Interesting-Facts: ಭಾರತದಲ್ಲಿ 1 ಕೀ.ಮಿ ರೈಲ್ವೆ ಹಳಿ ಹಾಕಲು ಎಷ್ಟು ಕೋಟಿ ಖರ್ಚು ಮಾಡುತ್ತಿದ್ದಾರೆ ಗೊತ್ತಾ??

Interesting-Facts: ಭಾರತದಲ್ಲಿ 1 ಕೀ.ಮಿ ರೈಲ್ವೆ ಹಳಿ ಹಾಕಲು ಎಷ್ಟು ಕೋಟಿ ಖರ್ಚು ಮಾಡುತ್ತಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಭಾರತದಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಆಗುವಂತಹ ಪ್ರಯಾಣ ಅಂತ ಇದ್ದರೇ ಅದು ರೈಲಿನಲ್ಲಿ ಮಾತ್ರ. ವಿಮಾನದ ಪ್ರಯಾಣಕ್ಕೂ, ಬಸ್ಸು ಅಥವಾ ಕಾರಿನ ಪ್ರಯಾಣದ ವೆಚ್ಚಕ್ಕೆ ಹೋಲಿಸಿದರೇ, ರೈಲಿನಲ್ಲಿ ಪ್ರಯಾಣ ಮಾಡುವ ಖರ್ಚು ಅತ್ಯಂತ ಕಡಿಮೆ ಇರುತ್ತದೆ. ಜೊತೆಗೆ ಅಷ್ಟೇನೂ ತ್ರಾಸದಾಯಕವಾಗಿರುವುದಿಲ್ಲ. ಹೀಗಾಗಿ ಭಾರತದಲ್ಲಿ ಅತಿ ಹೆಚ್ಚು ಜನ ರೈಲ್ವೆ ಪ್ರಯಾಣವನ್ನು ಇಷ್ಟಪಡುತ್ತಾರೆ. ಆದರೇ ಪ್ರತಿ ರೈಲ್ವೆ ಹಳಿ ನಿರ್ಮಿಸಲು ಎಷ್ಟು ಖರ್ಚಾಗುತ್ತಿದೆ ಎಂಬುದು ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ. ರೈಲ್ವೆ ಪ್ರಯಾಣಕ್ಕೆ ಹಳಿಗಳು ಅತ್ಯವಶ್ಯಕ.

ಗಟ್ಟಿಮುಟ್ಟಾದ, ಸಮತಟ್ಟಾದ ಹಳಿಗಳ ನಿರ್ಮಾಣ ಅತ್ಯಮೂಲ್ಯ. ಬ್ರಾಡ್ ಗೇಜ್, ಮೀಟರ್ ಗೇಜ್ ಹೀಗೆ ಪ್ರತಿ ಹಳಿ ನಿರ್ಮಾಣವೂ ಸವಾಲು ಹಾಗೂ ಸಾಹಸದಿಂದ ಕೂಡಿರುತ್ತದೆ. ಬನ್ನಿ ಭಾರತದಲ್ಲಿ ಪ್ರತಿ ಕಿಲೋಮೀಟರ್ ಹಳಿ ನಿರ್ಮಾಣಕ್ಕೆ ಭಾರತೀಯ ರೈಲ್ವೆ ಎಷ್ಟು ಖರ್ಚು ಮಾಡುತ್ತಿದೆ ಎಂಬುದನ್ನ ತಿಳಿಯೋಣ. ಡಬಲ್ ಟ್ರಾಕ್ ಹೊಂದಿರುವ ಪ್ರತಿ ಒಂದು ಕಿಲೋ ಮೀಟರ್ ರೈಲ್ವೇ ಹಳಿ ನಿರ್ಮಾಣ ಮಾಡಲು ಎರಡರಿಂದ ಮೂರು ಕೋಟಿ ಹಣ ಖರ್ಚಾಗುತ್ತಿದ್ದೆಯಂತೆ. ಆದರೆ ಹೈಸ್ಪೇಡ್ ರೈಲುಗಳು ಹಾಗು ಅತ್ಯಾಧುನಿಕ ರೈಲುಗಳಿಗೆ 100 ಕೋತಿ ಖರ್ಚಾಗುತ್ತದೆ. ಇನ್ನು ಸಮತಟ್ಟಾದ ಪ್ರದೇಶಗಳಲ್ಲಿ ನಿರ್ಮಿಸಲು. ಇನ್ನು ಗುಡ್ಡಗಾಡು, ಘಟ್ಟ, ನದ ತೀರಗಳು, ಮುಂತಾದ ಕಡೆ ಒಂದು ಕಿಲೋ ಮೀಟರ್ ರೈಲ್ವೆ ಹಳಿಗೆ ಇನ್ನು ಹೆಚ್ಚು ಖರ್ಚಾಗುತ್ತದೆಯಂತೆ.

ಏಕೆಂದರೇ ಗುಡ್ಡಗಾಡು ಪ್ರದೇಶಗಳಲ್ಲಿ ಭೂ ಕುಸಿತವನ್ನ ತಡೆಯಲು ಕೆಲವೆಡೆ ಸುರಂಗಗಳನ್ನ ನಿರ್ಮಾಣ ಮಾಡಬೇಕು, ಮಳೆ ನೀರು ಹಳಿಯ ಮೇಲೆ ಹರಿಯಬಾರದೆಂದು ಕೆಲವೆಡೆ ಫೂಟ್ ಬ್ರಿಡ್ಜ್, ಮತ್ತು ಕೆಲವೆಡೆ ಉತ್ತಮವಾದ ಸ್ಟೀಲ್ ಬ್ರಿಡ್ಜ್ ಗಳನ್ನ ನಿರ್ಮಿಸಬೇಕು. ಎರಡು ಕಡೆ ಮಳೆ ನೀರು ಸರಾಗವಾಗಿ ಹೋಗಲು ಉತ್ತಮ ಗುಣಮಟ್ಟದ ಚರಂಡಿ ವ್ಯವಸ್ಥೆ ಇರಬೇಕು. ಹೀಗಾಗಿ ಖರ್ಚು ದ್ವಿಗುಣವಾಗುತ್ತದೆ ಎನ್ನುತ್ತಾರೆ ಹಳಿ ನಿರ್ಮಿಸುವ ಭಾರತೀಯ ರೈಲ್ವೆ ಸಿಬ್ಬಂದಿಗಳು. ಒಟ್ಟಿನಲ್ಲಿ ಇಷ್ಟೆಲ್ಲಾ ಖರ್ಚಿದ್ದರೂ, ಕಡಿಮೆ ದುಡ್ಡಿನಲ್ಲಿ ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಒದಗಿಸುತ್ತದೆ. ಭಾರತಧ ಪ್ರಜೆಗಳಾದ ನಾವು ಈ ಕಾರಣಕ್ಕೆ ರೈಲ್ವೆಗೆ ಹ್ಯಾಟ್ಸಫ್ ಹೇಳಲೇಬೇಕು. ಭಾರತೀಯ ರೈಲ್ವೆ ಇಲಾಖೆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.