ನಾಗರಹಾವು ಚಿತ್ರಕ್ಕೆ ವಿಷ್ಣುವರ್ಧನ್ ರವರು ಮೊದಲ ಆಯ್ಕೆ ಅಲ್ಲ ಹಾಗಿದ್ದರೆ ಆ ನಟ ಯಾರು?? ಹಾಗೂ ಹೇಗೆ ದಾದಾ ರವರಿಗೆ ಅವಕಾಶ ಸಿಕ್ಕಿತು ಗೊತ್ತೇ??

ನಾಗರಹಾವು ಚಿತ್ರಕ್ಕೆ ವಿಷ್ಣುವರ್ಧನ್ ರವರು ಮೊದಲ ಆಯ್ಕೆ ಅಲ್ಲ ಹಾಗಿದ್ದರೆ ಆ ನಟ ಯಾರು?? ಹಾಗೂ ಹೇಗೆ ದಾದಾ ರವರಿಗೆ ಅವಕಾಶ ಸಿಕ್ಕಿತು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಹಿಂದೆ ಅರವತ್ತು ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹಲವಾರು ಸೂಪರ್ ಹಿಟ್ ಚಿತ್ರಗಳು ಬಂದು ಕನ್ನಡ ಚಿತ್ರರಂಗವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವಂತೆ ಮಾಡಿದ್ದು ಸುಳ್ಳಲ್ಲ. ಇಂತಹ ಕೆಲವು ಚಿತ್ರಗಳಲ್ಲಿ ನಮಗೆ ಆಗಾಗ ಕೆಲವೊಂದು ಪ್ರಮುಖ ಚಿತ್ರಗಳು ನೆನಪಿಗೆ ಬಂದು ಆ ಚಿತ್ರದ ಕುರಿತಂತೆ ಇನ್ನಷ್ಟು ಇಷ್ಟಪಡುವಂತೆ ಆಗುತ್ತದೆ. ಕೆಲಸಗಳು ಎಷ್ಟೇ ವರ್ಷಗಳಾದರೂ ಎಷ್ಟೇ ಯುಗಗಳು ಕಳೆದರೂ ಸದಾ ಸ್ಪೆಷಲ್ ಅನುಭವವನ್ನು ನೀಡುತ್ತದೆ.

ಅಂತಹ ಸ್ಪೆಷಲ್ ಅನುಭವ ನೀಡುವ ಚಿತ್ರವೊಂದರ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಹೌದು ಚಿತ್ರ ಯಾವುದು ಹಾಗೂ ಚಿತ್ರದ ಕುರಿತಂತೆ ನೀವು ಉಳಿಸಿಕೊಳ್ಳಲು ಕೂಡ ಸಾಧ್ಯವಾಗದ ಮಾಹಿತಿಯನ್ನು ನಾವು ಹೇಳಲು ಹೊರಟಿದ್ದೇವೆ. ಹೌದು 60 ಹಾಗೂ 70ರ ದಶಕದಲ್ಲಿ ಆ ಚಿತ್ರ ಫೇಮಸ್ ಆದಷ್ಟು ಯಾವ ಚಿತ್ರವೂ ಸದ್ದು ಮಾಡಲಿಲ್ಲ. ಚಿತ್ರದಿಂದಾಗಿ ಕನ್ನಡ ಚಿತ್ರರಂಗಕ್ಕೆ ಒಬ್ಬ ಆಂಗ್ರಿ ಯಂಗ್ ಮ್ಯಾನ್ ಪರಿಚಿತರಾದರು. ಹೌದು ನಾವು ಹೇಳಹೊರಟಿರುವುದು ನಾಗರಹಾವು ಚಿತ್ರದ ಕುರಿತಂತೆ.

ಕನ್ನಡ ಚಿತ್ರರಂಗದ ಎವರ್ಗ್ರೀನ್ ಚಿತ್ರಗಳ ಪಟ್ಟಿಯಲ್ಲಿ ಸದಾ ಅಗ್ರಸ್ಥಾನವನ್ನು ಪಡೆದುಕೊಳ್ಳುವ ನಾಗರಹಾವಿನ ಕುರಿತಂತೆ ನಾವು ಮಾತನಾಡಲು ಹೊರಟಿರುವುದು. ಕನ್ನಡ ಚಿತ್ರರಂಗ ಕಂಡ ಗ್ರೇಟೆಸ್ಟ್ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರವರ ನಿರ್ದೇಶನದಲ್ಲಿ ಮೂಡಿಬಂದ ಹಾಗೂ ವೀರಸ್ವಾಮಿ ನಿರ್ಮಾಣದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಒಂದೇ ಚಿತ್ರದಲ್ಲಿ ನಟಿಸಿದ ಚಿತ್ರ ನಾಗರಹಾವು. ಅಂದಿನ ಕಾಲಕ್ಕೆ ಸಾಕಷ್ಟು ರೆಕಾರ್ಡ್ ಗಳನ್ನು ಅಳಿಸಿ ತನ್ನದೇ ಹೊಸ ಅಧ್ಯಾಯವನ್ನು ಬರೆದಂತಹ ಚಿತ್ರ.

