಿಟ್ ಚಿತ್ರ ಅರ್ಜುನ್ ದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ಬಾಕ್ಸಾಫೀಸ್ ನಲ್ಲಿ ಸೂಪರ್ ಹಿಟ್ ಆಗಿ ಪ್ರೇಕ್ಷಕರ ಮನಗೆದ್ದರು ಸಹ ಮೀರಾ ಚೋಪ್ರಾ ರವರನ್ನು ಜನರು ಅಷ್ಟೊಂದು ನೆನಪಿಟ್ಟುಕೊಳ್ಳಲಿಲ್ಲ.

ಅದಾದನಂತರ ಮೀರಾ ಚೋಪ್ರಾ ರವರು ಕನ್ನಡದಲ್ಲಿ ಬೇರೆ ಯಾವ ಚಿತ್ರಗಳಲ್ಲಿ ನಟಿಸಲಿಲ್ಲ. ಇನ್ನು ತೆಲುಗಿನಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ರವರ ಜೊತೆಗೆ ಕೂಡ ನಟಿಸಿ ಮಿಂಚಿದ್ದಾರೆ. ದಕ್ಷಿಣ ಭಾರತದಲ್ಲಿ ಹಲವಾರು ಚಿತ್ರರಂಗದಲ್ಲಿ ನಟಿಸಿದ್ದರು ಸಹ ಯಾವುದು ಅವರ ಕೈಹಿಡಿಯಲಿಲ್ಲ ಹಾಗೂ ಹೇಳಿಕೊಳ್ಳುವಷ್ಟು ಯಶಸ್ಸು ನೀಡಲಿಲ್ಲ. ಇನ್ನು ಇವರು ವೆಬ್ ಸೀರೀಸ್ ಗಳಲ್ಲಿ ಕೂಡ ನಟಿಸಿದ್ದಾರೆ. ಯಶಸ್ವಿ ನಟಿ ಎಂದು ಹೇಳದಿದ್ದರೂ ಜನರು ಇವರನ್ನು ಇಂದಿಗೂ ನಟಿಯರಾಗಿ ಗುರುತಿಸುತ್ತಾರೆ ಎಂದು ಹೇಳಬಹುದು.

ಇವರು ತಾನು ಯಶಸ್ವಿಯಾಗದೆ ಇರೋದಕ್ಕೆ ಕಾರಣ ಪ್ರಿಯಾಂಕ ಚೋಪ್ರಾ ಎಂದು ಹಲವಾರು ಬಾರಿ ಅಲ್ಲಗಳೆದಿದ್ದರು. ಸ್ನೇಹಿತರೆ ಪ್ರಿಯಾಂಕ ಚೋಪ್ರಾ ಅವರು ಸಹ ತಮ್ಮ ಪ್ರತಿಭೆಯ ಮೂಲಕ ಯಶಸ್ವಿ ನಟಿಯಾಗಿ ಈಗ ಬಾಲಿವುಡ್ ನಲ್ಲಿ ಹಾಲಿವುಡ್ ನಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಪ್ರತಿಭೆ ಇದ್ದರೆ ಏನನ್ನು ಕೂಡ ಸಾಧಿಸಬಹುದು ಎಂದು ಅವರು ಸಾಬೀತುಪಡಿಸಿದ್ದಾರೆ. ಇನ್ನು ಇತ್ತೀಚೆಗೆ ಮೀರಾ ಚೋಪ್ರಾ ರವರು ಬಹಳಷ್ಟು ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರು ಲಸಿಕೆ ಹಾಕಿಸಿಕೊಳ್ಳಲು ವಾಯುಮಾರ್ಗವನ್ನು ಉಪಯೋಗಿಸಿದ್ದಾರೆ ಎಂಬುದು. ಮೀರಾ ಚೋಪ್ರಾ ಅವರು ಬಳಸಿದ ವಾಮಮಾರ್ಗ ಏನೆಂಬುದನ್ನು ನಿಮಗೆ ಸಂಪೂರ್ಣ ವಿವರವಾಗಿ ಹೇಳುತ್ತೇನೆ ಬನ್ನಿ.

ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅರ್ಜುನ್ ಚಿತ್ರದಲ್ಲಿ ನಾಯಕಿ ನಟಿಯಾಗಿ ಕಾಣಿಸಿಕೊಂಡಿದ್ದ ಮೀರಾ ಚೋಪ್ರಾ ರವರು ಲಸಿಕೆ ಪಡೆಯಲು ವಾಮ ಮಾರ್ಗವನ್ನು ಉಪಯೋಗಿಸಿದ್ದಾರೆ. ಮೂಲಗಳ ಪ್ರಕಾರ ಮೀರಾ ಚೋಪ್ರಾ ರವರು ಲಸಿಕೆ ಪಡೆಯಲು ಆರೋಗ್ಯ ಕಾರ್ಯಕರ್ತೆಯರ ನಕಲಿ ಗುರುತು ಪತ್ರ ಉಪಯೋಗಿಸಿದ್ದಾರೆ ಎಂದು ಎಲ್ಲರೂ ಅಪವಾದ ಮಾಡುತ್ತಿದ್ದಾರೆ. ಆದರೆ ಮೀರಾ ಚೋಪ್ರಾ ಅವರು ಹೇಳುವಂತೆ ನಾನು ಯಾವುದೇ ನಕಲಿ ಗುರುತುಪತ್ರ ಉಪಯೋಗಿಸಿಲ್ಲ.

ನಾನು ನನ್ನ ಆಧಾರ್ ಕಾರ್ಡ್ ಹಾಗೂ ಇನ್ನಿತರ ಗುರುತುಪತ್ರ ಗಳನ್ನು ಉಪಯೋಗಿಸಿ ಲಸಿಕೆ ಪಡೆದಿದ್ದೇನೆ ಎಂಬುದಾಗಿ ಹೇಳಿ ಕೊಂಡಿದ್ದಾರೆ. ಆದರೆ ಈ ಅಪವಾದ ಬಂದ ಹಿನ್ನೆಲೆಯಲ್ಲಿ ತಾವು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಸಿಕ್ಕಿ ಹಾಕಿಕೊಂಡಿದ್ದ ಫೋಟೋವನ್ನು ಕೂಡಲೆ ಡಿಲೀಟ್ ಮಾಡಿದ್ದಾರೆ. ಇದನ್ನು ನೋಡಿದರೆ ಮಾಡುತ್ತಿರುವ ಅಪವಾದಗಳು ನಿಜವೆಂದು ಕಾಣಿಸುತ್ತಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Facebook Comments

Post Author: Ravi Yadav