ಟೀಂ ಇಂಡಿಯಾ ಕಟ್ಟಿದ್ದು, ಧೋನಿ, ಗಂಗೂಲಿಯಲ್ಲ, ಹಿಂದೆ ನಿಂತು ಯಾರಿಗೂ ಕಾಣದೆ ಕಟ್ಟಿದ್ದು ಆ ಕನ್ನಡಿಗ ಮಾತ್ರ ಎಂದ ರೈನಾ. ಯಾರಂತೆ ಗೊತ್ತಾ??

ಟೀಂ ಇಂಡಿಯಾ ಕಟ್ಟಿದ್ದು, ಧೋನಿ, ಗಂಗೂಲಿಯಲ್ಲ, ಹಿಂದೆ ನಿಂತು ಯಾರಿಗೂ ಕಾಣದೆ ಕಟ್ಟಿದ್ದು ಆ ಕನ್ನಡಿಗ ಮಾತ್ರ ಎಂದ ರೈನಾ. ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಟೀಂ ಇಂಡಿಯಾ ತನ್ನ ನೆಲದಲ್ಲಿ ಮಾತ್ರವಲ್ಲದೇ ವಿದೇಶಿ ನೆಲದಲ್ಲಿಯೂ ಸಹ ಆರ್ಭಟ ತೋರುತ್ತಿರುವ ವೇಳೆ, ಟೀಂ ಇಂಡಿಯಾದ ಈ ಯಶಸ್ಸಿಗೆ ಕಾರಣ ಯಾರು ಎಂದು ಕೇಳಿದಾಗ, ಮಾಜಿ ಕ್ರಿಕೇಟರ್ ಸುರೇಶ್ ರೈನಾ ಒಂದು ಆಸಕ್ತಿಕರ ವಿಷಯ ಬಾಯಿ ಬಿಟ್ಟಿದ್ದಾರೆ. ಟೀಂ ಇಂಡಿಯಾ ಹಿಂದಿನ ಯಶಸ್ಸು ಗಂಗೂಲಿಗೆ ಸಲ್ಲುತ್ತದೆಯೋ ಅಥವಾ ಧೋನಿಗೆ ಸಲ್ಲುತ್ತದಯೋ ಎಂದು ಸಂದರ್ಶಕರು ಕೇಳಿದಾಗ ಅದಕ್ಕೆ ರೈನಾ ಅವರಿಬ್ಬರೂ ಅಲ್ಲ, ಆ ಕ್ರೇಡಿಟ್ ಸವ್ಯಸಾಚಿ ಕನ್ನಡಿಗನಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.

ಬಹುಷಃ 2003 ರ ನಂತರ ಟೀಂ ಇಂಡಿಯಾಕ್ಕೆ ಹಲವಾರು ಯುವ ಆಟಗಾರರ ಎಂಟ್ರಿ ಆಯಿತು. ಧೋನಿ,ರೈನಾ, ಇರ್ಫಾನ್ ಪಠಾಣ್, ಲಕ್ಷ್ಮಿಪತಿ ಬಾಲಾಜಿ, ಶ್ರೀಶಾಂತ್, ದಿನೇಶ್ ಕಾರ್ತಿಕ್, ಆರ್.ಪಿ.ಸಿಂಗ್, ಗೌತಮ್ ಗಂಭೀರ್, ಅಮಿತ್ ಮಿಶ್ರಾ,ರಾಬಿನ್ ಉತ್ತಪ್ಪ ಹೀಗೆ ಸಾಲು ಸಾಲು ಯುವ ಆಟಗಾರರಿಂದ ಹಿರಿಯ ಆಟಗಾರರ ಮೇಲಿನ ಒತ್ತಡ ಕಡಿಮೆ ಆಯಿತು. ಜೊತೆಗೆ ಫೀಲ್ಡಿಂಗ್ ನಲ್ಲಿಯೂ ಸಹ ಉತ್ತಮ ಸುಧಾರಣೆ ಕಂಡು ಪ್ರತಿ ಪಂದ್ಯದಲ್ಲಿಯೂ ಕಡಿಮೆ ಎಂದರೂ 25 ರಿಂದ 30 ರನ್ನುಗಳನ್ನ ನಾವು ನಿಯಂತ್ರಿಸುತ್ತಾ ಬಂದೆವು. ಹೀಗಾಗಿ ಟೀಂ ಇಂಡಿಯಾ ಹಲವಾರು ಪಂದ್ಯಗಳಲ್ಲಿ ಜಯಿಸಿತು. ಜೊತೆಗೆ ತನ್ನ ಬೆಂಚ್ ಸ್ಟ್ರೆಂತ್ ನ್ನು ಸಹ ಉತ್ತಮವಾಗಿಸಿಕೊಂಡಿತು. ಅದಕ್ಕೆ ಮುಖ್ಯ ಕಾರಣವೇ ಆ ಕನ್ನಡಿಗ ಎಂದು ಹೇಳಿದರು.

