Kannada News: ಅಂಗವೈಕಲ್ಯತೆ ಇದ್ದರೂ ಅದನ್ನು ಗೆದ್ದು, ಇಂದು ಟಾಪ್ ಸೆಲೆಬ್ರೆಟಿ ಗಳಾಗಿರುವ ಕಲಾವಿದರು ಯಾರ್ಯಾರು ಗೊತ್ತೇ? ಅಚ್ಚರಿಯ ಹೆಸರುಗಳು ಲಿಸ್ಟ್ ನಲ್ಲಿ.
Kannada News: ಅಂಗವೈಕಲ್ಯತೆ ಇದ್ದರೂ ಅದನ್ನು ಗೆದ್ದು, ಇಂದು ಟಾಪ್ ಸೆಲೆಬ್ರೆಟಿ ಗಳಾಗಿರುವ ಕಲಾವಿದರು ಯಾರ್ಯಾರು ಗೊತ್ತೇ? ಅಚ್ಚರಿಯ ಹೆಸರುಗಳು ಲಿಸ್ಟ್ ನಲ್ಲಿ.
ನಮಸ್ಕಾರ ಸ್ನೇಹಿತರೇ ಈ ಜಗತ್ತಿನಲ್ಲಿ ಸಮಸ್ಯೆ ಪ್ರತಿಯೊಬ್ಬ ಮನುಷ್ಯನಿಗೂ ಪ್ರತಿಯೊಂದು ಜೀವಿಗೂ ಬಂದೇ ಬರುತ್ತದೆ . ಕಷ್ಟ ಮನುಷ್ಯನಿಗೆ ಬರದೇ ಮರಕ್ಕೆ ಬರುತ್ತಾ ಅನ್ನೋ ಗಾದೆ ಮಾತೇ ಇದೆ. ಕಷ್ಟವನ್ನು ಇದೇ ಎಂದು ಎಲ್ಲರ ಬಳಿ ಹೇಳಿಕೊಂಡು ಅಳುವ ಬದಲು , ಆ ಕಷ್ಟವನ್ನು ಮೆಟ್ಟಿ ನಿಂತು ಆ ಕಷ್ಟವನ್ನು ತಾನು ಹೇಗೆ ಎದುರಿಸಿ ನಿಂತು ಸೋಲಿಸಿದೆ ಎಂಬುದನ್ನು ಎಲ್ಲರೊಂದಿಗೆ ಹೇಳುವುದು ಮಾದರಿಯ ವ್ಯಕ್ತಿತ್ವದ ಲಕ್ಷಣ.
ಇಂದು ನಾವು ಹೇಳ ಹೊರಟಿರುವ ಸ್ಟೋರಿಯಲ್ಲಿ ಕೂಡ ಕೆಲ ಸಾಧಕರು ಹೀಗೆ ತಮ್ಮ ಅಂಗ ವೈಕಲ್ಯತೆಯನ್ನು ಮೆಟ್ಟಿ ನಿಂತು ಜಗತ್ತಿಗೆ ಕೇವಲ ತಮ್ಮ ಯಶಸ್ಸಿನ ಕಥೆಯನ್ನಷ್ಟೇ ಹೇಳಿದರವರು. ಇವರು ಈಗಲೂ ಕೂಡ ಈ ಕಾರ್ಯಕ್ಕಾಗಿ ಹಲವಾರು ಜನರಿಂದ ಪ್ರಶಂಸೆಯ ಸುರಿಮಳೆಯನ್ನು ಪಡೆಯುತ್ತಾರೆ ಯಾಕೆಂದರೆ ಇವರು ಪರಿಸ್ಥಿತಿಗೆ ಅಂಜದೆ ಅಳುಕದೆ ತಮ್ಮ ಕಷ್ಟಗಳನ್ನು ತಾವೇ ಸರಿಮಾಡಿಕೊಂಡು ಆ ಕಷ್ಟವನ್ನೇ ತಮ್ಮ ಬಲವನ್ನಾಗಿ ಮಾರ್ಪಾಡು ಮಾಡಿಕೊಂಡು ಬಂದವರು. ಬನ್ನಿ ನೋಡೋಣ ಯಾರ್ಯಾರು ಈ ಲಿಸ್ಟ್ ನಲ್ಲಿದ್ದಾರೆ ಎಂದು ,
