ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಮುಗಿದ ನಂತರ ನಿವೃತ್ತಿ ಘೋಷಿಸುವ ಭಾರತೀಯ ಕ್ರಿಕೇಟಿಗರು ಯಾರ್ಯಾರು ಗೊತ್ತಾ??
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಮುಗಿದ ನಂತರ ನಿವೃತ್ತಿ ಘೋಷಿಸುವ ಭಾರತೀಯ ಕ್ರಿಕೇಟಿಗರು ಯಾರ್ಯಾರು ಗೊತ್ತಾ??
ನಮಸ್ಕಾರ ಸ್ನೇಹಿತರೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ದಿನ ಹತ್ತಿರ ಬರುತ್ತಿದ್ದಂತೆ ಈಗ ಹಲವಾರು ಹೊಸ ಸುದ್ದಿಗಳು ಕೇಳಿಬರುತ್ತಿವೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಎಂಬುದು ಒಂದು ದೊಡ್ಡ ಮೈಲುಗಲ್ಲಾಗಿದ್ದು, ಈ ಟೂರ್ನಿ ಮುಗಿದ ನಂತರ ಹಲವು ಭಾರತೀಯ ಕ್ರಿಕೇಟಿಗರು ಟೆಸ್ಟ್ ಕ್ರಿಕೇಟ್ ನಿಂದ ನಿವೃತ್ತಿ ಹೊಂದಬಹುದು ಎಂದು ಹೇಳಲಾಗಿದೆ. ಆ ಆಟಗಾರರು ಯಾರು ಎಂಬುದನ್ನ ತಿಳಿಯೋಣ ಬನ್ನಿ.
ಮೊದಲನೆಯದಾಗಿ ವೃದ್ಧಿಮಾನ್ ಸಹಾ – ಬಂಗಾಳದ 34 ವರ್ಷದ ವಿಕೇಟ್ ಕೀಪರ್ ಬ್ಯಾಟ್ಸಮನ್ ಈ ಟೂರ್ನಿ ಮುಗಿದ ನಂತರ ಟೆಸ್ಟ್ ಕ್ರಿಕೇಟ್ ಗೆ ನಿವೃತ್ತಿ ಹೇಳುವ ಸಾಧ್ಯತೆ ದಟ್ಟವಾಗಿದೆ. ತಂಡದಲ್ಲಿ ರಿಷಭ್ ಪಂತ್ ಸ್ಥಾನ ಭದ್ರವಾಗಿರುವುದರಿಂದ ಸಹಾ ಸದ್ಯ ಬೆಂಚು ಕಾಯಿಸುತ್ತಿದ್ದಾರೆ. ಇನ್ನು ಎರಡನೆಯದಾಗಿ ಶಿಖರ್ ಧವನ್ – ಡ್ಯಾಶಿಂಗ್ ಒಪನರ್ ಶಿಖರ್ 2018 ರಲ್ಲಿ ಕೊನೆಯ ಟೆಸ್ಟ್ ಆಡಿದ್ದರು. ಕಳಪೆ ಫಾರ್ಮ್ ನಿಂದ ತಂಡದಿಂದ ಹೊರಗೆ ಬಿದ್ದಿದ್ದರು. ಸದ್ಯ ಒಪನರ್ ಗಳಾಗಿ ಮಯಾಂಕ್,ರಾಹುಲ್, ಗಿಲ್, ಪೃಥ್ವಿ ಶಾ ಭವಿಷ್ಯದ ದೃಷ್ಠಿಯಿಂದ ಟೆಸ್ಟ್ ತಂಡದಲ್ಲಿ ಸ್ಥಾನ ದೊರೆಯುವುದು ಕಷ್ಟ. ಹಾಗಾಗಿ ನಿವೃತ್ತಿ ಹೇಳುವ ಸಾಧ್ಯತೆ ಇದೆ.
ಇನ್ನು ಮೂರನೆಯದಾಗಿ ಇಶಾಂತ್ ಶರ್ಮಾ – ಲಂಬೂ ವೇಗಿ 33 ಕ್ಕೆ ಕಾಲಿಡಲಿದ್ದಾರೆ. ಇಂಜುರಿ ಸಮಸ್ಯೆಯಿಂದ ಹಲವಾರು ಟೂರ್ನಿಗಳನ್ನ ತಪ್ಪಿಸಿಕೊಂಡಿರುವ ಕಾರಣ, ಈ ಟೆಸ್ಟ್ ಗೆಲ್ಲಿಸಿ ನಿವೃತ್ತಿ ಹೊಂದಬಹುದು. ಇನ್ನು ನಾಲ್ಕನೆಯದಾಗಿ ಮುರಳಿ ವಿಜಯ್ – ತಮಿಳುನಾಡಿನ 36 ವರ್ಷದ ವಿಜಯ್ ಸಹ 2018 ರಿಂದ ಈಚೆಗೆ ತಂಡದಲ್ಲಿ ಸ್ಥಾನ ಪಡೆದಿಲ್ಲ. ಮರಳಿ ತಂಡಕ್ಕೆ ಬರುವುದು ಸಹ ಕಷ್ಟ. ಹಾಗಾಗಿ ಎಲ್ಲಾ ಪ್ರಕಾರಗಳಿಗೂ ಮುರಳಿ ನಿವೃತ್ತಿ ಹೇಳುವ ಸಾಧ್ಯತೆ ಇದೆ. ಇನ್ನು ಕೊನೆಯದಾಗಿ ದಿನೇಶ್ ಕಾರ್ತಿಕ್ – 36 ರ ಹರೆಯದ ಡಿಕೆ ಸಹ ಇನ್ನು ಮುಂದೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟ. ಇವರು ಸಹ ಶೀಘ್ರದಲ್ಲೇ ನಿವೃತ್ತಿ ಘೋಷಿಸಬಹುದು. ಈ ಕ್ರಿಕೇಟಿಗರ ನಿವೃತ್ತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.