ರವಿಶಾಸ್ತ್ರಿ, ದ್ರಾವಿಡ್ ಅಲ್ಲ, ವಿದೇಶಗಳಲ್ಲಿ ಭಾರತೀಯ ಬ್ಯಾಟ್ಸಮನ್ ಗಳು ರನ್ ಗಳಿಸಲು ಈ ಕನ್ನಡಿಗನೇ ಕಾರಣ ಎಂದ ಕೊಹ್ಲಿ, ಯಾರಂತೆ ಗೊತ್ತಾ?

ರವಿಶಾಸ್ತ್ರಿ, ದ್ರಾವಿಡ್ ಅಲ್ಲ, ವಿದೇಶಗಳಲ್ಲಿ ಭಾರತೀಯ ಬ್ಯಾಟ್ಸಮನ್ ಗಳು ರನ್ ಗಳಿಸಲು ಈ ಕನ್ನಡಿಗನೇ ಕಾರಣ ಎಂದ ಕೊಹ್ಲಿ, ಯಾರಂತೆ ಗೊತ್ತಾ?

ನಮಸ್ಕಾರ ಸ್ನೇಹಿತರೇ ಭಾರತೀಯ ಬ್ಯಾಟ್ಸಮನ್ ಗಳು ಸ್ಪಿನ್ ಬೌಲಿಂಗ್ ಗೆ ಉತ್ತಮವಾಗಿ ಆಡುತ್ತಾರೆ, ಆದರೇ ವೇಗದ ಬೌಲರ್ ಎದುರುಗಡೆ ತರೆಗೆಲೆ ಎಂತೆ ಉದುರುತ್ತಾರೆ ಎಂಬ ಆರೋಪ ಬಹಳ ವರ್ಷಗಳಿಂದ ಕೇಳಿ ಬರುತ್ತಿತ್ತು. ಅದು ನಿಜವೂ ಸರಿ. ಏಕೆಂದರೆ ಈ ಹಿಂದೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ವಿಂಡೀಸ್, ಇಂಗ್ಲೆಂಡ್ ತಂಡದ ಪ್ರವಾಸದಲ್ಲಿ ಭಾರತೀಯ ಬ್ಯಾಟ್ಸಮನ್ ಗಳು ಆ ದೇಶದ ವೇಗದ ಬೌಲರ್ ಗಳನ್ನು ಎದುರಿಸಲು ತಿಣುಕಾಡುತ್ತಿದ್ದರು. ಎಷ್ಟೋ ಭಾರಿ ಕೆಲವು ಟೆಸ್ಟ್ ಗಳು ಎರಡು ದಿನಕ್ಕೆ ಮುಗಿದುಹೋದ ಘಟನೆಗಳು ಸಹ ಜರುಗಿವೆ.

ಆದರೇ ಈಗಿನ ಭಾರತ ತಂಡಕ್ಕೆ ಅಂತಹ ಸಮಸ್ಯೆ ಇಲ್ಲ. ಸದ್ಯದ ಭಾರತೀಯ ಬ್ಯಾಟ್ಸಮನ್ ಗಳು ಸ್ಪಿನ್ ಗಿಂತ ವೇಗದ ಬೌಲಿಂಗ್ ಗೆ ಉತ್ತಮವಾಗಿ ಬ್ಯಾಟ್ ಬೀಸುತ್ತಾರೆ. ಅದರ ಗುಟ್ಟನ್ನ ಈಗ ವಿರಾಟ್ ಕೊಹ್ಲಿ ಬಿಟ್ಟುಕೊಟ್ಟಿದ್ದಾರೆ. ಇತ್ತಿಚೆಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಿಂದ ಲೈವ್ ಗೆ ಬಂದಿದ್ದ ಕೊಹ್ಲಿ, ಬಾಂಗ್ಲಾ ಬ್ಯಾಟ್ಸಮನ್ ತಮೀಮ್ ಇಕ್ಬಾಲ್ ಕೇಳಿದ ಪ್ರಶ್ನೆಗೆ ಉತ್ತರ ನೀಡುವಾಗ ಈ ಗುಟ್ಟನ್ನ ಬಿಚ್ಚಿಟ್ಟಿದ್ದಾರೆ. ಅದಲ್ಲದೇ ಭಾರತೀಯ ಬ್ಯಾಟ್ಸಮನ್ ಗಳ ಯಶಸ್ಸಿಗೆ ಈ ಕನ್ನಡಿಗ ಕಾರಣ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಹೌದು ಆ ಕನ್ನಡಿಗ ಬೇರಾರೂ ಅಲ್ಲ. ಥ್ರೋ ಡೌನ್ ಸ್ಪೆಷಲಿಸ್ಟ್ ರಾಘವೇಂದ್ರರವರು. ಅವರ ಗಂಟೆಗೆ 155 ಕೀ.ಮಿ ವೇಗದಲ್ಲಿ ಹಾಕುವ ಎಸೆತಗಳನ್ನ ಬ್ಯಾಟ್ಸಮನ್ ಗಳು ನೆಟ್ಸ್ ನಲ್ಲಿ ಎದುರಿಸುತ್ತಿದ್ದಾರೆ. ರಾಘವೇಂದ್ರರವರು ನಿಮಿಷಕ್ಕೆ 4 ಎಸೆತಗಳನ್ನು ಹಾಕುತ್ತಾರೆ. ಪ್ರತಿಯೊಬ್ಬ ಬ್ಯಾಟ್ಸಮನ್ ನ ಕೌಶಲ್ಯತೆ ತಿಳಿದುಕೊಂಡು ಅದಕ್ಕೆ ತಕ್ಕನಾಗಿ ಥ್ರೋ ಎಸೆತಗಳನ್ನು ಹಾಕುತ್ತಾರೆ. ಹಾಗಾಗಿ ಭಾರತೀಯ ಬ್ಯಾಟ್ಸಮನ್ ಗಳು ವೇಗದ ಎಸೆತಗಳನ್ನು ಯಾವುದೇ ಅಳುಕಿಲ್ಲದೇ ಎದುರಿಸುವ ಕಾರಣ ನಾವು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. ಕುಮಟಾದ ರಾಘವೇಂದ್ರ ಟೀಂ ಇಂಡಿಯಾದ ಎಲ್ಲಾ ಪ್ರವಾಸದಲ್ಲಿಯೂ ಜೊತೆಗಿರುತ್ತಾರೆ. ರಾಘವೇಂದ್ರ ರವರ ಈ ಸಾಧನೆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.