ವಯಸ್ಸು ಮೀರಿದರೂ ಮದುವೆಯಾಗದೇ ಉಳಿದಿರುವ ಟಾಪ್ ಬಾಲಿವುಡ್ ನಟಿಯರು ಯಾರ್ಯಾರು ಗೊತ್ತೇ??
ವಯಸ್ಸು ಮೀರಿದರೂ ಮದುವೆಯಾಗದೇ ಉಳಿದಿರುವ ಟಾಪ್ ಬಾಲಿವುಡ್ ನಟಿಯರು ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದಲ್ಲಿ ನಿಮಗೆಲ್ಲರಿಗೂ ತಿಳಿದಿರುವಂತೆ ಕೆಲವರು ಮದುವೆಯಾಗಿ ಸುಖ ಜೀವನ ನಡೆಸುತ್ತಾರೆ ಇನ್ನು ಕೆಲವರು ಮೂರು ವರ್ಷಕ್ಕೆ ಒಂದರಂತೆ ವಿಚ್ಛೇದನ ಪಡೆದು ಕೊಂಡು ತಮ್ಮ ಜೀವನದಲ್ಲಿ ಹಲವಾರು ಮದುವೆಯನ್ನು ಆಗುತ್ತಾರೆ. ಆದರೆ ಅದೇ ಸಮಯದಲ್ಲಿ ವಯಸ್ಸು ಮೀರಿ ಹೋದರೂ ಕೂಡ ಮದುವೆಯಾಗದೆ ಏಕಾಂಗಿಯಾಗಿ ಜೀವನ ಕಳೆಯುತ್ತಿರುವ ನಟಿಯರು ಕೂಡ ಇದ್ದಾರೆ. ಇಂದು ನಾವು ಈ ಕುರಿತು ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ ಕೇಳಿ
ಮೊದಲನೆಯದಾಗಿ ಮದುವೆಯಾಗದ ನಟಿಯರ ಹೆಸರು ತೆಗೆದುಕೊಳ್ಳುವುದಾದರೆ ನಮಗೆ ನಟಿ ತಬು ಅವರ ಹೆಸರು ಕೇಳಿ ಬರುತ್ತದೆ. ಅಂದ ಚಂದ ಯಶಸ್ಸು ಸೌಂದರ್ಯ ಇದ್ದರೂ ಕೂಡ ತಬುರವರು ಇನ್ನೂ ಮದುವೆಯಾಗಿಲ್ಲ. ಬಾಲಿವುಡ್ ಚಿತ್ರರಂಗದ ಸೇರಿದಂತೆ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿಯೂ ಕೂಡ ಯಶಸ್ಸನ್ನು ಪಡೆದುಕೊಂಡಿರುವ ನಟಿ ಟಬು ರವರಿಗೆ ಇದೀಗ ನಲವತ್ತೇಳು ವರ್ಷ. ಆದರೂ ಕೂಡ ಈ ನಟಿಗೆ ಇನ್ನೂ ಮದುವೆಯಾಗಿಲ್ಲ.
ಇನ್ನು ಎರಡನೆಯದಾಗಿ ನಮಗೆ ಶಿಲ್ಪ ಶೆಟ್ಟಿ ರವರ ಸಹೋದರಿ ಶಮಿತಾ ಶೆಟ್ಟಿ ರವರ ಹೆಸರು ಕೇಳಿ ಬರುತ್ತದೆ. ಈಗಾಗಲೇ ಶಮಿತಾ ರವರ ಸಹೋದರಿ ಶಿಲ್ಪಶೆಟ್ಟಿ ರವರು ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸದ್ದುಮಾಡುವ ಶಮಿತ ಶೆಟ್ಟಿ ರವರು ಮಾತ್ರ ಇಲ್ಲಿಯವರೆಗೂ ಮದುವೆಯಾಗಿಲ್ಲ. ಇವರ ಪ್ರತಿಯೊಂದು ಪೋಸ್ಟ್ ಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತದೆ, ಬಹಳ ಸುಂದರವಾಗಿದ್ದರೂ ಕೂಡ ಇವರು ಅದ್ಯಾಕೋ ತಿಳಿದಿಲ್ಲ ಇನ್ನೂ ಮದುವೆಯಾಗಿಲ್ಲ.
