ಕೊಹ್ಲಿ,ರೋಹಿತ್ ಅಲ್ಲವೇ ಅಲ್ಲ, ಈ ಆಟಗಾರ ವಿಶ್ವದ ಬೆಸ್ಟ್ ಟಿ20 ಪ್ಲೇಯರ್ ಎಂದ ಗವಾಸ್ಕರ್ ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಟಿ20 ಕ್ರಿಕೇಟ್ ಅಂದರೇ ಬಿರುಸಾಗಿ ಆಟವಾಡುವ ಆಟಗಾರರಿಗೆ ಬೇಡಿಕೆ ಹೆಚ್ಚು. ಯಾರ ಸ್ಟ್ರೈಕ್ ರೇಟ್ 150 ಕ್ಕಿಂತ ಹೆಚ್ಚು ಇರುತ್ತದೆಯೋ, ಯಾರ ಸಿಕ್ಸರ್ ಹಿಟ್ಟಿಂಗ್ ಸಾಮರ್ಥ್ಯ ಜಾಸ್ತಿ ಇರುತ್ತದೆಯೋ ಅವರುಗಳೇ ಮ್ಯಾಚ್ ವಿನ್ನರ್ ಆಟಗಾರರಾಗಿರುತ್ತಾರೆ. ಟಿ20 ಯಲ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸಮನ್ ಯಾರು ಅಂದಾಗ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಡೇವಿಡ್ ವಾರ್ನರ್, ಡೇವಿಡ್ ಮಲಾನ್, ಕ್ರಿಸ್ ಗೇಲ್, ಹೆಸರುಗಳು ಸಹಜವಾಗಿ ಕೇಳಿ ಬರುತ್ತವೆ.

ಆದರೇ ಇದೇ ಪ್ರಶ್ನೆಯನ್ನ ಭಾರತದ ಕ್ರಿಕೇಟ್ ನ ದಂತಕಥೆ ಸುನೀಲ್ ಗವಾಸ್ಕರ್ ಗೂ ಸಹ ಕೇಳಿದ್ದರು. ಆದರೇ ಅವರ ಉತ್ತರದಲ್ಲಿ ಈ ಮೇಲಿನ ಆಟಗಾರರು ಯಾರು ಇರಲಿಲ್ಲ. ಸುನೀಲ್ ಗವಾಸ್ಕರ್ ಆರ್ಸಿಬಿ ತಂಡದ ಈ ಆಟಗಾರ ವಿಶ್ವದ ಬೆಸ್ಟ್ ಟಿ20 ಬ್ಯಾಟ್ಸಮನ್ ಎಂದು ಒಪ್ಪಿಕೊಂಡಿದ್ದಾರೆ. ಟಿ20 ಯಲ್ಲಿ ಉತ್ತಮ ಎನಿಸಿಕೊಳ್ಳಲು, ಆ ಬ್ಯಾಟ್ಸ್ ಮನ್ ಮೈದಾನದ ಎಲ್ಲಾ ಮೂಲೆ ಮೂಲೆಗಳಿಗೂ ಚೆಂಡನ್ನ ಬಾರಿಸುವ ಸಾಮರ್ಥ್ಯ ಹೊಂದಿರಬೇಕು. ಆತನ ರಿಸ್ಟ್ ವರ್ಕ್ ಹಾಗೂ ಫುಟ್ ವರ್ಕ್ ಅತ್ಯುತ್ತಮವಾಗಿರಬೇಕು.

ಪುಲ್ ಮತ್ತು ಕಟ್ ಶಾಟ್ ಬಾರಿಸುವ ವೇಳೆ ಆತನ ಕಣ್ಣು ಬಹಳಷ್ಟು ಸೂಕ್ಷ್ಮ, ತೀಕ್ಷ್ಣ ಹಾಗೂ ಚುರುಕಾಗಿರಬೇಕು, ಆರ್ಸಿಬಿ ಈ ಆಟಗಾರ ಮಾತ್ರ ಈ ಎಲ್ಲಾ ಸಾಮರ್ಥ್ಯ ಹೊಂದಿದ್ದಾನೆ ಎಂದು ಸನ್ನಿ ಗವಾಸ್ಕರ್ ತಿಳಿಸಿದರು. ಅಷ್ಟಕ್ಕೂ ಆರ್ಸಿಬಿಯ ಆ ಆಟಗಾರ ಯಾರು ಎಂಬ ನಿಮ್ಮ ಪ್ರಶ್ನೆಗೆ ಉತ್ತರ, ಅದು ಬೇರೆ ಯಾರೂ ಅಲ್ಲ, ಆರ್ಸಿಬಿಯ ಆಪತ್ಭಾಂಧವ ಅಬ್ರಹಾಂ ಡಿ ವಿಲಿಯರ್ಸ ಅಲಿಯಾಸ್ ಎಬಿ.ಡಿ.ವಿಲಿಯರ್ಸ. ತನ್ನ 360 ಡಿಗ್ರಿ ಆಟದಿಂದ ಆರ್.ಸಿ.ಬಿ ತಂಡಕ್ಕೆ ಹೆಚ್ಚು ಪಂದ್ಯ ಗೆಲ್ಲಿಸಿಕೊಟ್ಟ ಎಬಿ.ಡಿ.ವಿಲಿಯರ್ಸ್ ವಿಶ್ವದ ಶ್ರೇಷ್ಠ ಟಿ20 ತಂಡದ ಬ್ಯಾಟ್ಸಮನ್ ಎಂದು ಸುನೀಲ್ ಗವಾಸ್ಕರ್ ಹೇಳಿದರು. ನಿಮ್ಮ ನೆಚ್ಚಿನ ಟಿ20 ತಂಡದ ವಿಶ್ವದ ಶ್ರೇಷ್ಠ ಬ್ಯಾಟ್ಸಮನ್ ಯಾರು ಎಂಬುದನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.

Facebook Comments

Post Author: Ravi Yadav