ನಟಿಯರಾಗಿ ಮಿಂಚುವ ಮುನ್ನ ಡಾಕ್ಟ್ ಆಗಿದ್ದ ಟಾಪ್ 5 ನಟಿಯರು ಯಾರ್ಯಾರು ಗೊತ್ತೇ?? ಊಹಿಸದ ಹೆಸರುಗಳು ಲಿಸ್ಟ್ ನಲ್ಲಿ.

ನಮಸ್ಕಾರ ಸ್ನೇಹಿತರೇ ಕೆಲವರು ಜೀವನದಲ್ಲಿ ಅವರು ಏನೋ ಆಗಬೇಕೆಂದು ಹೊರಟಿರುತ್ತಾರೆ ಆದರೆ ವಿಧಿ ಅವರನ್ನು ಎಲ್ಲಿಂದ ಎಲ್ಲಿಗೋ ಕರೆದುಕೊಂಡು ಬಂದು ಯಾವುದೋ ಕೆಲಸದಲ್ಲಿ ಕೂರಿಸುತ್ತದೆ. ಇಂದು ನಾವು ಹೇಳುತ್ತಿರುವ ವಿಷಯದಲ್ಲಿ ಕೂಡ ಇಂತಹದೇ ವಿಚಾರಗಳು ಅಡಗಿವೆ. ಕೆಲ ನಟಿಯರು ಏನು ಆಗಬೇಕೆಂದು ಹೊರಟು ಆ ನಂತರ ಚಿತ್ರರಂಗಕ್ಕೆ ಬಂದು ಇಲ್ಲಿ ಸೂಪರ್ ಸ್ಟಾರ್ ನಟಿಯರ ಆಗಿರೋದು ನಾವು ನೋಡಿರುತ್ತೇವೆ.

ಅದೇ ಮಾದರಿಯಲ್ಲಿ ಇಂದು ನಾವು ಹೇಳಹೊರಟಿರುವ ವಿಷಯದಲ್ಲಿ 5 ನಟಿಯರು ಜೀವನದಲ್ಲಿ ಡಾಕ್ಟರ್ ಆಗಬೇಕೆಂದು ಅಂದುಕೊಂಡು ಡಾಕ್ಟರ್ ಪದವಿಯನ್ನು ಪಡೆದು ನಂತರ ಸಿನಿಮಾರಂಗಕ್ಕೆ ಎಂಟ್ರಿ ನೀಡಿರುವ ಬಗ್ಗೆ ನಾವು ಹೇಳಲು ಹೊರಟಿದ್ದೇವೆ. ಆ ನಟಿಯರು ಯಾರು ಯಾರು ಎಂದು ಪೂರ್ಣ ವಿವರಣೆಯೊಂದಿಗೆ ಹೇಳುತ್ತೇವೆ ಬನ್ನಿ.

ಮೊದಲನೆಯದಾಗಿ ಐಂದ್ರಿತಾ ರೇ ಐಂದ್ರಿತಾ ರೇ ರವರ ತಂದೆ ಸೈನ್ಯದಲ್ಲಿ ದಂತವೈದ್ಯ ರಾಗಿದ್ದರು. ಐಂದ್ರಿತಾ ರೈ ಕೂಡಾ ದಂತ ವೈದ್ಯಕೀಯ ಶಿಕ್ಷಣವನ್ನು ಪಡೆದು ಪದವಿಯನ್ನು ಕೂಡ ಪಡೆದಿದ್ದರು. ತಂದೆ ತಾನು ಕೂಡ ದಂತವೈದ್ಯ ಆಗುವ ಕನಸು ಕಂಡಿದ್ದರು ನಟಿ ಐಂದ್ರಿತಾ ರೇ. ನಂತರ ಕಾಲೇಜು ದಿನಗಳಲ್ಲಿ ಮಾಡಲಿಂಗ್ ಅನ್ನು ಮಾಡುತ್ತಿದ್ದರು. ಅದೇ ಮಾರ್ಗದ ಮೂಲಕ ಕನ್ನಡ ಚಿತ್ರರಂಗದ ಮೆರವಣಿಗೆ ಎಂಬ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟರು ಐಂದ್ರಿತಾ ರೇ. ಅದಾದ ನಂತರ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಐಂದ್ರಿತಾ ರೆ ರವರು ಹೆಸರುಗಳಿಸಿದ್ದು ನಿಮಗೆ ಗೊತ್ತೇ ಇದೆ.