ಇನ್ನು ಮೂರನೆಯದಾಗಿ ವಿಶ್ವ ಸುಂದರಿ ಕಿರೀಟವನ್ನು ಪಡೆದುಕೊಂಡು ಬಾಲಿವುಡ್ ನಲ್ಲಿ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿ ಪಡ್ಡೆ ಹುಡುಗರ ಮನ ಗೆದ್ದಿದ್ದ ಸುಶ್ಮಿತಾ ಸೇನ್ ಅವರ ಹೆಸರು ಕೇಳಿ ಬರುತ್ತದೆ. ಸ್ನೇಹಿತರೇ ಇವರು ಮಾಜಿ ವಿಶ್ವಸುಂದರಿ, ಬಾಲಿವುಡ್ನಲ್ಲಿ ಅತಿಹೆಚ್ಚು ಗಳಿಸಿದ ನಟಿಯರಲ್ಲಿ ಒಬ್ಬರು. ಹಲವಾರು ನಟರ ಜೊತೆ ಇವರ ಹೆಸರು ಸಾಕಷ್ಟು ಬಾರಿ ಕೇಳಿಬಂದಿತ್ತು. ಆದರೂ ಕೂಡ ಇವರು ಇಲ್ಲಿಯವರೆಗೂ ಮದುವೆಯಾಗಿಲ್ಲ. ಇನ್ನು ಇತ್ತೀಚಿಗೆ ತನಗಿಂತ 15 ವರ್ಷದ ಕಡಿಮೆ ವಯಸ್ಸಿನ ಹುಡುಗನನ್ನು ಮದುವೆಯಾಗುವ ಸುದ್ದಿಗಳು ಕೇಳಿಬಂದಿದ್ದವು. ಒಂದು ವೇಳೆ ಅದೇ ನಿಜವಾದಲ್ಲಿ ಸುಶ್ಮಿತಾ ಸೇನ್ ರವರು ಇನ್ನು ಕೆಲವೇ ತಿಂಗಳಲ್ಲಿ ಮದುವೆಯಾಗಲಿದ್ದಾರೆ
ಸ್ನೇಹಿತರೇ ನಾಲ್ಕನೆಯದಾಗಿ ಅತಿ ಕಡಿಮೆ ಚಿತ್ರ ಮಾಡಿದ್ದರು ಕೂಡ ಬಾಲಿವುಡ್ ನಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡು ಈಗಲೂ ಕೂಡ ಜನರಿಂದ ಗುರುತಿಸಲ್ಪಡುವ ನರ್ಗಿಸ್ ಫಕ್ರಿ ರವರ ಹೆಸರು ಕೇಳಿ ಬರುತ್ತದೆ. ಇವರಿಗೆ ಇದೀಗ ಬರೋಬರಿ 38 ವರ್ಷ ಆದರೂ ಕೂಡ ಇಲ್ಲಿಯವರೆಗೂ ಇವರು ಮದುವೆಯಾಗಿಲ್ಲ ಕಳೆದ ಕೆಲವು ವರ್ಷಗಳ ಹಿಂದೆ ಉದ್ಯಮಿ ಆಕಾಶ್ ಚೋಪ್ರಾ ರವರನ್ನು ಮದುವೆಯಾಗುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು ಆದರೆ ಕೆಲವು ದಿನಗಳ ನಂತರ ಸಂಬಂಧ ಮುರಿದು ಹೋಯಿತು.
ಇನ್ನು ಹಿಂದಿ ಕಿರುತೆರೆಯಲ್ಲಿ ಸಾಕಷ್ಟು ಯಶಸ್ಸು ಗಳಿಸಿರುವ ಸಾಕ್ಷಿ ತನ್ವರ್ ರವರು ಇಲ್ಲಿಯವರೆಗೂ ಮದುವೆಯಾಗಿಲ್ಲ 45 ವರ್ಷಗಳು ಕಳೆದರೂ ಕೂಡ ಅದ್ಯಾಕೋ ಇವರು ಮದುವೆಯ ಕುರಿತು ಗಮನ ಹರಿಸಿಲ್ಲ. ಅಷ್ಟೇ ಅಲ್ಲದೆ ಇವರು ಒಂದು ಹೆಣ್ಣು ಮಗುವನ್ನು ದತ್ತು ಪಡೆದುಕೊಂಡು ಜೀವನ ನಡೆಸುತ್ತಿದ್ದಾರೆ, ಈ ಕುರಿತು ಪ್ರಶ್ನೆ ಮಾಡಿದಾಗ ಮದುವೆ ಮಾಡಿಕೊಂಡರೆ ಮಾತ್ರ ಜೀವನ ನಡೆಸಬಹುದು ಎಂಬುದು ಶುದ್ಧ ಸುಳ್ಳು ಎಂದಿದ್ದಾರೆ.