ಹಿರಿಯ ನಟಿ ಮಂಜುಳಾ ರವರ ಸ್ಥಾನವನ್ನು ತುಂಬುವ ಭರವಸೆ ಮೂಡಿಸುತ್ತಿರುವ ನಟಿ ಯಾರು ಗೊತ್ತೇ??
ಹಿರಿಯ ನಟಿ ಮಂಜುಳಾ ರವರ ಸ್ಥಾನವನ್ನು ತುಂಬುವ ಭರವಸೆ ಮೂಡಿಸುತ್ತಿರುವ ನಟಿ ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ನಟಿಸಿದ ಅದೆಷ್ಟೋ ನಟಿಯರು ಕನ್ನಡಿಗರ ಮನದಾಳದಲ್ಲಿ ಇಂದಿಗೂ ಕೂಡ ಹುದುಗಿದ್ದಾರೆ. ಕೆಲವು ಇಂದಿಗೂ ನಮ್ಮೊಂದಿಗೆ ಇದ್ದರೆ ಕೆಲವರು ನಮ್ಮನ್ನು ಬಿಟ್ಟು ಹೋದರು ಸಹ ನಮ್ಮ ಮನದಾಳದಲ್ಲಿ ಇಂದಿಗೂ ನಮ್ಮನ್ನು ಸಹ ಕಾಡುತ್ತಿರುತ್ತಾರೆ. ಕಾಡುವ ಕಾರಣ ಇನ್ನೇನಲ್ಲ ಇಂದಿಗೂ ಅವರ ಸ್ಥಾನವನ್ನು ಆಗಲಿ ಅವರ ನಟನೆಯ ನ್ನಾಗಲಿ ತುಂಬಲಿ ಯಾರು ಬಂದಿಲ್ಲವಲ್ಲ ಎಂಬ ಕೊರಗು ಅಷ್ಟೇ. ಬನ್ನಿ ಆ ನಟಿ ಹಾಗೂ ಅವರ ಸ್ಥಾನವನ್ನು ತುಂಬಬಲ್ಲ ಯುವನಟಿ ಯಾರನ್ನು ಹೇಳುತ್ತೇವೆ.
ಹೌದು ನಾವು ಮಾತನಾಡಲು ಹೊರಟಿರುವುದು 70 ಹಾಗೂ 80ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ನಟಿ ಮಂಜುಳಾ ರವರ ಬಗ್ಗೆ. ನಟಿ ಮಂಜುಳಾ ಮೊದಲು ನಾಟಕದ ಹಿನ್ನೆಲೆಯಿಂದ ಬಂದವರು. 1966ರಲ್ಲಿ ಮನೆ ಕಟ್ಟಿ ನೋಡು ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದರು. ನಂತರ ದಿನಗಳಲ್ಲಿ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಗಳಾದ ಡಾಕ್ಟರ್ ರಾಜಕುಮಾರ್ ಡಾಕ್ಟರ್ ವಿಷ್ಣುವರ್ಧನ್ ಶ್ರೀನಾಥ್ ಅಶೋಕ್ ಹಾಗೂ ನಮ್ಮ ಶಂಕ್ರಣ್ಣನ ವರೊಂದಿಗೂ ಕಾಣಿಸಿಕೊಂಡರು.
ಆದರೆ ಅವರ ಹೆಚ್ಚಾಗಿ ಕಾಣಿಸಿಕೊಂಡಿದ್ದು ಶ್ರೀನಾಥ್ ರವರೊಂದಿಗೆ. ಮಂಜುಳಾರವರು ಶ್ರೀನಾಥ ಅವರೊಂದಿಗೆ 35 ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಮಂಜುಳಾರವರು ಕನ್ನಡ ಚಿತ್ರರಂಗದಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡ ಸ್ಟಾರ್ ನಟಿ. ಅಂದಿನ ಕಾಲದಲ್ಲಿ ಮಂಜುಳಾ ಇಲ್ಲದಿದ್ದರೆ ಚಿತ್ರಗಳೇ ಪ್ರಾರಂಭವಾಗುತ್ತಿರಲಿಲ್ಲ. ನಿರ್ಮಾಪಕರು ಸ್ಟಾರ್ ನಟರ ಕಾಲ್ ಶೀಟ್ ಗಾಗಿ ಕಾಯುತಿದ್ದರೆ ಸ್ಟಾರ್ ನಟರು ಮಂಜುಳಾ ಕಾಲ್ ಶೀಟ್ ಗಾಗಿ ಕಾಯುತ್ತಿದ್ದಾರಂತೆ.
70 ಹಾಗೂ 80ರ ದಶಕದಲ್ಲಿ ಅಷ್ಟೊಂದು ಬೇಡಿಕೆಯನ್ನು ಗಳಿಸಿಕೊಂಡಿದ್ದರು ನಟಿ ಮಂಜುಳಾ. ಎಂತಹದೇ ಮಾಸ್ ಗೆ ಮಾಸ್ ಪಾತ್ರವನ್ನು ಕ್ಲಾಸ್ಗೆ ಕ್ಲಾಸ್ ಪಾತ್ರವನ್ನು ನಿರ್ವಹಿಸುವಂತಹ ಚಾಕಚಕ್ಯತೆ ನಟಿ ಮಂಜುಳಾ ರವರಿಗೆ ಇತ್ತು. ಅದಕ್ಕಾಗಿ ಅಂದಿನ ಪ್ರೇಕ್ಷಕರಿಗೆ ಮಂಜುಳಾರವರು ಯಾವ ಸ್ಟಾರ್ ಹೀರೋಗಿಂತ ಕಡಿಮೆಯಾಗಿರಲಿಲ್ಲ. ಸ್ಟಾರ್ ಹೀರೋಗಳ ಎದುರಿಗೆ ಅವರಿಗಿಂತಲೂ ಚೆನ್ನಾಗಿ ನಟಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದ ಏಕೈಕ ನಟಿ ಎಂದರೆ ಅದು ಕೇವಲ ನಟಿ ಮಂಜುಳಾ ಒಬ್ಬರೇ. ಆದರೆ ಅಂತಹ ನಟಿ ಕೇವಲ 31 ವಯಸ್ಸು ಇರಬೇಕಾದರೆ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದು ಮಾತ್ರ ಅರಗಿಸಿಕೊಳ್ಳಲಾಗದ ವಿಷಯ.
ಇಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಹಲವಾರು ನಟಿಯರು ನಡೆಸುತ್ತಿದ್ದಾರೆ ಆದರೆ ಮಂಜುಳಾರವರ ಸ್ಥಾನವನ್ನು ತುಂಬಬಲ್ಲ ಸಾಮರ್ಥ್ಯವುಳ್ಳ ಏಕೈಕ ನಟ ಎಂಬ ಪರಿಗಣನೆಗೆ ಬರುವುದು ಇವರೊಬ್ಬರು ಮಾತ್ರ. ಆ ನಟಿ ಯಾರನ್ನು ಹೇಳುತ್ತೇವೆ ಬನ್ನಿ. ಮಂಜುಳಾರವರ ಸ್ಥಾನವನ್ನು ಸಮರ್ಥವಾಗಿ ಅಲ್ಲದಿದ್ದರೂ ಅವರ ಇಲ್ಲದಿರುವಿಕೆ ದುಃಖವನ್ನು ಸರಿಸಲು ಅವರ ಸ್ಥಾನವನ್ನು ತುಂಬ ಬಲ್ಲರು ಎಂದು ಹೇಳಬಹುದು.
ಹೌದು ನಾವು ಮಾತನಾಡುತ್ತಿರುವುದು ಯುವ ನಟಿ ಅದಿತಿ ಪ್ರಭುದೇವ್ ಅವರ ಬಗ್ಗೆ. ಹೌದು ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ವುಡ್ನ ಹಲವಾರು ಚಿತ್ರಗಳಲ್ಲಿ ನಟಿಸಿರುವ ಅದಿತಿ ಪ್ರಭುದೇವ ನಮಗೆ ಮಂಜುಳಾರವರ ನೆನಪನ್ನು ತಂದು ಕೊಡುತ್ತಾರೆ. ಮಂಜುಳಾ ರವರಂತೆ ಅದಿತಿ ಪ್ರಭುದೇವ ಕೂಡ ಯಾವ ಪಾತ್ರಗಳನ್ನು ಕೂಡ ಸರಿಯಾಗಿ ನಿರ್ವಹಿಸಬಲ್ಲರು. ಮಾಸ್ಗೆ ಮಾಸ್ ಪಾತ್ರವನ್ನು ಸಹ ಕ್ಲಾಸ್ಗೆ ಕ್ಲಾಸ್ ಪಾತ್ರವನ್ನು ಸಹ ನಿರ್ವಹಿಸಬಲ್ಲ ನಟಿಯಾಗಿ ಅದಿತಿ ಪ್ರಭುದೇವ ರವರು ಇತ್ತೀಚಿನ ವರ್ಷಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅದಿತಿ ಪ್ರಭುದೇವ ರವರು ಈಗ ಕನ್ನಡ ಚಿತ್ರರಂಗದಲ್ಲಿ ಕಾಲಿಟ್ಟು ಕೆಲವೇ ವರ್ಷಗಳಾಗಿದ್ದರೂ ಸಹ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ನಟಿ ಮಂಜುಳಾ ರವರ ಸ್ಥಾನವನ್ನು ನಟಿ ಅದಿತಿ ಪ್ರಭುದೇವ ರವರು ತುಂಬುವ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಪ್ಪದೇ ತಿಳಿಸಿ.