ಬಿಗ್ ನ್ಯೂಸ್: ಜಮ್ಮು ಹಾಗೂ ಕಾಶ್ಮೀರದಲ್ಲಿ ಅಖಾಡಕ್ಕೆ ಹೆಚ್ಚುವರಿ ಸೈನಿಕರು, ನಡೆಯುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಜಮ್ಮು ಹಾಗೂ ಕಾಶ್ಮೀರದ ವಿಚಾರದಲ್ಲಿ ನೆರೆಯ ಚೀನಾ ಹಾಗೂ ಪಾಕಿಸ್ತಾನ ದೇಶಗಳ ಜೊತೆ ಹಾಗೂ ಇಲ್ಲಿರುವ ಪಾಕ್ ಪ್ರೇಮಿಗಳ ಜೊತೆ ಕೇಂದ್ರ ಯಾವುದೇ ರಾಜಿ ಮಾಡಿಕೊಳ್ಳದೆ ಇದುವರೆಗೂ ಹಲವಾರು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ಅದರಲ್ಲಿಯೂ ಐತಿಹಾಸಿಕವಾಗಿ ಜಮ್ಮು ಹಾಗೂ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸುವ ಮೂಲಕ ಎಂತಹ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲಾದರೂ ಸಿದ್ದ ಎಂದು ತಿಳಿಸಿಕೊಟ್ಟಿದೆ.

ಅಷ್ಟೇ ಅಲ್ಲದೆ ಅದೇ ಸಮಯದಲ್ಲಿ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿದ್ದ ಚೀನಾ ಹಾಗೂ ಪಾಕಿಸ್ತಾನ ರಾಷ್ಟ್ರಗಳಿಗೆ ನಮ್ಮ ಸೇನೆಗೆ ಸಂಪೂರ್ಣ ಸ್ವತಂತ್ರ ನೀಡಿರುವ ಕಾರಣ ಸೇನೆಯು ಎರಡು ದೇಶಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡುವಲ್ಲಿ ಯಶಸ್ವಿಯಾಗಿದೆ. ಹಾಗೂ ಜನರ ಸ್ಥಿತಿಯನ್ನು ಇತರ ರಾಜ್ಯಗಳಂತೆ ಸಾಮಾನ್ಯ ಸ್ಥಿತಿಗೆ ಮರಳಿ ತರಲು ಅಭಿವೃದ್ಧಿ, ರಸ್ತೆ, ಶಾಲೆಗಳು ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜು ಗಳನ್ನೂ ಕೂಡ ನಿರ್ಮಾಣ ಮಾಡಲಾಗುತ್ತಿದೆ. ಹಾಗೂ ಹಲವಾರು ಕಂಪನಿಗಳು ಕೂಡ ಉದ್ಯೋಗ ನೀಡಲು ಜಮ್ಮು ಹಾಗೂ ಕಾಶ್ಮೀರದತ್ತ ಮುಖ ಮಾಡಿವೆ.

ಹೀಗೆ ಇಷ್ಟೆಲ್ಲಾ ನಡೆಯುತ್ತಿರುವ ಸಮಯದಲ್ಲಿ ಇದೀಗ ಮತ್ತೊಂದು ಯಾವುದೋ ಮಹತ್ವದ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂಬುದು ತಿಳಿದು ಬರುತ್ತಿದೆ. ಯಾಕೆಂದರೆ ಇದ್ದಕ್ಕಿದ್ದಂತೆ ಜಮ್ಮು ಹಾಗೂ ಕಾಶ್ಮೀರದ ಉತ್ತರ ಹಾಗೂ ಪೂರ್ವ ಪ್ರದೇಶಗಳಲ್ಲಿ ಬಾರಿ ಸಂಖ್ಯೆಯಲ್ಲಿ ಸೇನಾ ಜಮಾವಣೆ ಮಾಡಲಾಗುತ್ತಿದೆ. ಕಳೆದ ಕೇವಲ ಎರಡು ದಿನಗಳಿಂದ ಸುಮಾರು 200 ಹೆಚ್ಚು ಸೇನಾ ತುಕಡಿಗಳು ಜಮ್ಮು ಹಾಗೂ ಕಾಶ್ಮೀರವನ್ನು ತಲುಪಿವೆ ಎಂಬುದು ತಿಳಿದು ಬಂದಿದೆ. ಈ ಕುರಿತು ಎಲ್ಲೆಡೆ ಸುದ್ದಿಗಳು ಪ್ರಸಾರವಾಗುತ್ತಿದ್ದು, ಕಳೆದ ಬಾರಿ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸುವ ಮುನ್ನವೂ ಇದೇ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

Facebook Comments

Post Author: Ravi Yadav