ಬಾಹುಬಲಿ ಖ್ಯಾತಿಯ ಟಾಲಿವುಡ್ ನ ನಟ ರಾಣಾ ದಗ್ಗುಬಾಟಿ ಕುರಿತಂತೆ ನಿಮಗೆಲ್ಲಾ ಗೊತ್ತೆ ಇದೆ. ಕೇವಲ ಟಾಲಿವುಡ್ ಪ್ನಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲಿ ಕೂಡ ತಮ್ಮ ನಟನೆಯ ಜಲ್ವಾ ತೋರಿಸಿದವರು. ಇವರು ಬಾಹುಬಲಿ ಚಿತ್ರಕ್ಕಾಗಿ ತೋರಿಸಿದ ಶೃದ್ಧೆ , ಪರಿಶ್ರಮ ಎಲ್ಲರ ಮನಗೆದ್ದು ಇವರ ಪಾತ್ರಕ್ಕೆ ಅಪಾರ ಪ್ರಶಂಸೆಯ ಸುರಿಮಳೆ ಸಿಕ್ಕಿತ್ತು. ಆದರೆ ನಿಮಗೆ ರಾಣಾ ದಗ್ಗುಬಾಟಿ ರವರ ಅಂಗವೈಕಲ್ಯತೆಯ ಬಗ್ಗೆ ಎಷ್ಟು ಗೊತ್ತಿದೆ.ಹೌದು ರಾಣಾ ದಗ್ಗುಬಾಟಿ ರವರಿಗೆ ಸಂಪೂರ್ಣವಾಗಿ ಬಲಕಣ್ಣಿನ ದೃಷ್ಟಿಯಿಲ್ಲ. ಇದನ್ನು ಸ್ವತಃ ಅವರೇ ತಮ್ಮ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆದರೂ ಸಹ ಅವರನ್ನು ನೋಡಿದರೆ ಹಾಗೆ ಅನಿಸುವುದಿಲ್ಲ.
ಇನ್ನು ಬಾಲಿವುಡ್ ನ ಕಿರುತೆರೆಯ ಖ್ಯಾತ ನಟಿ ಸುಧಾ ಚಂದ್ರನ್ ಜಯಪುರ ಕೂಡ ಅಪಘಾತದಲ್ಲಿ ತಮ್ಮ ಒಂದು ಕಾಲನ್ನು ಕಳೆದು ಕೊಂಡು ನಂತರ ನಂತರ ಕೃತಕ ಕಾಲುಗಳನ್ನು ಜೋಠಿಸಿಕೊಂಡರು . ಇದಾದ ನಂತರ ಇಂದಿಗೂ ತಮ್ಮ ನಟನೆಯ ಕರಿಯರ್ ನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಆದರೆ ಯಾರಿಗೂ ಅವರಿಗೆ ಒಂದು ಕಾಲಿಲ್ಲ ಎಂಬ ಸುದ್ಧಿ ಹರಡದಂತೆ ಕೆಲಸ ಮಾಡುತ್ತಿದ್ದಾರೆ.
ಇನ್ನು ನಮ್ಮ ಕನ್ನಡ ಚಿತ್ರರಂಗದ ಉದಯೋನ್ಮುಖ ಪ್ರತಿಭೆಯಾಗಿದ್ದ , ಸಿಸಿಎಲ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಪರ ಆಡುತ್ತಿದ್ದ ಧ್ರುವ ಶರ್ಮಾ ರವರಿಗೆ ಕೂಡ ಕಿವಿ ಕೇಳಿಸುತ್ತಿರಲಿಲ್ಲ ಹಾಗೂ ಮಾತನಾಡಲು ಕೂಡ ಆಗೋದಿಲ್ಲ. ಆದರೂ ಪ್ರತಿ ಸೀಸನ್ ನಲ್ಲಿ ಕರ್ನಾಟಕ ತಂಡದ ಪರ ಅಧಿಕ ರನ್ ಬಾರಿಸೋ ಬ್ಯಾಟ್ಸ್ಮನ್ ಆಗಿ ಮೂಡಿಬರುತ್ತಿದ್ದರು.