ಈ ಚಿತ್ರದ ಪವರ್ ಎಷ್ಟಿತ್ತೆಂದರೆ ಇಂದಿಗೂ ಕೂಡ ಚಿತ್ರಮಂದಿರಗಳಲ್ಲಿ ನಾಗರಹಾವು ಚಿತ್ರ ಮರು ಬಿಡುಗಡೆಯಾಗುತ್ತಿದೆ. ಒಂದು ವಿಧದಲ್ಲಿ ಹೇಳಬೇಕೆಂದರೆ ಈ ಚಿತ್ರ ದ ಕಥೆ ಮೂಡಿಬಂದಿದ್ದು ಖ್ಯಾತ ಸಾಹಿತಿ ತರಾಸುರವರ ಕಾದಂಬರಿಗಳಿಂದ‌. ಸಾಹಸಸಿಂಹ ವಿಷ್ಣುವರ್ಧನ್ ರವರು ಈ ಚಿತ್ರಕ್ಕೆ ಆಯ್ಕೆಯಾಗಿದ್ದು ಕೂಡ ಅನಿರೀಕ್ಷಿತವೇ. ಯಾಕೆಂದರೆ ತರಾಸುರವರ ಆಯ್ಕೆ ಬೇರೊಬ್ಬ ನಟರಾಗಿದ್ದರು. ಆ ನಟ ಯಾರು ಯಾಕೆ ಬದಲಾದರೂ ಎಂಬುದನ್ನು ನಾವು ವಿವರವಾಗಿ ಹೇಳುತ್ತೇನೆ ಬನ್ನಿ.

ನಿಜ ನಾವು ಹೇಳಿದಂತೆ ನಾಗರಹಾವು ಚಿತ್ರಕ್ಕೆ ಮೊದಲ ಆಯ್ಕೆಯಾಗಿದ್ದು ವಿಷ್ಣುವರ್ಧನ್ ರವರು ಅಲ್ಲ. ಈ ಚಿತ್ರಕ್ಕೆ ಮೊದಲ ಆಯ್ಕೆಯಾಗಿದ್ದು ಡಾ ರಾಜಕುಮಾರ್ ರವರು. ತರಾಸುರವರು ರಾಮಾಚಾರಿ ಪಾತ್ರವನ್ನು ಡಾ ರಾಜಕುಮಾರ್ ಅವರನ್ನು ಮನಸ್ಸಲ್ಲಿಟ್ಟುಕೊಂಡು ಬರೆದ ಪಾತ್ರ. ಅದನ್ನು ರಾಜಕುಮಾರ್ ರವರು ಬಿಟ್ಟು ಬೇರೆ ಯಾರು ನಟಿಸುವುದು ಅವರಿಗೆ ಇಷ್ಟವಿರಲಿಲ್ಲ. ಇದಕ್ಕೆ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಕೂಡ ಒಪ್ಪಿ ಎಲ್ಲ ರೆಡಿಯಾಗಿತ್ತು. ಆದರ ಚಿತ್ರರಂಗದಲ್ಲಿ ಹಾಗೂ ಕೆಲವರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ರವರನ್ನು ರಾಜಕುಮಾರ್ ರವರಿಂದ ಬೆಳೆದುಕೊಂಡು ಬಂದಂತಹ ನಿರ್ದೇಶಕ ರಾಜಕುಮಾರ್ ಇಲ್ಲ ಅಂದ್ರೆ ಇವರು ಏನು ಇಲ್ಲ ಎನ್ನುವ ಮಾತುಗಳು ಕೇಳಿ ಬಂದವು.

ಇದಕ್ಕೆ ಬೇಸರಗೊಂಡ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಇನ್ನು ಮುಂದೆ ನಾನು ಯಾವತ್ತೂ ರಾಜಕುಮಾರ್ ಅವರೊಂದಿಗೆ ಚಿತ್ರ ಮಾಡುವುದಿಲ್ಲ ಎಂಬುದನ್ನು ಹೇಳಿದರು. ತರಾಸುರವರ ಇಚ್ಛೆಗೆ ವಿರುದ್ಧವಾಗಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರವರು ವಿಷ್ಣುವರ್ಧನ್ ರವರನ್ನು ನಾಯಕ ಪಾತ್ರಕ್ಕೆ ಆಯ್ಕೆ ಮಾಡಿ ನಾಗರಹಾವು ಚಿತ್ರವನ್ನು ಚೆನ್ನಾಗಿ ಚಿತ್ರೀಕರಿಸಿ ಬಿಡುಗಡೆ ಮಾಡಿದರು. ಪರ-ವಿರೋಧಗಳು ಬಂದರೂ ಸಹ ನಾಗರಹಾವು ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಊಹೆ ಮಾಡಿದ್ದಕ್ಕಿಂತಲೂ ಹೆಚ್ಚಿನ ಯಶಸ್ಸನ್ನು ಪಡೆಯಿತು. ನಂತರದ ದಿನಗಳಲ್ಲಿ ಕುರಿತಂತೆ ಹಲವಾರು ಚರ್ಚೆ ನಡೆದರೂ ಅದಾಗಲೇ ನಾಗರಹಾವು ಚಿತ್ರ ಯಶಸ್ಸನ್ನು ಪಡೆದು ಅದಾಗಲೇ ಗ್ರೇಟೆಸ್ಟ್ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಹಾಗೂ ನಿರ್ಮಾಪಕ ವೀರಸ್ವಾಮಿ ಹಾಗೂ ನಟರಾದ ವಿಷ್ಣುವರ್ಧನ್ ಅಂಬರೀಶ್ ರವರ ಯಶಸ್ಸಿನ ಗಾಥೆ ಎಲ್ಲರೂ ಆಚರಿಸುವಂತೆ ಆಯ್ತು. ಈ ವಿಚಾರದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ.