ಭಾರತ ಕ್ರಿಕೆಟ್ ತಂಡದ ಯುವ ಕ್ರಿಕೆಟಿಗರ ಅಪ್ರತಿಮ ಸುಂದರಿ ಗರ್ಲ್ ಫ್ರೆಂಡ್ ಗಳು ಯಾರ್ಯಾರು ಗೊತ್ತೇ??
ಭಾರತ ಕ್ರಿಕೆಟ್ ತಂಡದ ಯುವ ಕ್ರಿಕೆಟಿಗರ ಅಪ್ರತಿಮ ಸುಂದರಿ ಗರ್ಲ್ ಫ್ರೆಂಡ್ ಗಳು ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕ್ರಿಕೆಟ್ ರಂಗವೇ ಹಾಗೆ ಇಲ್ಲಿ ತಮ್ಮ ಅದ್ಭುತ ಪ್ರತಿಭಾ ಪ್ರದರ್ಶನದ ಅನಾವರಣ ಮಾಡಿದರೆ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ. ಒಮ್ಮೆ ನಮ್ಮ ಕ್ರಿಕೆಟಿಗರು ಭಾರತೀಯ ಕ್ರಿಕೆಟ್ ತಂಡಕ್ಕೆ ಸೆಲೆಕ್ಟ್ ಆದರೆ ಅವರ ಹಿಂದೆ ಹಲವಾರು ಯಶಸ್ಸಿನ ಹಾದಿ ಹುಡುಕಿಕೊಂಡು ಬರುತ್ತದೆ. ಅದರಲ್ಲಿ ಕೆಲವು ಹುಡುಗಿಯರ ಹೆಸರಿನ ಜೊತೆಗೆ ಅವರ ಹೆಸರು ತಳುಕು ಹಾಕಿಕೊಳ್ಳುವುದು ಕೂಡ ಒಂದು. ಹಿಂದಿನ ವಿಷಯದಲ್ಲಿ ನಾವು ನಮ್ಮ ಭಾರತೀಯ ಕ್ರಿಕೆಟ್ ತಂಡದಲ್ಲಿ ಇರುವ ಯುವ ಆಟಗಾರರು ಹಾಗೂ ಅವರ ಗರ್ಲ್ಫ್ರೆಂಡ್ಸ್ ಬಗ್ಗೆ ಮಾತನಾಡಲು ಹೊರಟಿದ್ದೇವೆ. ಬನ್ನಿ ಈ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇವೆ.
ರಿಷಬ್ ಪಂತ್ ಭಾರತೀಯ ಕ್ರಿಕೆಟ್ ತಂಡದ ಎಲ್ಲಾ ಪ್ಲಾಟ್ ಫಾರ್ಮ್ ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ತಮ್ಮ ಜಾಗವನ್ನು ಖಾಯಂ ಮಾಡಿಕೊಂಡಿರುವ ಭರವಸೆಯ ಆಟಗಾರ ರಿಷಬ್ ಪಂತ್. ಐಪಿಎಲ್ ನಲ್ಲಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕೂಡ ನಾಯಕನಾಗಿ ಮುನ್ನಡೆಸಿದ್ದಾರೆ. ಇವರ ಗರ್ಲ್ ಫ್ರೆಂಡ್ ಹೆಸರು ಇಶಾ ನೇಗಿ ಎಂದು. ಇವರಿಬ್ಬರ ಲವ್ ಕಹಾನಿಯ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಇಶಾ ನೇಗಿ ಪ್ರಫೆಷನಲ್ಲಿ ಇಂಟೀರಿಯರ್ ಡಿಸೈನರ್. ಉತ್ತರಾಖಂಡ್ ರಾಜ್ಯದ ಡೆಹರಾಡೂನ್ ನವರು. ಇವರಿಬ್ಬರ ಪ್ರೇಮ ಕಹಾನಿಯ ಬಗ್ಗೆ ಗೊತ್ತಾಗಿದ್ದು ರಿಷಬ್ ಪಂತ್ ರವರು 2019 ರಲ್ಲಿ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ ಬಳಿಕವಷ್ಟೇ.
ಶುಭಮನ್ ಗಿಲ್ ಅಂಡರ್ ನೈಂಟೀನ್ ತಂಡದಿಂದ ಸೀದಾ ಭಾರತ ಕ್ರಿಕೆಟ್ ತಂಡಕ್ಕೆ ತನ್ನ ಪ್ರತಿಭೆಯ ಮೇರೆಗೆ ಸೆಲೆಕ್ಟ್ ಆದವರು ಶುಭಮನ್. ಶುಭಮನ್ ರವರ ಹೆಸರು ತಳುಕು ಹಾಕಿಕೊಂಡಿರುವುದು ಭಾರತ ಕ್ರಿಕೆಟ್ ಲೋಕದ ದಂತಕತೆ ಸಚಿನ್ ತೆಂಡೂಲ್ಕರ್ ರವರ ಮಗಳು ಸಾರ ತೆಂಡುಲ್ಕರ್ ರವರ ಜೊತೆ. ಹೌದು ಇವರಿಬ್ಬರು ಜೊತೆಗೆ ಕಾಣಿಸಿಕೊಳ್ಳದಿದ್ದರೂ ಇವರಿಬ್ಬರು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡು ಫೋಟೋಗೆ ಒಂದೇ ರೀತಿಯ ಕ್ಯಾಪ್ಷನ್ ನನ್ನು ಹಾಕುವುದರ ಮೂಲಕ ಮಾಧ್ಯಮದಲ್ಲಿ ಇವರಿಬ್ಬರ ಕುರಿತಂತೆ ಏನೋ ಗುಸುಗುಸು ಇದೆ ಎಂದು ಅಂದುಕೊಳ್ಳುವಂತೆ ಮಾಡಿದೆ.
ಇಶನ್ ಕಿಶನ್ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಅದ್ಭುತವಾಗಿ ಬ್ಯಾಟ್ ಬೀಸುವ ಇಶನ್ ಕಿಶನ್ ರವರು ಇತ್ತೀಚೆಗೆ ಬಹು ಬೇಡಿಕೆಯ ಮೇರೆಗೆ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು. ಭಾರತೀಯ ಕ್ರಿಕೆಟ್ ತಂಡದಲ್ಲಿ ಕೂಡ ಅತ್ಯುತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿ ಶುಭಾರಂಭವನ್ನು ಮಾಡಿದ್ದಾರೆ. ಇವರ ಗರ್ಲ್ ಫ್ರೆಂಡ್ ಹೆಸರು ಅದಿತಿ ಹುಂಡಿಯ. ಅದಿತಿ ಹುಂಡಿಯ ರಾಜಸ್ಥಾನ ಮೂಲದವರಾಗಿದ್ದು ಇವರು ಫ್ಯಾಶನ್ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. 2016ರಲ್ಲಿ ತಮ್ಮ ಮಾಡಲಿಂಗ್ ಕರಿಯರನ್ನು ಪ್ರಾರಂಭಿಸಿ ಇಂದಿಗೂ ಕೂಡ ಚಾಲ್ತಿಯಲ್ಲಿದ್ದಾರೆ. ಇವರಿಬ್ಬರೂ ಕಳೆದ ಎರಡು ವರ್ಷಗಳಿಂದ ರಿಲೇಷನ್ಶಿಪ್ ನಲ್ಲಿದ್ದಾರೆ.
ಕೆ ಎಲ್ ರಾಹುಲ್ ಬಾಲಿವುಡ್ ನ ಖ್ಯಾತ ನಟ ಸುನಿಲ್ ಶೆಟ್ಟಿ ಅವರ ಮಗಳು ನಟಿ ಅಥಿಯ ಶೆಟ್ಟಿ ಅವರೊಂದಿಗೆ ಖ್ಯಾತ ಬ್ಯಾಟ್ಸ್ಮನ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ರವರ ಡೇಟಿಂಗ್ ನಡೆಯುತ್ತಿದೆ. ಇದು ಈಗ ಮಾಧ್ಯಮಗಳಲ್ಲಿ ಬಹಳಷ್ಟು ಬಾರಿ ಸುದ್ದಿ ಕೂಡ ಆಗಿದೆ. ರಾಹುಲ್ ಚಹರ್ ರಾಹುಲ್ ಚಹರ್ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪಾಳ್ಯದಲ್ಲಿ ನಂಬಿಕೆಯ ಸ್ಪಿನ್ ಬೌಲರ್ ಆಗಿ ಬಹಳಷ್ಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಇಶಾನಿ ಎಂಬ ಗರ್ಲ್ಫ್ರೆಂಡ್ ಇದ್ದು 2019 ರಲ್ಲಿ ಇಬ್ಬರು ಎಂಗೇಜ್ಮೆಂಟ್ ಕೂಡ ಆಗಿದ್ದಾರೆ.
ನವದೀಪ್ ಸೈನಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿ ಭರವಸೆಯ ಆಟಗಾರನಾಗಿ ನಂತರ ಭಾರತೀಯ ಕ್ರಿಕೆಟ್ ತಂಡದಲ್ಲಿ ಕೂಡ ಹೆಸರನ್ನು ಪಡೆದಿರುವ ನವದೀಪ್ ಸೈನಿ ಅವರ ಗರ್ಲ್ ಫ್ರೆಂಡ್ ಹೆಸರು ಪೂಜಾ ಬಿಜಾರ್ನಿಯ. ತಮ್ಮ ಯಶಸ್ಸಿಗೆ ಕಾರಣ ತಮ್ಮ ಗರ್ಲ್ಫ್ರೆಂಡ್ ಎಂದು ನವದೀಪ್ ಸೈನಿ ಹಲವಾರು ಬಾರಿ ಹೇಳಿಕೊಂಡಿದ್ದಾರೆ.
ಪೃಥ್ವಿ ಶಾ ಭಾರತೀಯ ಕ್ರಿಕೆಟ್ ತಂಡದ ಓಪನಿಂಗ್ ಬ್ಯಾಟ್ಸ್ ಮ್ಯಾನ್ ಪೃಥ್ವಿ ಶಾ ರವರ ಗರ್ಲ್ ಫ್ರೆಂಡ್ ಹೆಸರು ಪ್ರಾಚಿ ಸಿಂಗ್. ಇವರಿಬ್ಬರು ಜೊತೆಗೆ ಕಾಣಿಸಿಕೊಳ್ಳದಿದ್ದರೂ ಇವರ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಇವರ ಲವ್ ಕಹಾನಿ ನಡೆಯುತ್ತಿದೆ ಎಂಬುದು ಈಗ ಬರುತ್ತಿರುವ ಸುದ್ದಿ. ದೀಪಕ್ ಹೂಡ ಭಾರತೀಯ ಕ್ರಿಕೆಟ್ ತಂಡದ ಭರವಸೆಯ ಯುವ ಆಟಗಾರ. ಇವರು ಸ್ನೇಹ ಎಂಬಾಕೆಯೊಂದಿಗೆ ರಿಲೇಶನ್ ಶಿಪ್ ನಲ್ಲಿ ಇದ್ದು ಇದರ ಬಗ್ಗೆ ಅಷ್ಟೊಂದು ಸುದ್ದಿಯಾಗಿಲ್ಲ.
ರಿತುರಜ್ ಗಾಯಕ್ವಾಡ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಅದ್ಭುತ ಓಪನಿಂಗ್ ಬ್ಯಾಟ್ಸ್ ಮನ್ ಆಗಿ ಹೆಸರು ಮಾಡಿರುವ ರಿತುರಜ್ ರವರ ಹುಡುಗಿಯ ಹೆಸರು ಉತ್ಕರ್ಷ ಎಂದು. ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು ಬಗ್ಗೆ ಅಷ್ಟೊಂದು ಸುದ್ದಿ ಆಗದಿದ್ದರೂ ಅವರ ಲವ್ ಕಹಾನಿ ಬಹಳಷ್ಟು ಹೆಸರಾಗಿದೆ. ನೋಡಿದ್ರಲ್ಲ ಸ್ನೇಹಿತರೇ ಭಾರತೀಯ ಕ್ರಿಕೆಟ್ ತಂಡದ ಯುವ ಕ್ರಿಕೆಟಿಗರು ಗರ್ಲ್ ಫ್ರೆಂಡ್ಸ್ ಯಾರು ಎಂದು. ಕೆಲವರು ಖ್ಯಾತನಾಮ ರಾಗಿದ್ದು ಕೆಲವರು ಅವರ ಬಾಲ್ಯದಿಂದಲೂ ಪ್ರೀತಿಸಿ ಕೊಂಡು ಬಂದವರಾಗಿದ್ದಾರೆ. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಪ್ಪದೇ ತಿಳಿಸಿ.