ಇಡೀ ಭಾರತದಲ್ಲಿ ಯಾರು ಪಡೆಯದ ಪ್ರಶಸ್ತಿಯನ್ನು ಪಡೆದ ಏಕೈಕ ಹೆಮ್ಮೆಯ ನಟ ಯಾರು ಗೊತ್ತೇ?? ಆ ವಿಶೇಷ ಪ್ರಶಸ್ತಿ ಯಾವುದು ಗೊತ್ತೇ??

ಇಡೀ ಭಾರತದಲ್ಲಿ ಯಾರು ಪಡೆಯದ ಪ್ರಶಸ್ತಿಯನ್ನು ಪಡೆದ ಏಕೈಕ ಹೆಮ್ಮೆಯ ನಟ ಯಾರು ಗೊತ್ತೇ?? ಆ ವಿಶೇಷ ಪ್ರಶಸ್ತಿ ಯಾವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಅದೆಷ್ಟು ನಟರು ತಮ್ಮ ಕೊಡುಗೆಯನ್ನು ನೀಡಿ ಇಂದಿಗೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ಅಜರಾಮರರಾಗಿ ಉಳಿದು ಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಪರಿಶ್ರಮ ಹಾಗು ತಮ್ಮ ನಟನೆಯ ಪ್ರಾವೀಣ್ಯತೆ ಮೂಲಕ ಪ್ರೇಕ್ಷಕರ ಮನಗೆದ್ದ ಅನಭಿಷಕ್ತ ರಾಜರಂತೆ ಮೆರೆದಿದ್ದಾರೆ. ಕನ್ನಡದಲ್ಲಿ ಆದಷ್ಟು ಸೂಪರ್ ಸ್ಟಾರ್ ಗಳು ಹುಟ್ಟಿ ಮಿಂಚಿ ಮರೆಯಾಗಿದ್ದಾರೆ ಆದರೆ ನಾವು ಇಂದು ಹೇಳಹೊರಟಿರುವ ನಟ ಯಾರೂ ಮಾಡದಂತಹ ಸಾಧನೆ ಮಾಡಿದ್ದಾರೆ. ಇದು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲಿ ಯಾರು ಮಾಡಿಲ್ಲ.

ಹೌದು ನಾವಿಂದು ಮಾತನಾಡಲು ಹೊರಟಿರುವ ನಟ ಇನ್ಯಾರೂ ಅಲ್ಲ ಸಂಪತ್ ಕುಮಾರ್ ರಾಗಿದ್ದವರು ಕನ್ನಡ ಚಿತ್ರರಂಗದ ಪ್ರೇಕ್ಷಕರ ಪ್ರೀತಿಗೆ ವಿಷ್ಣುವರ್ಧನ್ ಆಗಿ ಬದಲಾಗಿ ಕನ್ನಡ ಚಿತ್ರರಂಗದಲ್ಲಿ ಸಾಹಸಸಿಂಹ ನಂತೆ ಮೆರೆದರು. 1950 ರಲ್ಲಿ ಮೈಸೂರಿನಲ್ಲಿ ಜನಿಸಿದರು ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು.

ನಂತರ ಕನ್ನಡ ಚಿತ್ರರಂಗದಲ್ಲಿ ರಾಜಕುಮಾರ್ ಶಂಕರ್ ನಾಗ್ ರೆಬಲ್ ಸ್ಟಾರ್ ಅಂಬರೀಶ್ ಹೀಗೆ ಎಲ್ಲಾ ನಟರೊಂದಿಗೆ ಚಿತ್ರದಲ್ಲಿ ಕಾಣಿಸಿಕೊಂಡರು. ಅದು ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಏಕೈಕ ನಟನಾಗಿ ವಿಷ್ಣುವರ್ಧನ್ ಅವರು ಕಾಣಿಸಿಕೊಂಡರು. ಮಾಸ್ ಹಾಗೂ ಕ್ಲಾಸ್ ಎರಡು ಪಾತ್ರಗಳನ್ನು ಸಮಾನಾಗಿ ನಿರ್ವಹಿಸಬಲ್ಲ ಏಕೈಕ ನಟ ಎಂದರೆ ಅದು ವಿಷ್ಣುವರ್ಧನ್ ಎಂದು ಸಾರಾಸಗಟಾಗಿ ಹೇಳಬಹುದು.