ಅಷ್ಟಕ್ಕೂ ಆ ಕನ್ನಡಿಗ ಯಾರು ಎಂಬ ಆ ನಿಮ್ಮ ಪ್ರಶ್ನೆಗೆ ಉತ್ತರ, ಬೇರಾರೂ ಅಲ್ಲ. ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್. ಹೌದು ದ್ರಾವಿಡ್ ಒತ್ತಾಸೆಯಿಂದ ರಣಜಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದ, ಹಲವಾರು ಕ್ರಿಕೇಟಿಗರಿಗೆ ಟೀಂ ಇಂಡಿಯಾ ಜೆರ್ಸಿ ತೊಡುವಂತೆ ಆಯಿತು. ಧೋನಿಗೆ ತಮ್ಮ ನಾಯಕತ್ವದ ಸಂಪೂರ್ಣ ಗುಣಗಳನ್ನು ರಾಹುಲ್ ದ್ರಾವಿಡ್ ಧಾರೆಯೆರೆದಿದ್ದರು. ಹಾಗಾಗಿ ಧೋನಿ ಕ್ಯಾಪ್ಟನ್ ಕೂಲ್ ಎಂಬ ಪಟ್ಟ ಗಿಟ್ಟಿಸಿಕೊಂಡರು.

ಯುವ ಆಟಗಾರರನ್ನು ಆಯ್ಕೆಗೆ ಪರಿಗಣಿಸದೇ ಇದ್ದಾಗ, ದ್ರಾವಿಡ್ ಅದೆಷ್ಟೋ ಭಾರಿ ಟೀಂ ಮ್ಯಾನೇಜ್ ಮೆಂಟ್ ಹಾಗೂ ಆಯ್ಕೆಗಾರರ ಜೊತೆ ಜಗಳವಾಡುತ್ತಿದ್ದರಂತೆ. ಅದಲ್ಲದೇ ತಂಡಕ್ಕೆ ಆಯ್ಕೆಯಾದ ಆಟಗಾರರನ್ನ ಬೆಂಚ್ ನಲ್ಲಿ ಕೂರಿಸಲು ಇಷ್ಟಪಡುತ್ತಿರಲಿಲ್ಲವಂತೆ ರಾಹುಲ್. ಕನಿಷ್ಠ ಒಂದು ಪಂದ್ಯದಲ್ಲಾದರೂ ದ್ರಾವಿಡ್ ಅವರನ್ನ ಆಡಿಸಿ, ಭಾರತ ತಂಡಕ್ಕೆ ಪದಾರ್ಪಣೆಗೆ ಅವಕಾಶ ನೀಡುತ್ತಿದ್ದರಂತೆ. ದ್ರಾವಿಡ್ ರವರ ಆ ದೊಡ್ಡಗುಣವೇ ಇಂದಿನ ಟೀಂ ಇಂಡಿಯಾ ಯಶಸ್ಸಿಗೆ ಪ್ರಮುಖ ಕಾರಣ ಎಂದು ಸುರೇಶ್ ರೈನಾ ರಾಹುಲ್ ರನ್ನ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ರಾಹುಲ್ ದ್ರಾವಿಡ್ ರವರ ಈ ಗುಣಕ್ಕೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.