ಅಪೂರ್ವ ಗೌಡ ಇವರು ಕೂಡ ಡೆಂಟಿಸ್ಟ್. ಈಗಲೂ ಕೂಡ ಡೆಂಟಿಸ್ಟ್ ಜೊತೆಗೆ ಚಿತ್ರರಂಗದಲ್ಲಿ ಕೂಡ ಕೆಲಸ ಮಾಡುತ್ತಿದ್ದಾರೆ ಅಪೂರ್ವ. ಇವರ ನಟನೆಯ ಫಸ್ಟ್ ರಾಂಕ್ ರಾಜು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಕಲೆಕ್ಷನ್ ಮೂಲಕ ಮಾತ್ರವಲ್ಲದೆ ಪ್ರೇಕ್ಷಕರ ಮೆಚ್ಚುಗೆಯನ್ನೂ ಕೂಡ ಪಡೆದಿತ್ತು. ಇನ್ನು ಮೂರನೆಯದಾಗಿ ಭಾರತಿ ನಟಿ ಭಾರತಿ ಕೂಡ ಎಂಬಿಬಿಎಸ್ ಪದವಿಧರೆ. ವೈದ್ಯಲೋಕದಲ್ಲಿ ಅತ್ಯುನ್ನತ ಶಿಕ್ಷಣ ಪಡೆದು ವೈದ್ಯಯಾಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ದುನಿಯಾ ವಿಜಯ್ ನಟನೆಯ ಜಯಮ್ಮನ ಮಗ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಖ್ಯಾತರಾಗಿದ್ದರು.

ಇನ್ನು ನಾಲ್ಕನೆಯದಾಗಿ ಅಪೂರ್ವ ಅರೋರ ವಿನಯ್ ರಾಜ್ ಕುಮಾರ್ ನಟನೆಯ ಸಿದ್ಧಾರ್ಥ ಚಿತ್ರದಲ್ಲಿ ನಾಯಕಿಯಾಗುವ ಮೂಲಕ ಕನ್ನಡಕ್ಕೆ ಕಾಲಿಟ್ಟ ಇವರು ನಂತರದ ದಿನಗಳಲ್ಲಿ ಯೋಗರಾಜ್ ಭಟ್ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಸೂಪರ್ ಹಿಟ್ ಚಿತ್ರ ಮುಗುಳ್ನಗೆ ಮೂಲಕ ಕನ್ನಡ ಚಿತ್ರರಂಗದ ದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡರು. ಇವರು ಕೂಡ ಎಂಬಿಬಿಎಸ್ ಪದವಿಯನ್ನು ಪಡೆದವರು. ಈಗ ಮುಖ್ಯವಾಗಿ ಅವರು ಬಾಲಿವುಡ್ ನಲ್ಲಿ ಅದರಲ್ಲೂ ಮುಖ್ಯವಾಗಿ ಯೂಟ್ಯೂಬ್ ಚಾನಲ್ ಗಳ ವೆಬ್ ಸೀರಿಸ್ ನಲ್ಲಿ ನಟಿಸಿ ಖ್ಯಾತಿಯನ್ನು ಹೊಂದಿದ್ದಾರೆ.

ಜಾನ್ವಿ ಜ್ಯೋತಿ, ಊರ್ವಿ ಹಾಗೂ ಕಾನೂರಾಯಣ ಚಿತ್ರವನ್ನು ನೋಡಿದವರಿಗೆ ಇವರ ಪರಿಚಯ ಇದ್ದೇ ಇರುತ್ತದೆ. ನಟಿ ಜಾನ್ವಿ ಜ್ಯೋತಿ ಕಷ್ಟಪಟ್ಟು ವೈದ್ಯ ಯಾಗಿ ನಂತರದ ದಿನಗಳಲ್ಲಿ ರಂಗಭೂಮಿ ಹಿನ್ನೆಲೆಯಿಂದ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ನೋಡಿದ್ರಲ್ಲ ಸ್ನೇಹಿತರೇ ಇದೇ ನಾವು ಹೇಳಹೊರಟಿದ್ದ ಆ 5 ನಟಿಯರು. ಮೊದಲಿಗೆ ವೈದ್ಯೆಯಾಗಿ ಶಿಕ್ಷಣವನ್ನು ಕಲಿತು ಇನ್ನು ಕೆಲವರು ಶಿಕ್ಷಣವನ್ನು ಕಲಿತು ಇಂದಿಗೂ ನಟನೆಯೊಂದಿಗೆ ವೈದ್ಯಲೋಕದ ವೃತ್ತಿಯನ್ನು ಕೂಡ ನಿರ್ವಹಿಸುತ್ತಿದ್ದಾರೆ. ಇವರಿಗೆ ನಮ್ಮ ಸಲಾಂ. ಯಾಕೆಂದರೆ ಎರಡು ಜವಾಬ್ದಾರಿಯುತ ವೃತ್ತಿಗಳನ್ನು ಸಮತೋಲನದಿಂದ ಕಾರ್ಯನಿರ್ವಹಿಸುವುದು ಅಷ್ಟೊಂದು ಸುಲಭದ ಮಾತಲ್ಲ ಇವರು ಅದನ್ನು ನಡೆಸಿಕೊಳ್ಳುತ್ತಿದ್ದಾರೆ. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

Post Author: Ravi Yadav