ಯಾವ ಪಾತ್ರವನ್ನು ನೀಡಿದರೂ ಸಹ ವಿಷ್ಣುವರ್ಧನ್ ರವರು ಅದಕ್ಕೆ 100% ನ್ಯಾಯವನ್ನು ಸಲ್ಲಿಸುವ ನಟನೆ ಮಾಡುತ್ತಿದ್ದರು. ಇದಕ್ಕಾಗಿ ಅಭಿಮಾನಿಗಳು ಅವರನ್ನು ಅಭಿನಯ ಭಾರ್ಗವ ಎಂದು ಪ್ರೀತಿಯಿಂದ ಕರೆದು ಬಿರುದನ್ನು ನೀಡಿದರು. ವಿಷ್ಣುವರ್ಧನ್ ರವರು ಪುರಾಣ ಐತಿಹಾಸಿಕ ಮೋರ್ಡರ್ನ್ ಹೀಗೆ ಎಲ್ಲಾ ವಿಧವಾದ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡು ಪ್ರೇಕ್ಷಕರ ಮನ ವನ್ನು ಸಂಪೂರ್ಣವಾಗಿ ಗೆದ್ದಂತಹ ಪರಿಪೂರ್ಣನಾದ ನಟ ಎಂದರೆ ಅತಿಶಯೋಕ್ತಿಯಲ್ಲ.

ಇನ್ನು ವಿಷ್ಣುವರ್ಧನ್ ರವರು ಇಡೀ ಭಾರತೀಯ ಚಿತ್ರರಂಗದಲ್ಲೇ ಯಾರು ಕರೆಸಿಕೊಳ್ಳದಂತಹ ಬಿರುದನ್ನು ಹಾಗೂ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದು ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲಿ ಯಾವ ಸೂಪರ್ಸ್ಟಾರ್ ಕೂಡ ಪಡೆದಿಲ್ಲ ಹಾಗೂ ಕಳೆದುಕೊಂಡಿಲ್ಲ. ಪ್ರಶಸ್ತಿ ಯಾವುದು ಬಿರುದು ಯಾವುದೆಂಬುದನ್ನು ನಿಮಗೆ ಸಂಪೂರ್ಣ ವಿವರವಾಗಿ ಹೇಳುತ್ತೇನೆ ಬನ್ನಿ.

ಹೌದು ಭಾರತೀಯ ಚಿತ್ರರಂಗದಲ್ಲಿ ವಿಷ್ಣುವರ್ಧನ್ ರವರು ಅಂದಿನ ಕಾಲಕ್ಕೆ ಕನ್ನಡ ತೆಲುಗು ತಮಿಳು ಮಲಯಾಳಂ ಹಾಗೂ ಹಿಂದಿ ಚಿತ್ರರಂಗದಲ್ಲಿ ನಟಿಸಿ ಬಹುಬೇಡಿಕೆಯ ಪ್ರತಿಭಾನ್ವಿತರಾಗಿ ಗುರುತಿಸಿಕೊಂಡಿದ್ದರು. ಎಲ್ಲರೂ ಅವರ ನಟನೆಯನ್ನು ನೋಡಿ ಹೊಗಳಿ ಮೆಚ್ಚಿದ್ದರು ಇದಕ್ಕಾಗಿ ಅವರನ್ನು ಎಲ್ಲರೂ ಫಿನಿಕ್ಸ್ ಆಫ್ ಇಂಡಿಯನ್ ಸಿನಿಮಾ ಎಂಬ ಬಿರುದನ್ನು ಕೊಟ್ಟು ಸನ್ಮಾನಿಸಿದರು. ಈ ಬಿರುದನ್ನು ಅಥವಾ ಪ್ರಶಸ್ತಿಯನ್ನು ಇದುವರೆಗೆ ಬೇರೆ ಯಾವ ಕಲಾವಿದರು ಸಹ ಪಡೆದುಕೊಂಡಿಲ್ಲ.

ಕೇವಲ ನಟನೆಯಿಂದ ಮಾತ್ರವಲ್ಲದೇ ಕನ್ನಡ ಚಿತ್ರರಂಗದ ದಾದಾ ಎಂದೇ ಖ್ಯಾತಿಯಾಗಿರುವ ವಿಷ್ಣುವರ್ಧನ್ ರವರು ತಮ್ಮ ಮಾನವೀಯ ಗುಣಗಳಿಗೂ ಸಹ ಪ್ರಖ್ಯಾತರಾದವರು. ಅವರು ಹೆಣ್ಣುಮಕ್ಕಳಿಗೆ ತುಂಬಾ ಗೌರವವನ್ನು ನೀಡುತ್ತಿದ್ದರು. ಮಾತ್ರವಲ್ಲದೆ ಸಹಕಲಾವಿದರು ಜೂನಿಯರ್ ಆರ್ಟಿಸ್ಟ್ ಗಳು ಆಗಿದ್ದರೂ ಸಹ ಅವರಿಗೆ ಸಮಾನವಾದ ಗೌರವ ಹಾಗೂ ಪ್ರೀತಿಯನ್ನು ನೀಡುತ್ತಿದ್ದರೂ ನಮ್ಮ ನೆಚ್ಚಿನ ವಿಷ್ಣುವರ್ಧನ್. ನಿಮಗೆ ಗೊತ್ತಿಲ್ಲದ ಈ ವಿಷಯವನ್ನು ನಾವು ನಿಮಗೆ ಸಂಪೂರ್ಣವಾಗಿ ಹೇಳಿದ್ದೇವೆ ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮ ಕಮೆಂಟ್ ಬಾಕ್ಸಲ್ಲಿ ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.