ಇನ್ನು ತೆಲುಗಿನ ಯುವ ನಟ ನಿತಿನ್ ಗೂ ಕೂಡ ಬಾಲ್ಯದಿಂದಲೂ ಒಂದು ಅಂಗವೈಕಲ್ಯ ಇತ್ತು. ಹೌದು ನಿತಿನ್ ರವರಿಗೆ ಮಾತಾಡುವಾಗ ತೊದಲುವ ಖಾಯಿಲೆಯಿತ್ತು . ತಮ್ಮ ಕರಿಯರ್ ನ ಪ್ರಾರಂಭದ ದಿನಗಳಲ್ಲಿ ನಟ ಬೇರೆಯವರಿಂದ ಡಬ್ ಮಾಡಿಸುತ್ತಿದ್ದರು. ನಂತರ ತಾವೇ ಆತ್ಮವಿಶ್ವಾಸವನ್ನು ಒಗ್ಗೂಡಿಸಿಕೊಂಡು ಡಬ್ ಮಾಡದು ಪ್ರಾರಂಭಿಸಿದರು.
ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಮಲ್ಟಿಸ್ಟಾರರ್ ಚಿತ್ರ ಹುಡುಗರು ನಲ್ಲಿ ಅಪ್ಪು ರವರ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಅಭಿನಯ ರವರಿಗೂ ಸಹ ಕಿವಿ ಕೇಳಿಸೋದಿಲ್ಲ ಆದರೂ ಇದನ್ನು ಮೆಟ್ಟಿ ತಮ್ಮ ಅಭಿನಯದ ಮೂಲಕ ಜನಮಾನಸದಲ್ಲಿ ಮನೆ ಮಾಡಿದರು. ಇನ್ನು ತೆಲುಗಿನ ಖ್ಯಾತ ನಟ ಅಲಿ ಕೂಡ ತೊದಲು ಮಾತನಾಡುವ ಖಾಯಿಲೆಯನ್ನು ಹೊಂದಿದ್ದಾರೆ. ಮೊದಲು ಇದು ಅವರಿಗೆ ಚಿತ್ರರಂಗದಲ್ಲಿ ಅವಮಾನ ಮಾಡಿತ್ತಾದರೂ. ನಂತರ ಅಲಿ ಈ ತೊದಲು ಮಾತನ್ನು ಹಾಸ್ಯದ ಕಡೆಗೆ ತಿರುಗಿಸಿ ಎಲ್ಲರ ಮನಗೆದ್ದರು. ನೆಗೆಟಿವ್ ನ್ನು ಪಾಸಿಟಿವ್ ಮಾಡಿ ಒಂದೊಳ್ಳೆ ಸಂದೇಶವನ್ನು ಸಮಾಜಕ್ಕೆ ರವಾನಿಸಿದರು.
ಇನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ಬಾರಮ್ಮ ಧಾರವಾಹಿಯ ನಟಿ ರಶ್ಮಿ ಪ್ರಭಾಕರ್ ರವರ ಕಣ್ಣಿಗೆ ಚಿಕ್ಕ ವಯಸ್ಸಿನಲ್ಲಿಯೇ ಸುಣ್ಣ ಬಿದ್ದ ಕಾರಣ ಶೇಕಡ 70 ರಷ್ಟು ಕಣ್ಣು ಕಾಣದ ಪರಿಸ್ಥಿತಿ ನಿರ್ಮಾಣವಾಯಿತು .ಆದರೂ ಸಹ ಛಲ ಬಿಡದೇ ಅವೆಲ್ಲವನ್ನೂ ಮೆಟ್ಟಿ ನಿಂತು ಈಗ ಕಿರುತೆರೆಯ ಸ್ಟಾರ್ ನಟಿಯಾಗಿ ರೂಪುಗೊಂಡಿದ್ದಾರೆ. ನೋಡಿದ್ರಲ್ಲಾ ಸ್ನೇಹಿತರೆ ಮನಸ್ಸಿದ್ದರೆ ಮಾರ್ಗವಿದೆ. ಒಳ್ಳೇ ಕೆಲಸಕ್ಕೆ ಯಾವ ನೆಪವೂ ಬೇಡ ಎಂಬುದು ಈ ಮಾಹಿತಿಯ ಮೂಲಕ ನಿಮಗೆ ತಿಳಿದಿದೆ ಎಂದು ಭಾವಿಸುತ್ತೇವೆ. ಇಂದಿನ ಈ ಮಾಹಿತಿಯನ್ನು ಓದಿದ ಬಳಿಕ ನಿಮಗೆ ಏನು ಅನ್ನಿಸಿತು ಎಂದು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ.