100 ಕ್ಕೂ ಹೆಚ್ಚು ಸಿನಿಮಾ, 60 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿರುವ ಈ ಖ್ಯಾತ ನಟಿಗೆ ಒಂದು ಕಾಲು ಇಲ್ಲ. ಯಾರು ಗೊತ್ತೇ??
100 ಕ್ಕೂ ಹೆಚ್ಚು ಸಿನಿಮಾ, 60 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿರುವ ಈ ಖ್ಯಾತ ನಟಿಗೆ ಒಂದು ಕಾಲು ಇಲ್ಲ. ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಈ ವೇಗದಲ್ಲಿ ಓಡುವ ಪ್ರಪಂಚದಲ್ಲಿ ಮೈಕೈಯೆಲ್ಲಾ ನೆಟ್ಟ ಇದ್ದರೂ ಸಹ ಜೀವನ ಸಾಗಿಸುವುದು ಅಥವಾ ಸ್ಪರ್ಧೆಯಲ್ಲಿ ಗೆಲ್ಲುವುದು ತುಂಬಾ ಕಷ್ಟವಾಗಿರುತ್ತದೆ. ಯಾಕೆಂದರೆ ಈ ಜಗತ್ತಿನಲ್ಲಿ ಕಾಂಪಿಟೇಶನ್ ಅಷ್ಟೊಂದು ವೇಗವಾಗುತ್ತದೆ. ಇನ್ನು ಅಂಗವಿಕಲರಿಗೆ ಅಂತೂ ದೂರದ ಬೆಟ್ಟ ನುಣ್ಣಗೆ ಎಂದಂತೆ ಎಂತಹ ವೇಗದ ಪ್ರಪಂಚದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಆದರೆ ಇಂದಿನ ವಿಷಯದಲಿ ನಾನು ಹೇಳಹೊರಟಿರುವ ನಟಿ ಅಂಗವಿಕಲ ರಾಗಿದ್ದರು ತಮ್ಮ ಜೀವನದಲ್ಲಿ ಯಶಸ್ಸು ಸಾಧಿಸಿದವರು.
ಈ ಪ್ರಪಂಚದಲ್ಲಿ ಸ್ವಾರ್ಥ ಎಂಬುದು ತಾಂಡವವಾಡುತ್ತಿದೆ, ಮಾನವೀಯತೆ ಮರುಗುತ್ತಿದೆ. ಈ ಸ್ವಾರ್ಥ ದುನಿಯಾದಲ್ಲಿ ಎಲ್ಲರೂ ತಮ್ಮ ಬಗ್ಗೆ ತಮ್ಮವರ ಬಗ್ಗೆ ಅಷ್ಟೇ ಯೋಚಿಸುತ್ತಾರೆ. ಬೇರೆಯವರ ಬಗ್ಗೆ ಯೋಚಿಸಲು ಅವರಿಗೆ ಸಮಯವಿರುವುದಿಲ್ಲ ಹಾಗೂ ಅದು ಅವರಿಗೆ ಇಷ್ಟವೂ ಇಲ್ಲ. ಈ ಸ್ವಾರ್ಥದ ದುನಿಯಾದಲ್ಲಿ ಕೂಡ ತಾನೇನು ಎಂಬುದನ್ನು ಸಾಧಿಸಿದ್ದಾರೆ ಈಕೆ. ಸಾಧಿಸುವ ದೃಢ ಮನಸ್ಸು ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದು ಇವರನ್ನು ನೋಡಿ ಕಲಿಯಬೇಕು.
ಚಿಕ್ಕ ವಯಸ್ಸಿನಿಂದಲೇ ಭರತ ನಾಟ್ಯದ ಕುರಿತಂತೆ ವಿಶೇಷವಾದ ಆಸಕ್ತಿ ಉಳ್ಳವರು ಇವರು. ಭರತ ನಾಟ್ಯವನ್ನು ಚಾಚುತಪ್ಪದೆ ಕಲಿತವರು. ತಮ್ಮ ಭರತನಾಟ್ಯ ದಿಂದ ಅದೆಷ್ಟು ಜನರು ವೀಕ್ಷಕರ ಮನಸ್ಸು ಗೆದ್ದವರು. ಆದರೆ ಇವರು 16 ವರ್ಷದವರಿದ್ದಾಗ ನಡೆದ ಅಪಘಾತದಲ್ಲಿ ಇವರ ಬಲಗಾಲನ್ನು ತೆಗೆಯಲಾಯಿತು. ಇವರಿಗೆ ಕೃತಕ ಕಾಲುಗಳನ್ನು ಜೋಡಿಸಲಾಯಿತು. ಆದರೂ ಧೈರ್ಯಗೆಡದೆ ಇವರು ಮುಂದಿನ ದಿನಗಳಲ್ಲಿ ನಟನೆಗೂ ಕೂಡ ಇಳಿದರು. ಚಿತ್ರದಲ್ಲಿ ಕೂಡ ಭರತನಾಟ್ಯ ಮಾಡುತ್ತಿದ್ದರು.
ನೋಡಿದವರು ಯಾರಿಗೂ ಅವರಿಗೆ ಕಾಲಿಲ್ಲ ಎಂಬ ಅನುಮಾನವೂ ಬರದಂತೆ ಇದ್ದರು. ಅಷ್ಟೊಂದು ನ್ಯಾಚುರಲ್ಲಾಗಿ ನಟಿಸುತ್ತಿದ್ದರು ಹಾಗೂ ತಮ್ಮ ಪ್ರತಿಭೆಯಿಂದ ಅದೆಷ್ಟು ಮನಸ್ಸುಗಳನ್ನು ರಂಜಿಸಿದವರು. ಕೃತಕ ಕಾಲು ಬಂದಮೇಲೂ ಸಹ ಅದೆಷ್ಟು ಭರತನಾಟ್ಯ ಕಾರ್ಯಕ್ರಮವನ್ನು ನೀಡಿದವರು. ತಮ್ಮ ಐವತ್ತು ವರ್ಷಗಳ ಅವಧಿಯಲ್ಲಿ ನೂರಾರು ಸಿನಿಮಾಗಳು 60ಕ್ಕೂ ಹೆಚ್ಚು ಧಾರವಾಹಿಗಳನ್ನು ಮಾಡಿದ್ದಾರೆ. ಆದರೂ ಇಂದಿನವರೆಗೂ ಯಾರಿಗೂ ತಮ್ಮ ಅಂಗವೈಕಲ್ಯದ ಬಗ್ಗೆ ಗೊತ್ತಾಗದಂತೆ ನಟಿಸಿಕೊಂಡು ಬಂದಿದ್ದಾರೆ.
ಮಾಡುತ್ತೇನೆಂಬ ಮನಸ್ಸಿದ್ದರೆ ಅಂತಹದನ್ನು ಕೂಡ ಮಾಡಬಹುದು ಎಂದು ಈ ನಟಿಸಿ ನಮಗೆ ಜೀವಂತವಾಗಿ ಹೇಳಿಕೊಟ್ಟಿದ್ದಾರೆ. ಇವರ ಸಾಧನೆ ಇಂದಿನ ಯುವಪೀಳಿಗೆಗೆ ಸ್ಪೂರ್ತಿದಾಯಕ. ಅದೇ ಅವರ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ತನ್ನ ಜೀವನ ಮುಗಿಯಿತು ಇನ್ನೇನು ಇಲ್ಲ ಎಂದು ಜೀವನವನ್ನು ಕೊನೆಗಾಣಿಸುತ್ತಿದ್ದರು. ಆದರೆ ಈಕೆ ಜೀವನಕ್ಕೆ ಸವಾಲೆಸೆದು ಜೀವನದಲ್ಲಿ ಬಂದಂತಹ ಕಷ್ಟಗಳನ್ನು ಗೆದ್ದು ಜೀವನದಲ್ಲಿ ವಿನ್ನರ್ ಆದವರು. ನಾವು ಮಾತನಾಡುತ್ತಿರುವುದು ಖ್ಯಾತ ನಟಿ ಸುಧಾ ಚಂದ್ರ ಅವರ ಬಗ್ಗೆ.
ಬಾಲಿವುಡ್ನಲ್ಲಿ ಇಂದಿಗೂ ಹಲವಾರು ಧಾರಾವಾಹಿಗಳಲ್ಲಿ ಈಕೆ ಕಾಣಸಿಗುತ್ತಾರೆ ನಿಮಗೆ. ಇಂದಿಗೂ ಹಸನ್ಮುಖಿಯಾಗಿ ಕಾಣುವ ಇವರು ತಮ್ಮ ಜೀವನದಲ್ಲಿ ನಡೆದಿರುವ ಈ ಘಟನೆಯನ್ನು ಎಲ್ಲಿಯೂ ಕಾಣದಂತೆ ಮುಚ್ಚಿಟ್ಟಿದ್ದಾರೆ. ಏಕೆ ನಮಗೆ ಜೀವಂತವಾದ ರೋಲ್ ಮಾಡಲ್ ಎಂದರೂ ತಪ್ಪಲ್ಲ. ಎಂತಹ ಕಷ್ಟವಿದ್ದರೂ ಎದೆಗುಂದದೆ ಅದನ್ನು ಎದುರಿಸಬೇಕೆಂದು ನಟಿ ಸುಧಾ ಚಂದ್ರನ್ ಅವರನ್ನು ನೋಡಿ ಕಲಿಯಬೇಕು. ಸುಧಾ ಚಂದ್ರನ್ ಅವರ ಬಗ್ಗೆ ನಿಮಗಿರುವ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ನಮಗೆ ತಪ್ಪದೆ ತಿಳಿಸಿ.