ಬೆಂಜಮಿನ್ ನೆತನ್ಯಾಹು ಇಸ್ರೇಲ್ ನಲ್ಲಿ ಪ್ರಧಾನಿ ಪಟ್ಟದಿಂದ ಕೆಳಗಿಳಿಸಿದ ರೋಚಕ ಸ್ಟೋರಿ ಹೇಗಿದೆ ಗೊತ್ತಾ??
ಬೆಂಜಮಿನ್ ನೆತನ್ಯಾಹು ಇಸ್ರೇಲ್ ನಲ್ಲಿ ಪ್ರಧಾನಿ ಪಟ್ಟದಿಂದ ಕೆಳಗಿಳಿಸಿದ ರೋಚಕ ಸ್ಟೋರಿ ಹೇಗಿದೆ ಗೊತ್ತಾ??
ನಮಸ್ಕಾರ ಸ್ನೇಹಿತರೇ ಪ್ರಪಂಚದ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದ ರಾಷ್ಟ್ರ ಇಸ್ರೇಲ್ ನಲ್ಲಿ ಮಹತ್ತರವಾದ ರಾಜಕೀಯ ಸಂಚಲನವಾಗಿದೆ. ಶೀಘ್ರದಲ್ಲಿ ನಡೆದ ಬೆಳವಣಿಗೆಯಲ್ಲಿ 12 ವರ್ಷಗಳಿಂದ ಇಸ್ರೇಲ್ ನ ಪ್ರಧಾನಿ, ಪ್ರಪಂಚದ ಮೂರನೇ ಶಕ್ತಿಯುತ ನಾಯಕ ಎಂದು ಕರೆಸಿ ಕೊಂಡಿದ್ದ ಬೆಂಜಮಿನ್ ನೆತನ್ಯಾಹುರವರು ತಮ್ಮಪ್ರಧಾನಿ ಪಟ್ಟವನ್ನು ಕಳೆದು ಕೊಂಡಿದ್ದಾರೆ. ಇಸ್ರೇಲ್ ಕಳೆದೆರೆಡು ವರ್ಷಗಳಲ್ಲಿ ನಾಲ್ಕು ಭಾರಿ ಚುನಾವಣೆ ಕಂಡಿತ್ತು. ಇಸ್ರೇಲ್ ಪಾರ್ಲಿಮೆಂಟ್ ನ ಒಟ್ಟು 120 ಸೀಟುಗಳ ಪೈಕಿ ನೆತನ್ಯಾಹುರವರ ಪಕ್ಷ ಎಲ್.ಐ.ಕೆ.ಯು.ಡಿ 30 ಸ್ಥಾನಗಳನ್ನು ಪಡೆಯುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತು.
ಸಹಜವಾಗಿ ನೆತನ್ಯಾಹು ಪ್ರಧಾನಿ ಪಟ್ಟಕ್ಕೇರಲು ಸಿದ್ದರಾಗಿದ್ದರು. ಆದರೇ ಬಹುಮತ ಸಾಬೀತು ಪಡಿಸಲು 28 ದಿನಗಳ ಕಾಲಾವಕಾಶ ಅವರಿಗಿತ್ತು. ಈ ಮಧ್ಯೆ ಇಸ್ರೇಲ್ ಹಾಗೂ ಪ್ಯಾಲೆಸ್ತಿನ್ ನಡುವೆ ನಡೆದ ಗಾಜಾಪಟ್ಟಿಯ ಹಮಾಸ್ ನಡುವಿನ ಚಕಮಕಿಯಿಂದ ವಿಶ್ವಾದ್ಯಂತ ನೆತನ್ಯಾಹು ಇಮೇಜ್ ವೃದ್ಧಿಸಿದರೂ, ಅವರ ನಾಡಿನಲ್ಲಿ ಅವರಿಗೆ ಹಿನ್ನಡೆಯಾಗಿತ್ತು. ನೆತನ್ಯಾಹುರವರಿಗೆ ಪ್ರಧಾನಿ ಪಟ್ಟ ತಲುಪಿಸಲು ಉಳಿದ ಏಳು ವಿರೋಧ ಪಕ್ಷಗಳು ರಚಿಸಿಕೊಂಡು, ನೆತನ್ಯಾಹುರವರಿಗೆ ಬಹುಮತ ಸಾಬೀತುಪಡಿಸಲು ಸೂಕ್ತ ಬೆಂಬಲ ನೀಡಲಿಲ್ಲ. ಇದರಿಂದ ಏರಡನೇ ಅತಿ ದೊಡ್ಡ ಪಕ್ಷವಾಗಿದ್ದ ಯೆಶ್ ಅತಿದ್ ಗೆ ಸರ್ಕಾರ ರಚಿಸುವಂತೆ ಆಹ್ವಾನ ನೀಡಲಾಗಿದೆ.
ಈ ಹಿಂದೆ ನೆತನ್ಯಾಹು ಸರ್ಕಾರದಲ್ಲಿ ರಕ್ಷಣಾ ಮಂತ್ರಿಯಾಗಿದ್ದ ನೆಫ್ಟಾಲಿ ಬೆನ್ನೆಟ್ ಈಗ ನೂತನ ಪ್ರಧಾನಿಯಾಗುತ್ತಿದ್ದಾರೆ. ಇವರ ಪಕ್ಷ ಈ ಚುನಾವಣೆಯಲ್ಲಿ ಏಳು ಸ್ಥಾನಗಳಿಸಿದೆ. 30 ಸ್ಥಾನಗಳಿಸಿದ್ದ ನೆತನ್ಯಾಹು ಪಕ್ಷ ಅಧಿಕಾರವಂಚಿತವಾಗಿದೆ. ಸದ್ಯ ಬೆನ್ನೆಟ್ ಎರಡು ವರ್ಷ ಪ್ರಧಾನಿಯಾಗಿರುತ್ತಾರೆ, ನಂತರದ ಎರಡು ವರ್ಷ ಯೆರ್ ಲಾಪಿದ್ ಪ್ರಧಾನಿಯಾಗುವುದಾಗಿ ಒಡಂಬಡಿಕೆ ಮಾಡಿ ಕೊಳ್ಳಲಾಗಿದೆ. ನಿನ್ನೆ ನಡೆದ ಸಂಸತ್ ಕಲಾಪದಲ್ಲಿ ಒಂದು ಮತದ ಅಂತರದಿಂದ ನೆತನ್ಯಾಹುರವರ ಪಕ್ಷವನ್ನ ಏಳು ಒಕ್ಕೂಟ ಪಕ್ಷಗಳು ಸೋಲಿಸಿವೆ. ಬೆಂಜಮಿನ್ ನೆತನ್ಯಾಹು ಪರ 59 ಮತಗಳು ಚಲಾವಣೆಯಾಗಿದ್ದರೇ, ಅವರ ವಿರುದ್ದ 60 ಮತಗಳು ಚಲಾವಣೆಯಾಗಿದ್ದವು. ಒಂದು ಮತದ ಅಂತರದಿಂದ ನೆತನ್ಯಾಹು ಪ್ರಧಾನಿ ಪಟ್ಟ ಕಳೆದು ಕೊಂಡಿದ್ದಾರೆ.